Budget Halwa Ceremony: ಬಜೆಟ್ ಮಂಡನೆಗೂ ಮುನ್ನ ಹಲ್ವಾ ತಿನ್ನಿಸೋ ಸಮಾರಂಭ ನಡೆಯುವುದೇಕೆ? ಏನಿದು ಕೇಂದ್ರದ ಸಂಪ್ರದಾಯ!!

Budget Halwa Ceremony: ಇದೇ ಜುಲೈ ತಿಂಗಳ 23ನೇ ತಾರೀಖಿನಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ನೂತನ NDA ಸರ್ಕಾರದ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಇದರ ಸೂಚಕವಾಗಿ ಅವರು ಕೆಲವು ದಿನಗಳ ಹಿಂದೆ ವಾಡಿಕೆಯಂತೆ ಹಣಕಾಸು ಇಲಾಖೆ ಸಿಬ್ಬಂದಿಗೆ ಹಲ್ವಾ ವಿತರಣೆ(Budget Halwa Ceremony) ಮಾಡಿದ್ದಾರೆ. ಇದು ಪ್ರತೀ ಬಜೆಟ್ ಮಂಡನೆಗೂ ಮುನ್ನ ನಡೆಯುವ ಸಂಪ್ರದಾಯ. ಹಾಗಿದ್ರೆ ಏನಿದು ? ಬಜೆಟ್ ಮಂಡನೆಗೂ ಮುನ್ನ ಹಲ್ವಾ ಹಂಚುವುದೇಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೇಲ್ಸ್.

Krishi Honda: ಜಮೀನಿನಲ್ಲಿ ಕೃಷಿ ಹೊಂಡ ಹೊಂದಿರುವ ರೈತರಿಗೆಲ್ಲಾ ಬಂತು ಹೊಸ ರೂಲ್ಸ್ – ಸರ್ಕಾರದ ಖಡಕ್ ಆದೇಶ !!

ಹೌದು, ಬಜೆಟ್ ಮಂಡನೆಗೂ ಮುನ್ನ ಹಲ್ವಾ ಹಂಚುವುದು ಏಕೆ? ಏನಿದು ಹಲ್ವಾ ಸೆರೆಮನಿ? (Halwa Ceremony) ಯಾರಿಗೆ ಹಲ್ವಾ ಹಂಚುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಆ ಕುತೂಹಲ ತಣಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಏನಿದು ಹಲ್ವಾ ಹಂಚುವುದು?
ಯಾವುದೇ ಬಜೆಟ್ ಮಂಡಿಸುವ ಮೊದಲು ಕೆಲವಿಷ್ಟು ಸಂಪ್ರದಾಯ, ಆಚರಣೆಗಳನ್ನು ನಡೆಸಲಾಗುತ್ತದೆ. ಇಂಥ ಕೆಲ ಸಂಪ್ರದಾಯಗಳನ್ನು ಸರ್ಕಾರಗಳು ಕೈಬಿಟ್ಟಿರುವುದುಂಟು. ಹಾಗೆಯೇ, ಕೆಲ ಆಚರಣೆಗಳು ಮುಂದುವರಿದುಕೊಂಡು ಬಂದಿವೆ. ಇಂಥ ಸಂಪ್ರದಾಯದಲ್ಲಿ ಹಲ್ವಾ ಕಾರ್ಯಕ್ರಮವೂ (Halwa ceremony) ಒಂದು. ಬಜೆಟ್ ಮಂಡನೆಗೆ ಕೆಲ ದಿನಗಳ ಮೊದಲು ಹಲ್ವಾ ಕಾರ್ಯಕ್ರಮ ನಡೆಯುತ್ತದೆ.

ಒಂದು ಬಜೆಟ್ ತಯಾರಿಸಲು ಆರು ತಿಂಗಳ ಹಿಂದಿನಿಂದಲೇ ಕೆಲಸಗಳು ನಡೆಯುತ್ತವೆ. ಬಜೆಟ್​​ ಅನ್ನು ಅಂತಿಮಗೊಳಿಸಿ ಬಜೆಟ್ ಪುಸ್ತಕ ಸೇರಿದಂತೆ ಅದಕ್ಕೆ ಸಂಬಂಧಿಸಿ ವಿವಿಧ ದಾಖಲೆಗಳನ್ನು ಮುದ್ರಿಸಲಾಗುತ್ತದೆ. ಬಜೆಟ್ ಅನ್ನು ಅಂತಿಮಗೊಳಿಸಿದ ಖುಷಿಯನ್ನು ಆಚರಿಸಲು ಹಲ್ವಾ ಕಾರ್ಯಕ್ರಮ ನಡೆಸಲಾಗುತ್ತದೆ. ಹಣಕಾಸು ಇಲಾಖೆಯ ಸಿಬ್ಬಂದಿಯನ್ನು ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸಲು ನೀಡುವ ಚಾಲನೆಯೇ ‘ಹಲ್ವಾ’ ಸೆರೆಮನಿ ಎಂದರ್ಥ. ಹೀಗಾಗಿ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಲಾಗುತ್ತದೆ. ಈ ಸಮಾರಂಭ ಆದ ಬೆನ್ನಲ್ಲೇ ಅವರು ಬಜೆಟ್ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ

