Mohan Bhagavat: ಕೆಲವರು ಸೂಪರ್ ಮ್ಯಾನ್ ಆಗಿ ಬಳಿಕ ದೇವರಾಗಲು ಹಾತೊರೆಯುತ್ತಾರೆ !! ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರಾ ಮೋಹನ್ ಭಾಗವತ್ ?!
Mohan Bhagavat: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್(Mohan Bhagavat) ಅವರು ನೀಡಿದ ಹೇಳಿಕೆಯೊಂದು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಖಿದೆ. ಅಲ್ಲದೆ ಸಂಚಲನದ ಕಿಡಿ ಹೊತ್ತಿಸಿದೆ.
ಹೌದು, ಜಾರ್ಖಂಡ್‌ನ(Jarkhand) ಗುಮ್ಲಾದಲ್ಲಿ ವಿಕಾಸ್ ಭಾರತಿ ಆಯೋಜಿಸಿದ್ದ ಕಾರ್ಯಕರ್ತರ ಮಾತನಾಡಿದ ಭಾಗವತರು ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಕೆಲವರು ಸೂಪರ್ ಮ್ಯಾನ್ ಆಗಲು ಬಯಸುತ್ತಾರೆ, ನಂತರ ‘ಭಗವಾನ್’ (ದೇವರು) ಆಗಲು ಬಯಸುತ್ತಾರೆ, ಬಳಿಕ ವಿಶ್ವರೂಪ ಹೊಂದಲು ನೋಡುತ್ತಾರೆ. ಆದರೆ ಮುಂದೇನು ಎಂದು ಯಾರಿಗೂ ಖಚಿತವಿಲ್ಲ. ಆಂತರಿಕ ಮತ್ತು ಬಾಹ್ಯ ಆತ್ಮದ ಬೆಳವಣಿಗೆಗೆ ಅಂತ್ಯವಿಲ್ಲ ಮತ್ತು ಮಾನವೀಯ ಕಾರ್ಯಕಕ್ಕಾಗಿ ಅವಿರತವಾಗಿ ಶ್ರಮಿಸಬೇಕುʼʼ ಎಂದು ಹೇಳಿದ್ದು ಎಲ್ಲರೂ ಎಚ್ಚೆತ್ತು ನೋಡುವಂತೆ ಮಾಡಿದೆ. ಯಾಕೆಂದರೆ ಇದು ಭಾಗವತರು ಪ್ರಧಾನಿ ಮೋದಿ(PM Modi) ಮೇಲೆ ಮಾಡಿದ ಪರೋಕ್ಷ ವಾಗ್ದಾಳಿ ಎಂದೇ ಹಲವರು ವಿಶ್ಲೇಷಿಸುತ್ತಿದ್ದಾರೆ.
ಅಲ್ಲದೆ ‘ಹೆಚ್ಚಿನದಕ್ಕೆ ಯಾವಾಗಲೂ ಅವಕಾಶವಿದೆ ಎಂದು ಯೋಚಿಸಬೇಕು. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಿಮವಾಗಿ ಅಭಿವೃದ್ದಿಗೆ ಯಾವುದೇ ಕೊನೆ ಎಂಬುದೇ ಇಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಹೆಚ್ಚಿನದ್ದನ್ನು ಸಾಧಿಸಲು ದುಡಿಯಬೇಕು ಎಂದು ಮೋಹನ್ ಬಾಗವತ್’ ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಭಾಗವತ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಸ್ವಯಂ ಘೋಷಿತ ನಾನ್-ಬಯಾಲಾಜಿಕಲ್ ಪ್ರಧಾನಿಗೆ ಜಾರ್ಖಂಡ್‌ನಿಂದ ಲೋಕ ಕಲ್ಯಾಣ ಮಾರ್ಗವನ್ನು ಗುರಿಯಾಗಿಸಿಕೊಂಡು ನಾಗ್ಪುರದಿಂದ ಉಡಾವಣೆಯಾದ ಈ ಇತ್ತೀಚಿನ ಅಗ್ನಿ ಕ್ಷಿಪಣಿಯ ಸುದ್ದಿ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
Personality Test: ಮೊಬೈಲ್ ಸ್ಕ್ರೀನ್ ಲಾಕ್ ಸೀಕ್ರೆಟ್ ಒಂದು ಇಲ್ಲಿದೆ! ಏನದು ಗೊತ್ತಾ?