1000 Feet Bore: 1000 ಅಡಿಯ ಬೋರ್ವೆಲ್ ಹೇಗಿರುತ್ತೆ ಗೊತ್ತಾ?! ವಿಡಿಯೋ ನೋಡಿದ್ರೆ ಮೈ ರೋಮಾಂಚನವಾಗೋದು ಪಕ್ಕಾ!!

Share the Article

1000 Feet Bore : ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಭಾರತದಲ್ಲಿ ಅನೇಕ ಕುಟುಂಬಗಳು ಕೃಷಿಯನ್ನು ನಂಬಿ ಬದುಕುತ್ತಿವೆ. ಕೃಷಿ ಮಾಡಲು ಮುಖ್ಯವಾಗಿ ಬೇಕಾಗಿರುವಂಥದ್ದು ನೀರು. ಆದರೆ ಭಾರತದ ಅನೇಕ ಕಡೆಗಳಲ್ಲಿ ನೀರಿನ ಸೌಲಭ್ಯವಿಲ್ಲ. ಹೀಗಾಗಿ ರೈತರು ಬೋರ್ವೆಲ್ ಗಳನ್ನು ಕೊರೆಸಿ ತಮ್ಮ ಕೃಷಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಳ್ಳುತ್ತಾರೆ.

ಮೊದಲೆಲ್ಲಾ ಬೋರು ಕೊರೆಸುವಾಗ 150, 200, 250, 300ಅಡಿಗೆಲ್ಲಾ ನೀರು ಸಿಕ್ಕಿಬಿಡುತ್ತಿತ್ತು. ಆದರಿಂದು 700, 800, 1000, ಅದಕ್ಕಿಂತಲೂ ಹೆಚ್ಚು ಅಡಿ ತೆಗಿಸಿದರೂ ನೀರು ಸಿಗುತ್ತಿಲ್ಲ ಎಂಬುದು ದುಂರತದ ವಿಚಾರ. ಮನುಷ್ಯನ ಅನಾಚಾರಗಳಿಅಂದಲೇ ಹೀಗಾಗಿರುವುದು ಸತ್ಯ ಸಂಗತಿ. ತನ್ನ ಸ್ವಾರ್ಥಕ್ಕಾಗಿ ಕೆರೆ, ಕಟ್ಟೆಗಳನ್ನು ಮುಚ್ಚಿ, ಕಾಡನ್ನು ನಾಶಗೊಳಿಸಿ ಭೂಮಿಯಲ್ಲಿ ಅಂತರ್ಜಲವೇ ಇಲ್ಲದಂತೆ ಮಾಡಿದ್ದಾನೆ. ಹೀಗಾಗಿ 1000 ಅಡಿ ಮಾತ್ರ ಅಲ್ಲ 2000 ಅಡಿ ಕೊರೆದರೂ ನೀರು ಸಿಗುವುದು ಅನುಮಾನ ಬಿಡಿ. ಅದೇನೆ ಇರಲಿ ಬೋರು ಕೊರೆಸಿದಾಗ ಅದರ ಒಳಗೆ ಹೇಗಿರುತ್ತದೆ, ನೀರು ಸಂಗ್ರಹ ಆಗೋದು ಹೇಗೆ? ಅಷ್ಟು ಆಳದಿಂದ ಮೇಲೆ ನೀರು ಬರೋದು ಹೇಗೆ ಎಂಬುದು ಹಲವರ ಕುತೂಹಲ. ಅಂತೆಯೇ ಇದೀಗ ನಾವು ಬರೋಬ್ಬರಿ 1000 ಅಡಿ ಆಳದ ಬೋರ್ವೆಲ್(1000 Feat Bore) ಹೇಗಿರುತ್ತದೆ ಎಂದು ವ್ಯಕ್ತಿಯೊಬ್ಬ ಮಾಡಿದ ವಿಡಿಯೋ ಬಗ್ಗೆ ನಿಮಗೆ ಹೇಳಲಿದ್ದೇವೆ.

