Olympics : ಒಲಂಪಿಕ್’ನಲ್ಲಿ ರಾತ್ರೋರಾತ್ರಿ ವಿನೇಶ್ ಪೋಗಟ್ ತೂಕ ಹೆಚ್ಚಾಗಿದ್ದು ಹೇಗೆ? ಕೋಚ್ ಬಿಚ್ಚಿಟ್ಟ ಸತ್ಯ ಏನು?

Olympics : ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಸಂಗತಿ ಸದ್ದು ಮಾಡುತ್ತಿದೆ. ವಿನೇಶ್ ಫೋಗಟ್ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಅನರ್ಹಗೊಂಡದ್ದು ಇಡೀ ದೇಶದ ಜನರ ಮನ ಕಲುಕಿದೆ. ಆ ಧೀರ ಹೆಣ್ಣುಮಗಳಿಗೆ, ಅವಳ ಶ್ರಮಕ್ಕೆ ನ್ಯಾಯ ಸಿಗಲೆಂದು ಇಡೀ ಭಾರತ ಬೇಡುತ್ತಿದೆ. ವಿನೇಶ್ ಫೋಗಟ್‌ಗೆ(Vinesh Phogat) ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಕ್ರೀಡಾಭಿಮಾನಿಗಳಿಂದ ನೈತಿಕ ಬೆಂಬಲ ಸಿಕ್ಕಿದೆ.
ಈ ನಡುವೆ ಹಿಂದಿನ ದಿನ ಸರಿ ಸಿದ್ದ ವಿನೇಶ್ ಪೋಗಟ್ ತೂಕ ರಾತ್ರೋ ರಾತ್ರಿ ಹೆಚ್ಚಾಗಿದ್ದು ಹೇಗೆ ಎಂದು ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ. ಹೌದು, ಮೊದಲ ಪಂದ್ಯಕ್ಕೂ ಮುನ್ನ ವಿನೇಶ್ ತೂಕ 50 ಕೆಜಿಗಿಂತ ಕಡಿಮೆಯಿತ್ತು, ಆದರೆ ಸೆಮಿಫೈನಲ್ ಗೆದ್ದ ನಂತರ ಅವರ ತೂಕ 52 ಕೆಜಿ ದಾಟಿತ್ತು. ಕೆಲವೇ ಗಂಟೆಗಳಲ್ಲಿ ತೂಕ ಹೆಚ್ಚಿಸಿಕೊಂಡಿದ್ದು ಹೇಗೆ? ಎಂದು ಎಲ್ಲರೂ ಮರುಗುತ್ತಿದ್ದಾರೆ.
ವಿನೇಶ್‌ಗಾದ ಆಘಾತದಿಂದ ವಿಶೇಷವಾಗಿ ಕುಸ್ತಿ ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ಹುಡುಕುತ್ತಿರುವ ಹುಡುಗಿಯರು ಮತ್ತು ಅವರ ತರಬೇತುದಾರರ ಮೇಲೆ ದುಃಖದ ಪರ್ವತವೇ ಒಡೆದು ಬಿದ್ದಿದೆ. ಈ ಮಧ್ಯೆ, 40 ವರ್ಷಗಳಿಂದ ಮೀರತ್‌ನಲ್ಲಿ ಬಾಲಕಿಯರನ್ನು ಕುಸ್ತಿ ಚಾಂಪಿಯನ್‌ಗಳನ್ನಾಗಿ ಮಾಡುತ್ತಿರುವ ಜಬರ್ ಸಿಂಗ್ ಸೋಮ್(Jabar Singh Som) ಅವರು ಈ ಸುದ್ದಿಯಿಂದ ತೀವ್ರ ದುಃಖಿತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೋಚ್ ಒಂದು ಸಣ್ಣ ತಪ್ಪು ಎಲ್ಲಾ ಭರವಸೆಗಳನ್ನು ಹಾಳುಮಾಡಿದೆ ಎಂದು ಅವರು ದುಃಖದಿಂದ ಹೇಳುತ್ತಾರೆ. ವಿನೇಶ್ ಅವರು 50 ಕೆಜಿ ವಿಭಾಗದಲ್ಲಿ ಆಡುತ್ತಿದ್ದರಿಂದ, ರಾತ್ರಿಯಲ್ಲಿ ಏನನ್ನಾದರೂ ತಿನ್ನುವುದರಿಂದ ತೂಕವು ಹೆಚ್ಚಾಗುವ ಆತಂಕವಿತ್ತು, ಒಂದು ವೇಳೆ ತಿಂದರೆ ಕೆಲವು ಗಂಟೆಗಳವರೆಗೆ ತೂಕ ಕಡಿಮೆಯಾಗುವುದಿಲ್ಲ, ಆದರೆ ವಿನೇಶ್ ರಾತ್ರಿಯಿಡೀ ಒಂದು ತೊಟ್ಟು ನೀರನ್ನೂ ಕುಡಿದಿಲ್ಲ ಎಂದು ತರಬೇತುದಾರ ಜಬರ್ ಸಿಂಗ್ ಸೋಮ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಸೆಮಿಫೈನಲ್ ಪಂದ್ಯದ ನಂತರ ವಿನೇಶ್ ಫೋಗಟ್ ಕಡಿಮೆ ಆಹಾರವನ್ನು ತೆಗೆದುಕೊಂಡರು. ಇದರಿಂದಾಗಿ ಆಕೆಯ ತೂಕ ಇದ್ದಕ್ಕಿದ್ದಂತೆ ಹೆಚ್ಚಾಯಿತು. ವಿನೇಶ್ ಫೋಗಟ್ ತೂಕ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಪ್ಯಾರಿಸ್‌ನ ವರದಿಗಳ ಪ್ರಕಾರ, ಸ್ಟೀಮ್ ಕೋಣೆಯಲ್ಲಿ ಗಂಟೆಗಳ ಕಾಲ ಕುಳಿತುಕೊಂಡಿದ್ದಾರೆ. ರನ್ನಿಂಗ್, ಸ್ಕಿಪ್ಪಿಂಗ್ ಜತೆಗೆ ಸೈಕ್ಲಿಂಗ್ ಕೂಡ ಮಾಡಿದರಂತೆ. ಕೊನೆಗೆ ವಿನೇಶ್ ತಲೆಗೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ. ಸ್ವಲ್ಪ ರಕ್ತವನ್ನೂ ತೆಗೆದಿದ್ದಾರೆ. ಆದರೆ ತೂಕ 50 ಕೆಜಿ 100 ಗ್ರಾಂ ಗಿಂತ ಹೆಚ್ಚಿರುವುದು ಕಂಡುಬಂದಿದೆ.
ಕಾಯ್ದಿರಿಸಿದ ತೀರ್ಪು:
ಪ್ಯಾರಿಸ್ ಒಲಿಂಪಿಕ್ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಳಿಸಿದ ಒಲಿಂಪಿಕ್ ಸಮಿತಿ ನಿರ್ಧಾರ ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ನಾಳೆ ಪ್ಯಾರಿಸ್ ಒಲಿಂಪಿಕ್ ಸಮಾರೋಪ ಸಮಾರಂಭ ಇದ್ದು, ಇದಕ್ಕೂ ಮೊದಲು ತೀರ್ಪು ಪ್ರಕಟವಾಗಲಿದೆ.
ಭಾರತ ಒಲಿಂಪಿಕ್ ಅಸೋಸಿಯೇಷನ್ ಹೇಳಿಕೆ ಪ್ರಕಾರ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು IOA ಸುಮಾರು 3 ಗಂಟೆಗಳ ಕಾಲ ಮಾತುಕತೆಯನ್ನು ಆಲಿಸಿದೆ. ವಿಚಾರಣೆಯ ಮೊದಲು ಎಲ್ಲಾ ಸಂಬಂಧಿತ ಪಕ್ಷಗಳು ತಮ್ಮ ವಿವರವಾದ ಕಾನೂನು ಅಫಿಡವಿಟ್‌ಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಸಾಳ್ವೆ, ಸಿಂಘಾನಿಯಾ ಮತ್ತು ಕ್ರೀಡಾ ಕಾನೂನು ತಂಡಕ್ಕೆ ತಮ್ಮ ಸಹಕಾರ ಮತ್ತು ವಿಚಾರಣೆಯ ಸಮಯದಲ್ಲಿ ವಾದ ಮಂಡಿಸಿದರು.