ಅಲ್ಲದೆ ಯಾವುದೇ ಶುಭಕಾರ್ಯಕ್ಕೆ ಸಿಹಿ ಹಂಚುವುದು ಸಂಪ್ರದಾಯ. ಸಿಹಿ ತಿಂಡಿಗಳನ್ನು ತಯಾರಿಸಿ ಹಂಚುವುದು ಅನೇಕ ಭಾರತೀಯ ಸಮಾರಂಭಗಳು ಮತ್ತು ಹಬ್ಬಗಳ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಬಜೆಟ್ ಮಂಡನೆ ಕಾರ್ಯದಲ್ಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂಬುದು ಹಲವರ ಭಾವನೆ. ಇದರೊಂದಿಗೆ ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯನ್ನು ಸಿದ್ಧಪಡಿಸುವಲ್ಲಿ ತೊಡಗಿರುವ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಔಪಚಾರಿಕವಾಗಿ ಸೆಂಡ್‌ ಆಫ್ ಮಾಡುವ ಮಹತ್ವವನ್ನು ಈ ಸಮಾರಂಭ ಹೊಂದಿದೆ.

ಎಲ್ಲಿ ನಡೆಯುತ್ತದೆ?
ಹಣಕಾಸು ಸಚಿವರು, ಇತರ ಅಧಿಕಾರಿಗಳೊಂದಿಗೆ, ಕೇಂದ್ರ ದೆಹಲಿಯಲ್ಲಿರುವ ಹಣಕಾಸು ಸಚಿವಾಲಯದ ನೆಲಮಾಳಿಗೆಯಲ್ಲಿ ‘ಹಲ್ವಾ’ ತುಂಬಿದ ದೊಡ್ಡ ಲೋಹದ ಮಡಕೆ ಅಥವಾ ಕಡಾಯಿಯನ್ನು ಬೆರೆಸುವ ಮೂಲಕ ಹಲ್ವಾ ಸಮಾರಂಭ ನಡೆಯುತ್ತದೆ. ಇದು ಮೀಸಲಾದ ಮುದ್ರಣಾಲಯದ ನೆಲೆಯಾಗಿದೆ.

ಬಜೆಟ್ ತಯಾರಿಸುವ ಶ್ರಮ ಅಷ್ಟಿಷ್ಟಲ್ಲ…
ಬಜೆಟ್ ಅನ್ನು ತಯಾರಿಸುವ ಕಾರ್ಯ ಬಹಳ ವಿಶೇಷವಾದುದು. ಬಜೆಟ್ ಮಂಡನೆ ಆಗುವವರೆಗೂ ಇದನ್ನು ಬಹಳ ರಹಸ್ಯದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇದರಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಇಡಲಾಗುತ್ತದೆ. ಬಜೆಟ್ ಮಂಡನೆ ಆಗುವವರೆಗೂ ಇವರಿಗೆ ಹೊರಜಗತ್ತಿನ ಸಂಪರ್ಕವೇ ಇರುವುದಿಲ್ಲ. ಗುಪ್ತಚರರ ಕಣ್ಗಾವಲು ಸದಾ ಇರುತ್ತದೆ. ತುರ್ತು ಕರೆಗೆ ಮಾತ್ರವೇ ಆಸ್ಪದ ಇರುತ್ತದೆ. ಫೋನ್ ಮಾಡಿದರೂ ಅದರ ಮೇಲೂ ಕಿವಿ ಇರುತ್ತದೆ. ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಇರುತ್ತದೆ. ಹಣಕಾಸು ಸಚಿವರು ಮಾತ್ರವೇ ಇವರಿರುವ ಸ್ಥಳಕ್ಕೆ ಹೋಗಿ ಬರಬಹುದು. ಅವರು ಹೋದರೂ ಅಲ್ಲಿಂದ ಮೊಬೈಲ್ ಫೋನ್ ಬಳಸಲು ನಿರ್ಬಂಧ ಇರುತ್ತದೆ.

ಗೌಪ್ಯತೆ ಯಾಕೆ?
1950 ರ ವರೆಗೆ ಬಜೆಟ್ ಪ್ರತಿಗಳು ರಾಷ್ಟ್ರಪತಿ ಭವನದಲ್ಲೇ ಮುದ್ರಣಗೊಳ್ಳುತ್ತಿದ್ದವು. ಆದರೆ ಪ್ರತಿಗಳು ಮತ್ತು ಮಾಹಿತಿ ಸೋರಿಕೆಯಾಗುತ್ತಿತ್ತು. ಪರಿಣಾಮವಾಗಿ ಆಗಿನ ಹಣಕಾಸು ಸಚಿವರಾಗಿದ್ದ ಜಾನ್ ಮಥಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಈ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್‌ಗೆ ಮುದ್ರಣಕಾರ್ಯ ಸ್ಥಳಾಂತರಗೊಂಡಿತು. ಆಗಿನಿಂದಲೂ ಅಲ್ಲಿಯೇ ಮುದ್ರಣ ನಡೆಯುತ್ತಿದೆ.

Phonepe CEO: ಮೀಸಲಾತಿ ವಿಚಾರದಲ್ಲಿ ಕನ್ನಡಿಗರಿಗೆ ಅವಮಾನ – ಭೇಷರತ್ ಕ್ಷಮೆ ಯಾಚಿಸಿದ ಫೋನ್ ಪೇ ಸಮೀರ್ ನಿಗಮ್ !!

Leave A Reply

Your email address will not be published.