ಹೌದು, ಇಲ್ಲೊಬ್ಬ ವ್ಯಕ್ತಿ 1000 ಅಡಿಯ ಕೊಳವೆ ಬಾವಿಯೊಳಗೆ ಏನಿದೆ ಎಂದು ನೋಡುವ ಕುತೂಹಲದಿಂದ ಸಣ್ಣ ಕ್ಯಾಮೆರಾವನ್ನು ಇಳಿಸಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸಾಮಾನ್ಯವಾಗಿ ಬೋರ್​ವೆಲ್​ನ ಕಬ್ಬಿಣದ ಕೇಸಿಂಗ್ ಪೈಪ್ ಮನುಷ್ಯನ ತಲೆಗೆ ಹೊಂದಿಕೊಳ್ಳುವಷ್ಟು ಅಗಲವಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇಲ್ಲೊಬ್ಬರು GoPro ಕ್ಯಾಮೆರಾವನ್ನು ಕೆಳಗಿಳಿಸಿದ್ದಾರೆ. ಭೂಮಿಯೊಳಗೆ ಏನಿದೆ ಎಂಬುದನ್ನು ತೋರಿಸಲು ಅವರು ಬರೋಬ್ಬರಿ 1,000 ಅಡಿ ಆಳದ ಬೋರ್‌ವೆಲ್‌ಗೆ GoPro ಕ್ಯಾಮೆರಾವನ್ನು ಕಳುಹಿಸಿ ಕುತೂಹಲ ತಣಿಯುವಂತೆ ಮಾಡಿದ್ದಾರೆ.

ಕ್ಯಾಮರಾ ಕೆಳಗೆ ಇಳಿಸಿದ್ದು ಹೇಗೆ?
ಇನ್ನು ಕ್ಯಾಮೆರಾ ಕೆಳಗಿಳಿಸುವ ಮೊದಲು ಬಹಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಳಿಸಲಾಗಿದೆ. ಇದಕ್ಕಾಗಿ ಮೊದಲು ಕ್ಯಾಮೆರಾವನ್ನು ಪ್ಲಾಸ್ಟಿಕ್ ಬಾಕ್ಸ್​ನೊಂದಿಗೆ ಇಟ್ಟಿದ್ದಾನೆ. ನಂತರ ಕೆಳಗೆ ಕತ್ತಲಾಗಿರುವುದರಿಂದ ಟಾರ್ಚ್ ಹೊತ್ತಿಸಿ ಕ್ಯಾಮರಾ ಬಾಕ್ಸ್ ಜೊತೆಗೆ ಕವರ್ ನಲ್ಲಿ ಪ್ಯಾಕ್ ಮಾಡುತ್ತಾರೆ. ಅದಕ್ಕೆ ನಂತರ ಉದ್ದವಾದ ಹಗ್ಗವನ್ನು ಕಟ್ಟಿದರು. ಆ ಬಳಿಕ ಕ್ಯಾಮರಾವನ್ನು ನಿಧಾನವಾಗಿ ಬೋರ್​​ವೆಲ್​ ಒಳಗೆ ಇಳಿಸುತ್ತಾರೆ. ಇದು ಒಳಗಿರುವ ದೃಶ್ಯಗಳನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡುತ್ತದೆ.

ಇನ್ನು ಕ್ಯಾಪ್ಷನ್​ನಲ್ಲಿ 1000 ಅಡಿ ಬರೆದಿದ್ದರೂ ಕ್ಯಾಮೆರಾ ಇಳಿಸಿದ್ದು ಮಾತ್ರ ಕೇವಲ 200 ಅಡಿ. ಭಯದಿಂದ ಕ್ಯಾಮೆರಾ ಮುಂದೆ ಇಳಿಸಲು ಹಿಂದೇಟು ಹಾಕಿದರಂತೆ ಆ ವ್ಯಕ್ತಿ. ಆದರೆ ಈ ವಿಡಿಯೋದಲ್ಲಿ ನಾವು ಪೈಪ್‌ಗಳು, ಕಲ್ಲುಗಳು, ಹುಲ್ಲು ಮತ್ತು ನೀರನ್ನು ನೋಡಬಹುದು. ಕೇಸಿಂಗ್ ಪೈಪ್​ ತುಂಬಾನೇ ಚಿಕ್ಕದಾಗಿದ್ದು, ಕೆಳಗೆ ಇಳಿಯುತ್ತಿದ್ದಂತೆ ಕಲ್ಲಿನ ಪದರ ಕಾಣಿಸಿಕೊಳುತ್ತದೆ.

ಅಂದಹಾಗೆ Outof Mind Experiment (@outofmindexperiment) ಎಂಬ Insta ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಕೆಲವೇ ದಿನಗಳಲ್ಲಿ ಇದು ಮೂರು ಕೋಟಿಗೂ ಹೆಚ್ಚು ವೀಕ್ಷಣೆ ಮತ್ತು 12 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವರು ಬಗೆಬಗೆಯಾಗಿ ಕಮೆಂಟ್ ಕೂಡ ಮಾಡುತ್ತಿದ್ದಾರೆ.

 

View this post on Instagram

 

A post shared by OUT OF MIND (@outofmindexperiment)

1 Comment
  1. Terence Trizarry says

    It is really a nice and useful piece of info. I’m glad that you shared this helpful information with us. Please keep us up to date like this. Thank you for sharing.

Leave A Reply

Your email address will not be published.