Renukaswamy murder case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್! ತನಿಖೆ ವೇಳೆ ಪ್ಲಾನ್ A&B ಬಗ್ಗೆ ಬಾಯಿ ಬಿಚ್ಚಿದ ದರ್ಶನ್ ಗ್ಯಾಂಗ್!

Share the Article

Renukaswamy murder case: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ರಾಜ್ಯದಲ್ಲಿ ಇದೀಗ ಈ ಕೊಲೆ ಸುದ್ದಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಇನ್ನು ಇತ್ತ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲಿದೆ. ಹೌದು, ಕೊಲೆ ಆರೋಪದಲ್ಲಿ ಇರುವ ದರ್ಶನ್ ಗ್ಯಾಂಗ್ ನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅಚ್ಚರಿ ಬೆಳಕಿಗೆ ಬಂದಿದೆ. ಕೊಲೆ ನಡೆದ ದಿನ ಪ್ಲಾನ್ ಮಾಡಿದ್ದೇ ಬೇರೆ ಅಲ್ಲಿ ನಡೆದಿದ್ದೇ ಬೇರೆ!

Relationship: ಪ್ರೇಮಿಯೊಂದಿಗೆ ತಪ್ಪಿಯೂ ಈ ರೀತಿ ನಡೆದುಕೊಳ್ಳದಿರಿ; ಬ್ರೇಕ್​​​ಅಪ್​​ ಆದೀತು!

ಹೌದು,  ಅಂದು ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ ಭೀಕರವಾಗಿ  ಹಲ್ಲೆ ನಡೆಸಿದ ಬಳಿಕ, ದರ್ಶನ್ ಪ್ರೇಯಸಿ ಪವಿತ್ರ ಗೌಡ ಗೆ ಅಶ್ಲೀಲ ಮೆಸೇಜ್ ಕಳಿಸಿದ ಬಗ್ಗೆ ಅವನಿಂದಲೇ ಕ್ಷಮಾಪಣೆ ಕೇಳಿಸಲು ದರ್ಶನ್ ಅಂಡ್ ಗ್ಯಾಂಗ್ ಪ್ರಯತ್ನಿಸಿದ್ದರು. ಆದ್ರೆ ಕ್ಷಮಾಪಣೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಪ್ಲಾನ್ ಮಾಡಿದ್ದ ಗ್ಯಾಂಗ್ ಗೆ ಮುಂದಾಗಿದ್ದೆ ದೊಡ್ಡ ಸವಾಲು.

ಹಲ್ಲೆ ನಡೆಸುವ ವೇಳೆ ಇಬ್ಬರು ರೇಣುಕಾಸ್ವಾಮಿಯನ್ನು ಹಿಡಿದು ಕುಳಿತಿದ್ರು. ಎದುರುಗಡೆ ಮೊಬೈಲ್ ಫೋನ್ ಹಿಡಿದು ವಿಡಿಯೋ ಮಾಡಲು ನಿಂತಿದ್ದ ಇನ್ನೊರ್ವ ಆರೋಪಿ. ‘ಇನ್ಮುಂದೆ ಈ ರೀತಿ ಮಾಡೊಲ್ಲ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜಾಗಲಿ, ಫೋಟೊಗಳಾಗಲಿ ಕಳಿಸುವುದಿಲ್ಲ ನನ್ನ ಕ್ಷಮಿಸಿ’ ಎಂದು ಕ್ಷಮಾಪಣೆ ಕೇಳುವಂತೆ ಒತ್ತಾಯ ಮಾಡಲಾಗಿತ್ತು, ಆದರೆ ಅಷ್ಟರಲ್ಲಿ  ಕೂರಲು ಆಗದಷ್ಟು ಮನಬಂದಂತೆ ಬಡಿದಿದ್ದರಿಂದ ರೇಣುಕಾಸ್ವಾಮಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ನಾಳೆ ಹೇಳಿಸೋಣ ಬಿಡ್ರೋ ಅಂತಾ ದರ್ಶನ್ ಸುಮ್ಮನಾದ್ರು.

ನಂತರ ರೇಣುಕಾಸ್ವಾಮಿಯನ್ನ ಸೆಕ್ಯೂರಿಟಿ ರೂಂಗೆ ತಂದು ಹಾಕಿದ್ದ ಗ್ಯಾಂಗ್. ನಂತರ ಕೆಲವೇ ಕ್ಷಣಗಳಲ್ಲಿ ರೇಣುಕಾಸ್ವಾಮಿ ಪ್ರಾಣ ಹೋಗಿತ್ತು. ಇದರಿಂದ ಗಾಬರಿಗೊಂಡ ಗ್ಯಾಂಗ್ ಹೊರಹೋಗಿದ್ದ ದರ್ಶನ್ ಗೆ ಫೋನ್‌ ಮಾಡಿ ವಿಚಾರ ತಿಳಿಸಿದ್ದ. ಎಂದು ಪೊಲೀಸರ ತನಿಖೆ ವೇಳೆ ಅಫಾಲಜಿ ಪ್ಲಾನ್ ಬಯಲಾಗಿದೆ. ರೇಣುಕಾಸ್ವಾಮಿ ಪ್ರಾಣ ಹೋದ ನಂತರ ಅಲ್ಲಿ ಪ್ಲಾನ್ B ರೆಡಿ ಆಗಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಇದರ ಸತ್ಯಾ ಸತ್ಯತೆ ಆರೋಪಿಗಳ ಮೊಬೈಲ್‌ ರಿಟ್ರೀವ್ ಗೆ ಆದ ನಂತರ ತಿಳಿದು ಬರಲಿದೆ.

Govt Employees – RSS: ‘ಸರ್ಕಾರಿ ನೌಕರರು RSSಗೆ ಸೇರುವಂತಿಲ್ಲ’ ಎಂಬ ನಿಯಮವನ್ನ ರದ್ದು ಮಾಡಿದ ಮೋದಿ ಸರ್ಕಾರ! RSS ಭರ್ಜರಿ ಸ್ವಾಗತ

 

Leave A Reply

Your email address will not be published.