HSRP Number Plate: HSRP ನಂಬರ್ ಪ್ಲೇಟ್‌ ಬುಕಿಂಗ್‌ ಮಾಡುವವರಿಗೆ ಹೊಸ ಪ್ರಾಬ್ಲಮ್!

Share the Article

HSRP number plate: ರಾಜ್ಯದಲ್ಲಿ ಇನ್ನೂ ಶೇ.55ಕ್ಕಿಂತ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಅವಧಿಯನ್ನು ಈಗಾಗಲೇ 3 ಬಾರಿ ವಿಸ್ತರಣೆ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (HSRP number plate) ಬುಕಿಂಗ್ ಮಾಡುವವರಿಗೆ ಸಂಕಷ್ಟ ಆರಂಭವಾಗಿದೆ. ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಬೆಂಗಳೂರು ವ್ಯಕ್ತಿಯೊಬ್ಬ ಬರೋಬ್ಬರಿ 95 ಸಾವಿರ ರೂ. ಕಳೆದುಕೊಂಡಿದ್ದಾರೆ.

ಹೌದು, ಕೇಂದ್ರ ಸರ್ಕಾರದ ಹೆಚ್‌ಎಸ್‌ಆರ್‌ಪಿ ನಂನರ್ ಪ್ಲೇಟ್ ಬುಂಕಿಂಗ್ ಮಾಡುವ ವೆಬ್‌ಸೈಟ್‌ ಅನ್ನು ನಕಲಿ ಮಾಡಿ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಸೈಬರ್ ಕಳ್ಳರ ಜಾಲದ ಬಗ್ಗೆ ಬೆಳಕಿಗೆ ಬಂದಿದೆ. ಜನರು ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ, ಅರ್ಜಿ ಸಲ್ಲಿಕೆ ವೇಳೆ ಸಾರಿಗೆ ಇಲಾಖೆಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸರಿಯಾಗಿ ಗುರುತಿಸಿ ಅಪ್ಲೈ ಮಾಡಬೇಕು. ಇಲ್ಲವಾದರೆ ಖಾಸಗಿ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.

ಹೌದು, HSRP ನಂಬರ್ ಪ್ಲೇಟ್ ಹೆಸರಲ್ಲಿ ಸೈಬರ್ ವಂಚಕ ಜಾಲ ಸಕ್ರಿಯವಾಗಿದೆ. ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ನಿಮ್ಮ ಅಕೌಂಟ್‌ನಲ್ಲಿರೊ ಹಣ ಖಾಲಿ ಆಗೋದು ಖಚಿತ. HSRP ನಂಬರ್ ಪ್ಲೇಟ್ ಬುಕ್ ಮಾಡಿದ್ದ ವಿಜಿತ್ ಕುಮಾರ್ ಗೆ 95 ಸಾವಿರ ವಂಚನೆ ಮಾಡಲಾಗಿದೆ. ತನಗೆ ವಂಚನೆಯಾಗಿರುವ ಬಗ್ಗೆ ವಿಜಿತ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ವಿಜಿತ್ ಕುಮಾರ್ ತಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಬುಕ್ ಮಾಡಲು bookmyhsrp.net ಲಿಂಕ್‌ನಲ್ಲಿ ನಲ್ಲಿ ರಿಜಿಸ್ಟರ್ ಮಾಡಿದ್ದರು.

ಆದರೆ, ಒಂದು ವಾರದ ನಂತರ ನಿಮ್ಮ ದಾಖಲೆ ಸರಿ ಇಲ್ಲ, ಕೆಳಗೆ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ ಎಂದು ಮೇಲ್ ಬಂದಿತ್ತು. ಈ ಲಿಂಕ್ ಕ್ಲಿಕ್ ಮಾಡಿ ದಾಖಲೆ ಅಪ್ಲೋಡ್ ಮಾಡಿದ್ದನು. ಇದಾದ ನಾಲ್ಕು ದಿನಗಳಲ್ಲಿ ಹಂತ ಹಂತವಾಗಿ ವಿಜಿತ್‌ಕುಮಾರ್ ಕ್ರೆಡಿಟ್ ಕಾರ್ಡ್‌ನಿಂದ 95 ಸಾವಿರ ರೂ. ಕಟ್ ಆಗಿದೆ. ಈ ಸಂಬಂಧಪಟ್ಟಂತೆ ಬಾಗಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ವಿಜಿತ್‌ಕುಮಾರ್‌ನ ಇಮೇಲ್ ಐಡಿ ಮತ್ತು ಬ್ಯಾಂಕ್ ಖಾತೆಯ ವಿವರನ್ನು ಪೊಲೀಸರು ಪಡೆದು, ಹಣ ಕಡಿತವಾಗಿರುವ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

Leave A Reply

Your email address will not be published.