C M Siddaramaiah: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್; ಕಾರ್ಯಕ್ರಮದ ಬೆನ್ನಲ್ಲೇ ಭರ್ಜರಿ ಬಾಡೂಟ !

Share the Article

C M Siddaramaiah: ಕಾವೇರಿ ಮೈತುಂಬಿ ಹರಿಯುತ್ತಿದ್ದಾಳೆ. ಕಾವೇರಿ ಜಲಾಶಯ ಇದೀಗ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಈ ಸಂದರ್ಭದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಸೇರಿ ಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ. ಆದರೆ ಬಾಗಿನ ಸಮರ್ಪಿಸಿದ ಬೆನ್ನಲ್ಲೇ ಬಾಡೂಟ ಸವಿದದ್ದು ಚರ್ಚೆಗೆ ಆಹ್ವಾನ ಮಾಡಿದಂತಾಗಿದೆ.

ಅತ್ತ ಕಾವೇರಿ ನದಿಗೆ ಹೂವು ಎಸೆದು ಪೂಜೆ ಮಾಡಿ ಬಾಗಿನ ಸಮರ್ಪಿಸಿದ ದಿನ ಕಾರ್ಯಕ್ರಮದ ನಂತರ ಬಾಡೂಟ ಆಯೋಜನೆ ಮಾಡಲಾಗಿದೆ. ಹೌದು, ಕೆಆರ್‌ಎಸ್‌ ಖಾಸಗಿ ಹೋಟೆಲ್ ನಲ್ಲಿ ಬಾಡೂಟ ಆಯೋಜನೆ ಮಾಡಲಾಗಿದ್ದು, ಸಿಎಂ, ಡಿಸಿಎಂ ಬಾಗಿನ ಅರ್ಪಣೆ ಮಾಡಿ ಹೊರಟು ಹೋದ ಬಳಿಕ ಇಲಾಖೆಯ ಅಧಿಕಾರಿಗಳು ಭರ್ಜರಿ ಬಾಡೂಟ ಸವಿದಿದ್ದಾರೆ. ಚಿಕನ್ ಮಟನ್ ಊಟದ ಬ್ಯಾಟಿಂಗ್ ಜೋರಾಗಿಯೇ ಮಾಡಿದ್ದಾರೆ. ಈ ಮೂಲಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈವರೆಗೆ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದು ಹಾಕಿದ್ದಾರೆ.

ಹಿಂದಿನ ಸಂಪ್ರದಾಯಗಳಂತೆ ಬಾಗಿನ ಸಲ್ಲಿಸಿದ ದಿನ ಬಾಡೂಟ ನಡೆದಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಬಾಗಿನದ ಬೆನ್ನಲ್ಲೆ ಬಾಡೂಟ ಆಯೋಜನೆ ಮಾಡಲಾಗಿದೆ. ಈ ಮೂಲಕ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಸಂಪ್ರದಾಯಕ್ಕೆ ಕಾವೇರಿ ನೀರಿನಲ್ಲೇ ತಿಲಾಂಜಲಿ ಬಿಟ್ಟಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಕಾವೇರಿ ಜೀವ ನದಿ, ಕಾವೇರಿ ದೇವಿಯ ಕಾರ್ಯಕ್ರಮದ ನಂತರ ಬಾಡೂಟ ಆಯೋಜನೆ ಮಾಡಬಾರದಿತ್ತು ಅನ್ನುವುದು ಸಾರ್ವತ್ರಿಕವಾಗಿ ಕೇಳಿ ಬಂದಿರುವ ಮಾತು.

Leave A Reply

Your email address will not be published.