Pradeep Eshwar: ಸದನದಲ್ಲಿ ಹುಚ್ಚನಂತೆ ವರ್ತಿಸಿದ ಶಾಸಕ ಪ್ರದೀಪ್ ಈಶ್ವರ್ – ಇತರರು ಬಂದು ತಡೆದರೂ ನಿಲ್ಲಲಿಲ್ಲ ಅಬ್ಬರ !!

Share the Article

Pradeep Eshwar: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆಯ ಮುಂಗಾರು ಅಧಿವೇಶನವು(Mansoon Session) ಬರೀ ಕಿತ್ತಾಟ, ಗಲಾಟೆಳಿಗೆ ಮೀಸಲಾದಂತಿದೆ. ಅದರಲ್ಲೂ ನಿನ್ನೆಯ(ಜು 19)ರ ಸದನ ದೊಡ್ಡ ನಾಟಕರಂಗವಾದಂತಿತ್ತು. ಹಾಡು, ಚಪ್ಪಾಳೆ, ಕೇಕೆ ಎಲ್ಲದೂ ಕೇಳಿಬರುತ್ತಿತ್ತು. ಈ ನಡುವೆ ಕಾಂಗ್ರೆಸ್ ಶಾಸಕ, ಮಾತಿನ ಮಲ್ಲ, ಡೈಲಾಗ್ ಸರದಾರ ಪ್ರದೀಪ್ ಈಶ್ವರ್(Pradeep Eshwar) ಅಬ್ಬರ ಜೋರಾಗಿತ್ತು. ಇದು ಒಂದು ರೀತಿ ಹುಚ್ಚಾಟದಂತೆ ತೋರುತ್ತಿತ್ತು.

ಹೌದು, ಮುಂಗಾರು ಅಧಿವೇಶನ ಅರ್ಥವಿಲ್ಲದ ಅಧಿವೇಶನವಾಗಿದೆ. ವಿಪಕ್ಷಗಳಂತೂ ರಾಜ್ಯದಲ್ಲಿ ಬೇರಾವ ವಿಚಾರಗಳೇ ಇಲ್ಲವೆಂಬಂತೆ ಮುಡಾ ಹಗರಣ(Muda Scam) ಹಾಗೂ ವಾಲ್ಮೀಕಿ ಹಗರಣಗಳ(Valmiki Scam) ವಿಚಾರವೊಂದನ್ನೇ ಎತ್ತಿ ಎತ್ತಿ ಕೋಲಾಹಲ ಎಬ್ಬಿಸುತ್ತಿವೆ. ಇದರಿಂದ ಆಡಳಿತ ಪಕ್ಷ, ವಿರೋಧ ಪಕ್ಷಗಳು ಬದ್ಧ ವೈರಿಗಳಂತೆ ಕಿತ್ತಾಡುತ್ತಿವೆಯೇ ವಿನಃ ಯಾವ ಆರೋಗ್ಯಕರ ಚರ್ಚೆಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಸದನದೊಳಗಿರುವವರು ನಮ್ಮನ್ನು ಇಲ್ಲಿಗೆ ಆರಿಸಿ ಕಳುಹಿಸಿದ ನಾಡಿನ ಜನ ನೋಡುತ್ತಿರುತ್ತಾರೆ ಎಂಬ ಪರಿಜ್ಞಾನವೂ ಇಲ್ಲದೆ ಬಾವಿಗಿಳಿದು ಹಾಡು ಹೇಳುತ್ತಾ, ಚಪ್ಪಾಳೆ ಹಾಕುತ್ತಾ, ಕೇಕೆ ಹೊಡೆಯುತ್ತ ಮನ ಬಂದಂತೆ ವರ್ತಿಸುತ್ತಿದ್ದಾರೆ. ಈ ವೇಳೆ ಪ್ರದೀಪ್ ಈಶ್ವರ್ ಅಂತೂ ರೊಚ್ಚಿಗೆದ್ದು ವರ್ತಿಸಿದ್ದಾರೆ.

