Amith Shah: 2029ಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರು ? ಅಚ್ಚರಿ ಹೆಸರು ಸೂಚಿಸಿದ ಅಮಿತ್ ಶಾ
Amith Shah: ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ. ಇಷ್ಟಿದ್ದರೂ ಮೋದಿ ತಮ್ಮ 3ನೇ ಚುನಾವಣೆಯಲ್ಲಿ ಮುಗ್ಗರಿಸಿದರು.ಆದರೂ ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಯಾವುದೇ ವ್ಯಕ್ತಿ ಇಲ್ಲ ಎಂದು ಬಿಜೆಪಿ ಬಿಂಬಿಸುತ್ತಿದೆ. ಆದರೆ ಈ ನಡುವೆ ಮೋದಿ ಬಳಿಕ ದೇಶದ ಪ್ರಧಾನಿ(PM of India after Modi) ಯಾರಾಗುತ್ತಾರೆ ಎಂಬ ವಿಚಾರವೊಂದು ಮುನ್ನಲೆಗೆ ಬಂದಿದೆ.
ಪ್ರಧಾನಿ ಮೋದಿಗೆ ಇದೀಗ 74-75 ವಯಸ್ಸು. ಹೆಚ್ಚೆಂದರೆ ಮುಂದಿನ 5 ವರ್ಷಗಳ ಅವಧಿಗೆ ಅವರು ಪ್ರಧಾನಿ ಆಗಿ ಮುಂದುವರಿಯಬಹುದು. ಅಂದರೆ 2028ರ ವರೆಗೆ. ಬಿಜೆಪಿ ನಿಯಮದ ಪ್ರಕಾರ 75 ದಾಟಿದವರಿಗೆ ಅಧಿಕಾರವಿಲ್ಲ ಎಂಬುದನ್ನೂ ನಾವು ನೆನಪಿಡಬೇಕು. ಆದರೆ ಮೋದಿ ಹವಾ ಆ ನಿಯಮವನ್ನೂ ಮೀರಿದ್ದು. ಒಟ್ಟಿನಲ್ಲಿ 5 ವರ್ಷಗಳ ಬಳಿಕ ಮುಂದಿನ ಪ್ರಧಾನಿ ಯಾರು? ಬಿಜೆಪಿ(BJP) ನೇತಾರ ಯಾರು ಎಂಬುದು ಯಕ್ಷ ಪ್ರಶ್ನೆ. ಈ ಪ್ರಶ್ನೆಗೆ, ಕುತೂಹಲಕ್ಕೆ ಅಮಿತ್ ಶಾ ತೆರೆ ಎಳೆದಿದ್ದಾರೆ.
ಅದೇನೆಂದರೆ 2029ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಎನ್ ಡಿಎ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿಯೇ (Narendra Modi) ಪ್ರಧಾನಿ ಆಗಲಿದ್ದಾಲೆ ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮೋದಿ ಇರೋ ವರೆಗೂ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ. ಪ್ರತಿಪಕ್ಷಗಳು ಏನು ಬೇಕಾದರೂ ಮಾಡಲಿ. 2029ರಲ್ಲಿ ದೇಶದಲ್ಲಿ ಮತ್ತೆ ಎನ್ಡಿಎ ಸರ್ಕಾರ ಬರಲಿದೆ. ಮತ್ತೆ ಮೋದಿಯೇ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.