Love Jihad: ಲವ್ ಜಿಹಾದ್ ನಡೆಸಿದರೆ ಇನ್ನು ಜೀವಾವಾಧಿ ಶಿಕ್ಷೆ – ಅಸ್ಸಾಂ ಸರ್ಕಾರ ಘೋಷಣೆ !!
Love Jihad: ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನೇ ಪರಿಚಯಿಸಲು ಅಸ್ಸಾಂ ಸರ್ಕಾರ(Assam Government) ಮುಂದಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sharma) ಘೋಷಿಸಿದ್ದಾರೆ.
ಹೌದು, ಅಸ್ಸಾಂ ಸರ್ಕಾರವು ಲ್ಯಾಂಡ್ ಜಿಹಾದ್(Land Jihad) ಮತ್ತು ಲವ್ ಜಿಹಾದ್ ಅನ್ನು ತಡೆಯುವ ನಿಟ್ಟಿನಲ್ಲಿ ಎರಡು ಕಾನೂನುಗಳನ್ನು ಶೀಘ್ರ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಅವರು, ಚುನಾವಣೆಯ ಸಮಯದಲ್ಲಿ ಲವ್ ಜಿಹಾದ್ ಬಗ್ಗೆ ಮಾತನಾಡಿದ್ದೆವು. ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ತರುತ್ತೇವೆ ಎಂದಿದ್ದಾರೆ.
ಅಲ್ಲದೆ ಲವ್ ಜಿಹಾದ್ ವಿರುದ್ಧ ಕಾನೂನಿನೊಂದಿಗೆ ಶೀಘ್ರದಲ್ಲೇ ಹೊಸ ವಸತಿ ನೀತಿಯನ್ನು ಪರಿಚಯಿಸಲಾಗುವುದು. ಆ ಮೂಲಕ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಜೊತೆಗೆ ಹಿಂದೂ-ಮುಸಲ್ಮಾನರ ನಡುವಿನ ಭೂಮಿ ಮಾರಾಟದ ಬಗ್ಗೆಯೂ ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದ ಸಿಎಂ, ಅಂತಹ ವಹಿವಾಟನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೂ, ವಹಿವಾಟಿಗೂ ಮೊದಲು ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
#WATCH | Assam CM Himanta Biswa Sarma tweets, "Assam government is bringing two laws to stop Land Jihad and Love Jihad… If a Muslim wants to buy a Hindu’s property or a Hindu wants to buy a Muslim’s property, he will have to get government permission… Those practising love… pic.twitter.com/0pwnYptBA3
— ANI (@ANI) August 4, 2024