https://www.facebook.com/share/v/k5EZeykEf8PCWfhy/?mibextid=w8EBqM
ನಿಜ, ಬಿಜೆಪಿ ಹಾಗೂ ಜೆಡಿಎಸ್(BJP-JDS) ನ ಮೈತ್ರಿ ದೋಸ್ತಿಗಳು ಕಾಂಗ್ರೆಸ್ ಮಾಡಿದ ಹಗರಣವನ್ನು ವಿರೋಧಿಸುತ್ತಾ, ಸಿಎಂ ರಾಜಿನಾಮೆಗೆ ಆಗ್ರಹಿಸಿ ಬಾವಿಗಿಳಿದು ಪ್ರತಿಭಟಿಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ನ ಕೆಲ ಶಾಸಕರು, ಮಂತ್ರಿಗಳು ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಮಾತ್ರ ಮೈ ಮೇಲೆ ಆವೇಶಬಂದಂತೆ ವರ್ತಿಸುತ್ತಿದ್ದರು. ಕೋವಿಡ್ ಟೈಮ್ ಅಲ್ಲಿ ಬಿಜೆಪಿ ಮಾಡಿದ ಭ್ರಷ್ಟಾಚಾರವನ್ನು ಕೂಗಿ ಕೂಗಿ ಹೇಳಿ ಕೊನೆಗೆ ಕಿರುಚಲು ಪ್ರಾರಂಭಿಸಿದರು.

ಆರಂಭದಲ್ಲಿ ಸ್ಪೀಕರ್ ಎಚ್ಚರಿಕೆ ನೀಡಿದರೂ ಪ್ರದೀಪ್ ಕೇಳಲಿಲ್ಲ. ಹುಚ್ಚುಹುಚ್ಚರಂತೆ ವರ್ತಿಸಲು ಶುರುಮಾಡಿದರು. ಕೊನೆಗೆ ನೋಡಿ ನೋಡಿ ಸಾಕಾದ ಸ್ಪೀಕರ್ ಕಬ್ಬಿಣ ಕೊಟ್ಟು ಕೂರಿಸಿ ಅವರಿಗೆ ಎಂದು ಹೇಳೇ ಬಿಟ್ಟರು. ಇಷ್ಟಾದರೂ ಪ್ರದೀಪ್ ಅಬ್ಬರ ನಿಲ್ಲಲಿಲ್ಲ. ಈ ವೇಳೆ ಅಕ್ಕ ಪಕ್ಕದ ಶಾಸಕರು ಬಂದು ಜೋರು ಮಾಡಿ ಕೂರಿಸಲು ಯತ್ನಿಸಿದರೂ ಅವರ ಮಾತಿಗೂ ಸೊಪ್ಪು ಸಾಕಲಿಲ್ಲ ಈ ಶಾಸಕ ಮಹಾಶಯ. ತನ್ನ ದೊಂಬರಾಟವನ್ನು ಮುಂದುವರಿಸಿಯೇ ಇದ್ದರು.

ಹೊರಗೆ ಪಾಠ-ಪ್ರವಚನ ಮಾಡಿಕೊಂಡು, ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಶಾಸಕರಾಗಿರುವ ಇವರು ಸದನದೊಳಗೆ ಇತರರಿಗೆ ಮಾದರಿಯಾಗುವಂತೆ ವರ್ತಿಸಬೇಕು. ಅದು ಬಿಟ್ಟು ಮನಬಂದಂತೆ ಹೀಗೆ ಹುಚ್ಚಾಟ ಆಡುವುದು ಎಷ್ಟು ಸರಿ? ಯಾವಗ ಇವರಿಗೆಲ್ಲಾ ಬದ್ದಿ ಬರುತ್ತದೆಯೋ ದೇವರಿಗೇ ಗೊತ್ತು.

Leave A Reply

Your email address will not be published.