Raid on belagavi Jail: ಹಿಂಡಲಗಾ ಜೈಲ್ ಮೇಲೆ ರೈಡ್‌: ಬರೋಬ್ಬರಿ 260ಕ್ಕೂ ಹೆಚ್ಚು ಪೊಲೀಸರಿಂದ ದಾಳಿ : ದಾಳಿ ಹಿಂದಿನ ಕಾರಣ ಏನು..?

Share the Article

Raid on belgavi Jail: ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲು ಬಗ್ಗೆ ಎಲ್ಲರೂ ಕೇಳೆ ಇರುತ್ತಾರೆ. ಯಾಕೆಂದರೆ ಇದು ಸದಾ ಒಂದಲ್ಲ ಒಂದು ವಿಚಾರಕ್ಕೆ ಪ್ರಚಾರದಲ್ಲಿ ಇರುತ್ತದೆ. ರಾಜ್ಯದ ಅನೇಕ ಖೈದಿಗಳನ್ನು ಅಲ್ಲಿ ಇಡಲಾಗುತ್ತದೆ. ಹಾಗೆ ಅಲ್ಲಿ ನಡೆಯುವ ಅಕ್ರಮಗಳು ಜಾಸ್ತಿ. ಪೊಲೀಸ್‌ ಅಧಿಕಾರಿಗಳು ಎಷ್ಟೇ ಹದ್ದಿನ ಕಣ್ಣಿಟ್ಟು ಎಚ್ಚರಿಕೆ ವಹಿಸಿದರೂ, ಖೈದಿಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಹಿಂಡಲಗಾ ಗ್ರಾಮದಲ್ಲಿರುವ ಈ ಜೈಲಿಗೆ ಬರೋಬ್ಬರಿ 260ಕ್ಕೂ ಅಧಿಕ ಪೋಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಇದರ ನೇತೃತ್ವವನ್ನು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ವಹಿಸಿಕೊಂಡಿದ್ದರು. ಈ ವೇಳೆ ಖೈದಿಗಳಿಂದ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಇವರಿಗೆ ಸಾಥ್‌ ನೀಡಿದ್ದಾರೆ. ಇವರೊಂದಿಗೆ 260ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಅವರೊಂದಿಗೆ ಸಿಬ್ಬಂದಿಗಳು ದಾಳಿಗೆ ಕೈ ಜೋಡಿಸಿದ್ದಾರೆ. ಖೈದಿಗಳಿಂದ 3 ಚೂರಿಗಳು, ಸ್ಮಾಲ್ ಹೀಟರ್ ವೈಯರ್ ಬಂಡಲ್, ವಿದ್ಯುತ್ ಒಲೆ, ತಂಬಾಕು ಪ್ಯಾಕೇಟ್, ಸಿಗರೇಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ದಾಳಿ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಈ ತನಿಖೆ ಮುಗಿದ ಬಳಿಕ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.