Serial Actress: ‘ಅದು’ ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ, ಸಿನಿಮಾ ಆಫರ್‌ಗಾಗಿ ದೇಹದ ಬದಲಾವಣೆ ಅಗತ್ಯ” ಎಂದ ಖ್ಯಾತ ಸಿರೀಯಲ್‌ ನಟಿ”!!

Share the Article

Serial Actress: ಸಿನಿಮಾ ಇಂಡಸ್ಟ್ರಿನಲ್ಲಿ ಸಾಧನೆ ಮಾಡೋದು ಹಲವು ಹುಡುಗಿಯರ ಕನಸು. ಆದ್ರೆ ಸಿನಿಮಾದಲ್ಲಿ ಚಾನ್ಸ್ ಸಿಗಬೇಕು ಅಂದ್ರೆ ದೇಹ ಫಿಟ್ ಇರಬೇಕು ಅನ್ನೋದು ಒಂದು ಅಂಶ ಇದೆ. ಅಂತೆಯೇ ಸಿನಿಮಾಗಾಗಿ ಕೆಲ ನಟಿಯರು ದೇಹದ ಕೆಲವು ಭಾಗಗಳನ್ನು ಸರ್ಜರಿ ಮಾಡಿರೋದು ಕೇಳಿರುತ್ತೀರಿ. ಅಂತೆಯೇ ಇದೀಗ ತೆಲುಗು ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಶ್ರೀಸತ್ಯ ಸಿನಿಮಾಗಾಗಿ ಆ ಒಂದು ಸರ್ಜರಿ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿದ್ದಾರೆ.

ಶ್ರೀಸತ್ಯ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ. ಈ ಮೊದಲು ಶ್ರೀಸತ್ಯ ಶೈಲಜಾ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಅಲ್ಲದೇ ಧಾರಾವಾಹಿಗಳಲ್ಲೂ (Serial Actress) ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇತ್ತೀಚೆಗೆ ಶ್ರೀಸತ್ಯ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಅವರ ತುಟಿಗಳು ಮೊದಲಿಗಿಂತ ಅಗಲವಾಗಿ ಕಾಣುತ್ತಿದ್ದನ್ನು ನೋಡಿ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಸಲುವಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಸತ್ಯ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದು, ಲಿಪ್ ಸರ್ಜರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಹೌದು, ಸಿನಿಮಾ ಅವಕಾಶಗಳಿಗಾಗಿ ಶ್ರೀಸತ್ಯ ಸರ್ಜರಿಗೆ ಒಳಗಾಗಿದ್ದರು. “ತುಟಿಗಳು ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ. ಇದು ನನ್ನ ನಿರ್ಧಾರ ಮತ್ತು ಅಗತ್ಯತೆಗಾಗಿ ಎಂದು ಮಾಡಿಸಿದೆ. ಅಲ್ಲದೇ ನನ್ನ ಸ್ನೇಹಿತರು ಸಹ ಈಗ ನೀನು ಹೀರೋಯಿನ್‌ ತರ ಕಾಣುತ್ತೀಯಾ ಎಂದು ಹೇಳಿದ್ದಾರೆ. ಪಾಸಿಟಿವ್ ರೆಸ್ಪೋನ್ಸ್ ದೊರಕಿರುವುದು ಖುಷಿ ತಂದಿದೆ. ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ ಶ್ರೀಸತ್ಯ.

 

Leave A Reply