Puttur: ಪುತ್ತೂರು ಬೈಪಾಸ್ ತೆಂಕಿಲದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿತ: ಹೆದ್ದಾರಿ ಬಂದ್‌!

Putturu: ಇಂದು ಮುಂಜಾನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ತೆಂಕಿಲದಲ್ಲಿ ಭಾರಿ ಪ್ರಮಾಣ ಗುಡ್ಡ ಕುಸಿದು ಸಂಚಾರ ಅಸ್ತ ವ್ಯಸ್ತವಾಗಿದೆ. ನಸುಕಿನ ಸಮಯದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಹೌದು, ಗುಡ್ಡ ಕುಸಿದ ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಬದಲಿ ರಸ್ತೆಯಾಗಿ ಪುತ್ತೂರು (Putturu) ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ.

ಸದ್ಯಕ್ಕೆ ಮಣ್ಣು ತೆರವಿನ ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

H D Kumarswamy: ‘ಮೈಸೂರು ಪಾದಯಾತ್ರೆಯಲ್ಲಿ ಅವನೊಬ್ಬ ಮಾತ್ರ ಇರಬಾರದು, ಹಾಗಿದ್ರೆ ಬರುತ್ತೇನೆ’ – ಷರತ್ತು ವಿಧಿಸಿದ HDK !!

Leave A Reply

Your email address will not be published.