Neeraj Chopra: ಶೂಟರ್ ಮನು ಭಾಕರ್ ಮತ್ತು ನೀರಜ್ ಚೋಪ್ರಾ ಕ್ರಷ್, ಮದುವೆ ಯಾವಾಗ ಅಂತಿದೆ ಸೋಷಿಯಲ್ ಮೀಡಿಯಾ !

Share the Article

Neeraj Chopra: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಶೂಟ‌ರ್ ಮನು ಭಾಕ‌ರ್ ಗಮನ ಸೆಳೆದಿದ್ದರು. ಶೂಟಿಂಗ್ ವೈಯಕ್ತಿಕ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದರೆ, ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥೋ ಪಂದ್ಯದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಎಲ್ಲಾ ಭಾರತೀಯರು ಈ ಇಬ್ಬರು ಸ್ಟಾರ್ ಕಡೆಗೆ ನೋಡುತ್ತಿದೆ.

ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ ಹಾಗೂ ಎರಡು ಪದಕಗಳ ಒಡತಿ ಮನು ಭಾಕರ್‌ ಪರಸ್ಪರ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜತೆಗೆ ಈ ಸನ್ನಿವೇಶಕ್ಕೆ ತಾಳ ಮೇಳ ಕೂಡಿ ಬರುವಂತೆ ಮನು ಅವರ ತಾಯಿ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಕೂಡಾ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ನೀರಜ್‌ ಮತ್ತು ಮನು ಪರಸ್ಪರ ಮಾತನಾಡುತ್ತಿದ್ದರೂ, ಪರಸ್ಪರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ. ಹೀಗಾಗಿ ಇಬ್ಬರ ನಡುವೆ ಕ್ರಷ್‌ ಆಗಿದೆ ಎಂದೇ ಸೋಶಿಯಲ್ ಮೀಡಿಯಾ ಮಾತನಾಡುತ್ತಿದೆ.

ಇಷ್ಟೇ ಅಲ್ಲದೆ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಚೋಪ್ರಾರನ್ನು ಭೇಟಿಯಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಪ್ಯಾರಿಸ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದು, ಇದರ ತುಣುಕುಗಳು ವೈರಲ್ ಆಗಿವೆ.

ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಶೂಟರ್ ಮನು ಭಾಕರ್ ಇತಿಹಾಸ ಬರೆದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೂ ಸತತ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಅತ್ತ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌, ಈ ಬಾರಿ ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಕ್ರಶ್ ಕನ್ಫರ್ಮ್, ಮದುವೆ ಪಕ್ಕಾ?
ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್, ನೀರಜ್ ಕೈಯನ್ನು ಹಿಡಿದುಕೊಂಡು ಆತ್ಮೀಯವಾಗಿ ಮಾತನಾಡುವುದನ್ನು ನೋಡಬಹುದು. ಎಕ್ಸ್‌ನಲ್ಲಿ ಲಕ್ಷಾಂತರ ಮಂದಿ ಈ ದೃಶ್ಯವನ್ನು ವೀಕ್ಷಿಸಿದ್ದಾರೆ. ನೀರಜ್‌ ಕೈ ಹಿಡಿದು ತಮ್ಮ ತಲೆಯ ಮೇಲೆ ಇರಿಸುವುದನ್ನು ದೃಶ್ಯದಲ್ಲಿ ನೋಡಬಹುದು. ಈ ತೀರಾ ಆತ್ಮೀಯತೆಗೆ ನೆಟ್ಟಿಗರು ಭರ್ಜರಿ ತಮಾಷೆ ಮಾಡಲು ಆರಂಭಿಸಿದ್ದಾರೆ. ಮನು ಅವರು ತಾಯಿ ಚೋಪ್ರಾ ಅವರನ್ನು ತಮ್ಮ ಮಗಳಿಗೆ ಸೂಕ್ತವಾದ ಜೋಡಿ ಎಂದು ಆಯ್ಕೆ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

“ಮದುವೆಯ ಮಾತುಕತೆ ನಡೀತಿದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಭಾರತೀಯ ತಾಯಿ ತನ್ನ ಮಗಳ ಮದುವೆಯ ಬಗ್ಗೆ ಯಶಸ್ವಿ ಹುಡುಗನೊಂದಿಗೆ ಮಾತನಾಡುತ್ತಿದ್ದಾರೆ” ಎಂದು ಇನ್ನೊಬ್ಬರು ದನಿಗೂಡಿಸಿದ್ದಾರೆ. ಇಬ್ಬರ ಮಧ್ಯೆ ಕ್ರಷ್‌ ಆಗಿರಬಹುದು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಯಾರಿಗೆ ಗೊತ್ತು, ಸಿನಿಮಾ ನಟ ನಟಿ ಮದುವೆಯಾಗೋದು ಕಾಮನ್ ಆಗಿರುವಾಗ ಈ ಇಬ್ಬರು ಕ್ರೀಡಾ ತಾರೆಗಳು ಕಿರುಬೆರಳು ಬೆಸೆದುಕೊಂಡು ಸಪ್ತಪದಿ ತುಳಿದರೆ ಅಚ್ಚರಿ ಏನಿಲ್ಲ.

Leave A Reply