of your HTML document.

Love Dhoka: ಆಷಾಢ ಕಳೆದು ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಎಂದು ಓಡಿಹೋದ ಪ್ರಜ್ವಲ್!

Love Dhoka: ಆಷಾಢ ಕಳೆದು ಶ್ರಾವಣ ಬಂದ್ರೆ ಮದುವೆ ಆಗಿ ಇಬ್ಬರು ಒಟ್ಟಿಗೆ ಜೀವನ ಮಾಡೋಣ ಅಂತ ನಂಬಿಸಿ ಪ್ರಜ್ವಲ್ ಎಂಬಾತ ಎಸ್ಕೇಪ್ ಆಗಿದ್ದಾನೆ (Love Dhoka) ಎಂದು, ಎರಡು ಮಕ್ಕಳಿರುವ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಮೋಸ ಹೋದ ಮಹಿಳೆಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಹೀಗಿದ್ದರೂ ಪ್ರಜ್ವಲ್ ಎಂಬಾತನ ಜೊತೆ ಮಹಿಳೆ ಸಂಬಂಧದಲ್ಲಿ ಇದ್ದಳು. ಆದರೆ ಆತ ನಂಬಿಸಿ ಮೋಸ ಮಾಡಿ ಪರಾರಿಯಾಗಿದ್ದಾನೆ ಎಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ.

ಕೆಲ ವರ್ಷಗಳ ಹಿಂದೆಯಷ್ಟೇ ಈ ಮಹಿಳೆ ಗಂಡ ಹೊಡೆಯುತ್ತಾನೆಂದು ದೂರಿ ಆತನಿಂದ ದೂರವಾಗಿದ್ದಳು. ತವರು ಮನೆಯಲ್ಲಿ ವಾಸ ಮಾಡಿದ್ದ ಮಹಿಳೆ ಅಲ್ಲೂ ಮನಸ್ತಾಪ ಮಾಡಿಕೊಂಡು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಳು.

ನಂತರ ಜೀವನ ಸಾಗಿಸಲು ಬೆಂಗಳೂರಿಗೆ ಬಂದು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯ  ರೀಲ್ಸ್ ಮಾಡುತ್ತಿದ್ದಳು. ಆಕೆಯ ಜೀವನ ಅದು ಹೇಗೋ ನಡೆಯುತ್ತಿತ್ತು. ಆದರೆ ಈ ನಡುವೆ ರೀಲ್ಸ್ ನಿಂದಾಗಿ ಪ್ರಜ್ವಲ್ ಎಂಬಾತ ಈಕೆಗೆ ಪರಿಚಯವಾಗಿ, ನಂತರ ಇಬ್ಬರ ನಡುವೆ ಪ್ರೀತಿಯಾಗಿತ್ತು. ಅಲ್ಲದೇ ಮಹಿಳೆಗೆ ಮದುವೆಯಾಗಿರುವ ವಿಚಾರ ತಿಳಿದಿದ್ದರೂ ಪ್ರಜ್ವಲ್ ಆಕೆಯೊಡನೆ ಸಂಬಂಧದಲ್ಲಿ ಇದ್ದನು.

ಇನ್ನು ಮಹಿಳೆ ನೋಡಲು ಚೆನ್ನಾಗಿಲ್ಲವಾದರೂ ನಾನು ಮದುವೆಯಾಗುತ್ತೇನೆ ಎಂದು ಮಹಿಳೆ ತಾಯಿ ಬಳಿಯೂ ಪ್ರಜ್ವಲ್ ಮದುವೆ ಪ್ರಸ್ತಾಪ ಮಾಡಿದ್ದನಂತೆ. ಆಷಾಡ ಕಳೆದು ಶ್ರಾವಣ ಮಾಸದ ಬಳಿಕ ಮದುವೆಯಾಗುತ್ತೇನೆ ಎಂದು ಹೇಳಿದ್ದ ಪ್ರಜ್ವಲ್ ಮೂರು ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾಡಿದ್ದಾನೆ. ನಂತರ ಮೆಲ್ಲಗೆ ಜೂಟ್ ಆಗಿದ್ದಾನೆ.

ಇದೀಗ ಆಂಟಿ ಕರೆ ಮಾಡಿದಾಗ ಗಂಡನೊಂದಿಗೆ ಹೋಗಿ ಜೀವನ ಮಾಡಲು ತಿಳಿಸಿದ್ದಾನೆ. ಆಕೆಯೊಂದಿಗೆ ಜಗಳ ಮಾಡಿದ್ದಾನೆ. ಆದರೆ ಮಹಿಳೆ ಮಾತ್ರ ಪ್ರಜ್ವಲ್ ಬೇಕು ಅಂತ ಪಟ್ಟು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.