Anushka Sharma: ಕೊಹ್ಲಿಯನ್ನು ಮದುವೆ ಆಗುವುದಕ್ಕೂ ಮೊದಲೇ ನಾನು ತಾಯಿ ಆಗಿದ್ದೆ, ಆ ನಟನೇ ಇದಕ್ಕೆ ಕಾರಣ !!

Share the Article

Anushka Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅದರಂತೆ ಬಾಲಿವುಡ್‌ ಬೆಡಗಿ ಅನುಷ್ಕಾ ಬಗ್ಗೆಯೂ ವಿಶೇಷ ಪರಿಚಯದ ಅಗತ್ಯವಿಲ್ಲ. ಇಬ್ಬರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ದಂಪತಿಗಳಂತೂ ಇಂಡಿಯಾದ ಎಲ್ಲರಿಗೂ ಫೇವರಿಟ್ ಬಿಡಿ. ಅವರ ಹೊಂದಾಣಿಕೆ, ನಡವಳಿಕೆ ಎಲ್ಲರಿಗೂ ಅಚ್ಚುಮೆಚ್ಚು. ಆದರೀಗ ನಟಿ ಅನುಷ್ಕಾ(Anushka Sharma) ತಾನು ಮದುವೆಗೂ ಮೊದಲೆ ತಾಯಿ ಆಗಿದ್ದೆ, ಇದಕ್ಕೆ ಆ ಒಬ್ಬ ನಟ ಕಾರಣ ಎಂದು ಅಚ್ಚರಿ ವಿಚಾರವೊಂದನ್ನು ಹೇಳಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ನಟಿ ಅನುಷ್ಕಾ ‘ನಾನು ಕೋಹ್ಲಿಯನ್ನು ಮದುವೆ ಆಗುವುದಕ್ಕೂ ಮುಂಚೆಯೇ ತಾಯಿಯಾಗಿದ್ದೆ ಇದಕ್ಕೆಲ್ಲ ಕಾರಣ ರಣಬೀರ್ ಕಪೂರ್.‌ ಆತನನ್ನು ಮಗುವಂತೆ ನೋಡಿಕೊಂಡಿದ್ದೇ ಇದಕ್ಕೆ ಕಾರಣ. ನನ್ನಲ್ಲಿ ಒಬ್ಬ ಒಳ್ಳೆಯ ತಾಯಿ ಇದ್ದಾಳೆ ಎಂಬುದನ್ನು ಪರಿಗಣಿಸಿದ್ದೇ ಆತನ ಚೇಷ್ಠೆ ಸಹಿಸಿಕೊಂಡಾಗಿನಿಂದ” ಎಂದು ಹೇಳಿಕೆ ನೀಡಿದ್ದರು.

ಅಂದಹಾಗೆ ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌ʼನಲ್ಲಿ ಅವರು ಮೊದಲು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ, ರಣಬೀರ್ ಕಪೂರ್ ಮಗುವಿನಂತೆ ಇದ್ದ, ನಾನು ಆತನಿಗೆ ತಾಯಿಯಂತೆ ಇದ್ದೆ ಎಂದು ಅನುಷ್ಕಾ ಹೇಳಿದ್ದಾರೆ.

Leave A Reply

Your email address will not be published.