Kerala: ವಯನಾಡ್‌ ಭೂಕುಸಿತಕ್ಕೆ ನಿಜವಾದ ಕಾರಣವೇನು?

Share the Article

Kerala: ಕೇರಳದ ವಯನಾಡಿನಲ್ಲಿ ಮಂಗಳವಾರ ಮುಂಜಾನೆ ನಡೆದ ಭೀಕರ ಭೂಕುಸಿತ ನಿಜಕ್ಕೂ ಆಘಾತಕಾರಿ ಘಟನೆ. ಅರಬ್ಬಿ ಸಮುದ್ರದಲ್ಲಿ ತಾಪಮಾನ ಹೆಚ್ಚಳ ಉಂಟಾಗಿದ್ದರಿಂದ ದಟ್ಟವಾದ ಮೋಡಗಳು ನಿರ್ಮಾಣವಾಗಿದ್ದು, ಕೇರಳದಲ್ಲಿ ಅಲ್ಪಾವಧಿಯಲ್ಲಿಯೇ ಭಾರೀ ಮಳೆಯಾಗುತ್ತಿದೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಮುನ್ಸೂಚನೆ ವ್ಯವಸ್ಥೆ ಮತ್ತು ಅಪಾಯವನ್ನು ಎದುರಿಸುತ್ತಿರುವ ಜನರನ್ನು ಸುರಕ್ಷಿತ ವಸತಿ ನಿರ್ಮಾಣ ಮಾಡುವಂತೆ ಸಲಹೆ ನೀಡಲಾಗಿದೆ.

ಮುಂಗಾರುವಿನ ಸಕ್ರಿಯತೆ, ಕಡಲಾಚೆಯ ಕಡಿಮೆ ಒತ್ತಡದ ಪ್ರದೇಶದಿಂದಾಗಿ, ಕಾಸರಗೋಡು, ಕಣ್ಣೂರು, ವಯನಾಡು, ಕ್ಯಾಲಿಕಟ್‌ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಎರಡು ವಾರಗಳಿಂದ ಇಡೀ ಕೊಂಕಣ ಪ್ರದೇಶವು ಹಾನಿಗೊಂಡಿದೆ. ಎರಡು ವಾರಗಳ ನಿರಂತರ ಮಳೆಯಿಂದ ಮಣ್ಣು ಮೆದುಗೊಂಡಿದೆ ಎಂದು ಕೊಚ್ಚಿ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿಯ ನಿರ್ದೇಶಕರು ಹೇಳಿದ್ದಾರೆ.

ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ವಾತಾವರಣಕ್ಕೆ ಏರಿದಾಗ ಇದು ಸಂಭವಿಸುವುದರಿಂದ ಎತ್ತರ ಹೆಚ್ಚಾದಂತೆ, ಒತ್ತಡ ಕಡಿಮೆಯಾಗಿ ತಾಮಪಾನ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

 

Leave A Reply

Your email address will not be published.