RSS: ಒಂದಲ್ಲ, ಎರಡಲ್ಲ ಇದುವರೆಗೂ 3 ಬ್ಯಾನ್ ಆಗಿತ್ತು RSS !! ಯಾಕಾಗಿ, ಬ್ಯಾನ್ ಮಾಡಿದ್ಯಾರು?

RSS ವಿಚಾರ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದಲ್ಲೂ ಇತ್ತೀಚೆಗೆ ಸರ್ಕಾರಿ ನೌಕರರು(Government Employees) ಆರೆಸ್ಸೆಸ್(RSS) ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಮತ್ತು ಅದರ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದು ಎಂಬುದು 1966ರಲ್ಲಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಮಾಡಲಾಗಿದ್ದ ಆದೇಶವನ್ನು ಮೋದಿ ಸರ್ಕಾರ ರದ್ದು ಮಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

ಅಂದಹಾಗೆ ಇಂದಿರಾಗಾಂಧಿ(Indhira Gandhi) 1966ರಲ್ಲಿ ಸರ್ಕಾರಿ ನೌಕರರು RSS ಸೇರುವುದನ್ನು ಮಾತ್ರ ನಿಷೇಧ ಮಾಡಿದ್ದರು. ಆದರೆ ಇದು ಮಾತ್ರವಲ್ಲ, ಇದೂವರೆಗೂ RSS ಒಟ್ಟು 3 ಸಲ ಬ್ಯಾನ್ ಆಗಿತ್ತು. ಅದು 1948, 1975 ಮತ್ತು 1992 ರಲ್ಲಿ. ಹಾಗಿದ್ರೆ ಈ ಮೂರು ಸಂದರ್ಭದಲ್ಲಿ RSS ಯಾಕಾಗಿ ಬ್ಯಾನ್ ಆಗಿತ್ತು? ಅಂದು ಏನಾಗಿತ್ತು? ಬ್ಯಾನ್ ಮಾಡಿದವರು ಯಾರು? ಎಂದು ನೋಡೋಣ.

Hubballi: ನೇಹಾ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ‘ನಮ್ಮ ಕಾಂಗ್ರೆಸ್ ಪಕ್ಷದ ನಾಯಕರೇ ನನ್ನ ಮಗಳನ್ನು ಹತ್ಯೆ ಮಾಡಿಸಿದ್ದಾರೆ’ ಎಂದ ನೇಹಾ ತಂದೆ !!

1. 1948ರಲ್ಲಿ ನಿಷೇಧ ಏಕೆ?
1948ರಲ್ಲಿ ಮಹಾತ್ಮ ಗಾಂಧೀಜಿ(Mahtma Gandhiji) ಅವರ ಹತ್ಯೆ ಬಳಿಕ ಆರ್‌ಎಸ್‌ಎಸ್ ನಿಷೇಧಿಸಲಾಗಿತ್ತು. ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರು(Sardar Patel) ನಿಷೇಧ ಹೇರಿದ್ದರು. ಫೆಬ್ರವರಿ 1948 ರಲ್ಲಿ, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರು “ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡಲು ಮತ್ತು ಅವರ ನ್ಯಾಯಯುತ ಹೆಸರನ್ನು ಮಂಕಾಗಿಸಲು ಹಿಂದೂ ದೇಹವನ್ನು ನಿರ್ಬಂಧಿಸಲಾಗಿದೆ” ಎಂದು ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿದ್ದರು.

“ಸಂಘದ ಸದಸ್ಯರು ಅನಪೇಕ್ಷಿತ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರು, ದೇಶದ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಯಕ್ತಿಕ ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಬಂದಿದೆ’ ಎಂದು ಪಟೇಲ್ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದರು. ಅಲ್ಲದೆ ಪಟೇಲ್ ಅವರ ಒಂದು ವರ್ಷದ ನಂತರ ನಿಷೇಧವನ್ನು ತೆಗೆದುಹಾಕಿದರು.

2. 1975ರಲ್ಲಿ ನಿಷೇಧ ಏಕೆ?
ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಈ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಸಂದರ್ಭದಲ್ಲಿ ಆರ್‌ಎಸ್ಎಸ್ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇರಿಸಿತ್ತು. ಇದೇ ಉದ್ದೇಶದಿಂದ ಹಾಗೂ ಆರ್‌ಎಸ್‌ಎಸ್‌ ಕಾರ್ಯ ಚಟುವಟಿಕೆಗಳ ಮೊಟಕುಗೊಳಿಸುವ ಉದ್ದೇಶದಿಂದ 1975ರಲ್ಲಿ ಈ ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು. ಜೂನ್ 25, 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದ ನಂತರ, ಜುಲೈ 4 ರಂದು RSS ಅನ್ನು ನಿಷೇಧಿಸಲಾಯಿತು.

ನಂತರ ಹಲವಾರು ಸುತ್ತಿನ ಮಾತುಕತೆಗಳ ನಂತರ, ತುರ್ತು ಪರಿಸ್ಥಿತಿ ಕೊನೆಗೊಂಡಾಗ ಮಾರ್ಚ್ 22, 1977 ರಂದು ಆರೆಸ್ಸೆಸ್‌ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.

3. 3ನೇ ಸಲ ನಿಷೇಧವೇಕೆ?
‌1992 ಈ ವೇಳೆಗೆ ಆರ್‌ಎಸ್‌ಎಸ್‌ ಎರಡು ಬಾರಿ ಬ್ಯಾನ್ ಆಗಿತ್ತು. ಇದೆಲ್ಲ ಮುಗಿದ ಬಳಿಕ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಈ ವೇಳೆ ಪಿವಿ ನರಸಿಂಹ ರಾವ್(PV Narasimha Rao) ಅವರು ದೇಶದ ಪ್ರಧಾನಿಯಾಗಿದ್ದರು. ಶಂಕರರಾವ್ ಬಲವಂತರಾವ್ ಚವಾಣ್ ಅವರು ಅಂದಿನ ಗೃಹ ಸಚಿವರಾಗಿದ್ದರು. ಈ ವೇಳೆ ಆರ್‌ಎಸ್ಎಸ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

ನಂತರ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992 ರಂದು ಕೆಡವಲಾಯಿತು. ಡಿಸೆಂಬರ್ 10 ರಂದು RSS ಅನ್ನು ನಿಷೇಧಿಸಲಾಯಿತು. ನ್ಯಾಯಮೂರ್ತಿ ಬಹ್ರಿ ಆಯೋಗವು “ಅನ್ಯಾಯ” ಎಂದು ಕಂಡುಹಿಡಿದ ನಂತರ ಜೂನ್ 4, 1993 ರಂದು ಮೂರನೇ ನಿಷೇಧವನ್ನು ತಿಂಗಳೊಳಗೆ ತೆಗೆದುಹಾಕಿತು.

Bengaluru: ರಾಜಸ್ಥಾನ್ ನಿಂದ ಬೆಂಗ್ಳೂರಿಗೆ ಬಂದ ಮಾಂಸ ಕುರಿಯದ್ದೋ ಇಲ್ಲ ನಾಯಿಯದ್ದೋ? ಸರ್ಕಾರದ ಕೈ ಸೇರಿದ ರಿಪೋರ್ಟ್ ನಲ್ಲಿ ಏನಿದೆ?

Leave A Reply

Your email address will not be published.