Delhi: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಎಲ್ಲೆಂದರಲ್ಲಿ ಹಾರಾಡುತ್ತಿದ್ದ ಸ್ಪೈ ಡರ್‌ಮ್ಯಾನ್‌ನನ್ನು ಬಂಧಿಸಿದ ಪೊಲೀಸರು !!

Share the Article

Delhi: ಸ್ಪೈ ಡರ್‌ಮ್ಯಾನ್‌ನ ಕುರಿತ ಹಲವು ಸಿನಿಮಾಗಳನ್ನು ನಾವು ನೋಡಿದ್ದೇವೆ. ಇದರಲ್ಲೆಲ್ಲ ಆತ ಜೀವ ರಕ್ಷಕನಾಗಿ ಬರುತ್ತಿದ್ದನು. ಆದರೆ ಇಲ್ಲೊಂದು ಸ್ಪೈ ಡರ್‌ಮ್ಯಾನ್(Spider Man) ಟ್ರಾಫಿಕ್ ರೂಲ್ಸ್(Traffic Rules) ಬ್ರೇಕ್ ಮಾಡುತ್ತಾ ಮನಬಂದಂತೆ ತಿರುಗಾಡಿದೆ. ಇದನ್ನು ಗಮನಿಸಿದ ಪೋಲೀಸರು ತಕ್ಷಣ ಅದನ್ನು ಹಿಡಿದು ಬಂಧಿಸಿದ್ದಾರೆ.

RBI New Rule: ಆರ್​​ಬಿಐ ನಿಯಮದಲ್ಲಿ ಬದಲಾವಣೆ! ಕ್ಯಾಷ್ ವಿತ್​ಡ್ರಾ ಮಾಡುವಲ್ಲಿ ಹೊಸ ರೂಲ್ಸ್ ಅಪ್ಲೈ

ಹೌದು, ದೆಹಲಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ 20 ವರ್ಷದ ಸ್ಪೈಡರ್‌ಮ್ಯಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೈಡರ್‌ಮ್ಯಾನ್‌ ವೇಷ ಧರಿಸಿ ಹವಾಯ್ ಚಪ್ಪಲ್ ಹಾಕೊಂಡು 20 ವರ್ಷದ ಯುವಕನೋರ್ವ ಸ್ಕಾರ್ಪಿಯೋ(Scorpio)ಗಾಡಿಯ ಬೊನೆಟ್‌ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ. ಇದನ್ನು ಗಮನಿಸಿದ ಪೋಲೀಸರು ತಕ್ಷಣ ಬೆನ್ನತ್ತಿ ಅವನನ್ನು ಹಿಡಿದಿದ್ದಾರೆ.
TMC ಅಂದ್ರೆ ಏನು? ಒಂದು TMC ನೀರಿನ ಪ್ರಮಾಣ ಅಂದ್ರೆ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಅಂದಹಾಗೆ ಬಂಧಿತ ಯುವಕನನ್ನು ದೆಹಲಿ ನಜಫ್‌ಗರ್‌ ನಿವಾಸಿ ಆದಿತ್ಯ ಎಂದು ಗುರುತಿಸಲಾಗಿದೆ. ಈತ ದ್ವಾರಕ ರಸ್ತೆಯಲ್ಲಿ ಕಾರಿನ ಬೊನೆಟ್ ಮೇಲೆ ಪ್ರಯಾಣಿಸುತ್ತಿದ್ದ. ಈ ಕಾರಿನ ಬಗ್ಗೆ ಹಾಗೂ ಬೊನೆಟ್‌ ಮೇಲೆ ರೈಡ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರುಗಳು ಬಂದಿದ್ದವು. ಈತ ಬೊನೆಟ್ ಮೇಲೆ ಪ್ರಯಾಣಿಸುತ್ತಿದ್ದರೆ, 19 ವರ್ಷದ ಮತ್ತೊಬ್ಬ ಯುವಕ ಮಹಾವೀರ್ ಎನ್‌ಕ್ಲೇವ್‌ ನಿವಾಸಿ ಗೌರವ್ ಸಿಂಗ್ ಕಾರು ಚಾಲನೆ ಮಾಡ್ತಿದ್ದ. ಇವರಿಬ್ಬರ ವಿರುದ್ಧವೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

https://x.com/Congress_Indira/status/1816301147470070006?t=D_t9xbBfnmKNSLT4IFJeCg&s=19

Leave A Reply