Marriage News: ಸಪ್ತಪದಿ ತುಳಿಯಬೇಕೆನ್ನುವಷ್ಟರಲ್ಲಿ ವರನ ಮೊಬೈಲಿಗೆ ಬಂತು ವಧುವಿನ ಆ ಫೋಟೋ! ಮುಂದೇನಾಯ್ತು

Marriage News: ಮದುವೆಯ ಎಲ್ಲಾ ವಿಧಿ ವಿಧಾನಗಳು ಮುಗಿದಿತ್ತು. ಇನ್ನೇನು ವಧುವನ್ನು ಮನೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ವರನ ಮೊಬೈಲ್‌ಗೆ ಬಂತು ಅದೊಂದು ಕರೆ, ಜೊತೆಗೆ ಫೋಟೋಗಳು. ನಂತರ ನಡೆದಿದ್ದೇ ಬೇರೆ. ಬನ್ನಿ ಆಗಿದ್ದೇನು? ತಿಳಿಯೋಣ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆ ವಿಧಿವಿಧಾನಗಳು ಮುಗಿದಿದ್ದು, ಈ ನಡುವೆ ವಧುವಿನ ಪ್ರೇಮಿಯೋರ್ವ ವರನಿಗೆ ತಮ್ಮಿಬ್ಬರ ಸಂಬಂಧದ ಕುರಿತು ಹೇಳಿದ್ದು, ಜೊತೆಗೆ ತಾವಿಬ್ಬರು ಜೊತೆಯಾಗಿರುವ ಫೋಟೋ, ವೀಡಿಯೋಗಳನ್ನು ಕಳುಹಿಸಿದ್ದಾನೆ. ಕೂಡಲೇ ಚಿಂತೆಗೀಡಾದ ವರ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾನೆ.
ತಾವಿಬ್ಬರು ಪ್ರೀತಿಸುತ್ತಿದ್ದು, ವಧುವನ್ನು ಬಿಟ್ಟು ಹೋಗುವಂತೆ ಪ್ರೇಮಿ ವರನಿಗೆ ಮೊದಲಿಗೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಸಾಕ್ಷಿ ಏನು ಎಂದು ವರ ಕೇಳಿದಾಗ, ಫೋಟೋ, ವೀಡಿಯೋ ಕಳಿಸಿದ್ದಾನೆ ಪ್ರೇಮಿ. ಇದನ್ನು ಕಂಡ ವರ ಕೊನೆಯ ಹಂತದ ವಿಧಿವಿಧಾನಗಳನ್ನು ಮುಂದುವರಿಸಲು ನಿರಾಕರಿಸಿದ್ದು, ಮದುವೆ ಕ್ಯಾನ್ಸಲ್ ಮಾಡಿದ್ದಾರೆ.
ಅನಂತರ ವರನ ಕಡೆಯವರು ಹಿಂತಿರುಗಿದ್ದಾರೆ. ಕಮಲ್ ಸಿಂಗ್ ಎಂಬಾತ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ವರನ ಕಡೆಯಲು ವಧುವಿನ ಮನೆಗೆ ಬಂದಿದ್ದು, ಊಟ ಎಲ್ಲಾ ಮಾಡಿದ್ದರು. ಕೊನೆಗೆ ಸಪ್ತಪದಿ ಮತ್ತು ವಧುವನ್ನು ಕಳುಹಿಸಿಕೊಡುವ ಶಾಸ್ತ್ರ ಮಾತ್ರ ಬಾಕಿ ಇತ್ತು, ಆ ಕ್ಷಣದಲ್ಲೇ ವರನ ಮೊಬೈಲ್‌ಗೆ ಕರೆ ಬಂದು, ಫೋಟೋ, ವೀಡಿಯೋ ಎಲ್ಲಾ ಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.