Teachers Transfer: 50 ವರ್ಷ ದಾಟಿದ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ; ಕರ್ನಾಟಕ ಹೈಕೋರ್ಟ್ ಆದೇಶ

Teachers Transfer: ಕರ್ನಾಟಕ ಹೈಕೋರ್ಟ್(High Court) ಶಿಕ್ಷಕರಿಗೆ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಹೌದು, ಇನ್ಮುಂದೆ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ(Teachers Transfer) ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಆದೇಶವನ್ನು ಮಾನ್ಯ ಮಾಡಿದ್ದು, ಇನ್ನು ಮುಂದೆ 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಹೇಳಿದೆ.
ಇನ್ನು ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ ವಿನಾಯ್ತಿ ಇದ್ದಾಗ ಅವರು ಅರ್ಜಿ ಸಲ್ಲಿಸಲಿ ಅಥವಾ ಬಿಡಲಿ, ಆ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಬೇಕು ಎಂದು ಪೀಠ ತಿಳಿಸಿದೆ.
ಪೀಠವು ಒಂದು ವೇಳೆ ಮಹಿಳಾ ಶಿಕ್ಷಕರಾಗಿರುವ ಅರ್ಜಿದಾರರು 50 ವರ್ಷಗಳನ್ನು ದಾಟಿದ್ದರೆ ಮತ್ತು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ನಿಯಂತ್ರಣ) ಸೆಕ್ಷನ್ 10 (1) (vi) ಪ್ರಯೋಜನಕ್ಕೆ ಮಾನ್ಯ ಆಗಿದ್ದಲ್ಲಿ ಶಿಕ್ಷಕರ ವರ್ಗಾವಣೆ ಕಾಯಿದೆ), 2020. ಅವರನ್ನು ಹೆಚ್ಚುವರಿ ಎಂದು ಘೋಷಿಸಲು ಸಾಧ್ಯವಿಲ್ಲ ಮತ್ತು ವರ್ಗಾವಣೆ ಆದೇಶವನ್ನು ನೀಡುವಂತಿಲ್ಲ ಎಂದು ಆದೇಶಿಸಿದೆ .