Pavitra Gowda: ನಟ ದರ್ಶನ್‌ ನಂತರ ಇದೀಗ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು

Share the Article

Pavitra Gowda; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ  ಎ-1 ಆರೋಪಿಯಾಗಿರುವ ಪವಿತ್ರಾ ಗೌಡ ಅವರಿಗೂ ಇದೀಗ ಆರೋಗ್ಯ ಸಮಸ್ಯೆ ಎದುರಾಗಿದೆ. ಈಗಾಗಲೇ ನಟ ದರ್ಶನ್‌ ಅವರಿಗೂ ಅಜೀರ್ಣ, ಭೇದಿ, ಕೈ ನೋವು, ನಿದ್ರಾಹೀನತೆ ಮುಂತಾದ ಸಮಸ್ಯೆ ಉಂಟಾಗಿತ್ತು. ಪವಿತ್ರಾ ಅವರಿಗೂ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಇದೀಗ ಅವರಿಗೆ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

ಪವಿತ್ರಾ ಗೌಡಗೂ ಜೈಲಿನ ಊಟ ದೇಹದಕ್ಕೆ ಸರಿ ಹೊಂದುತ್ತಿಲ್ಲವಂತೆ. ಅಷ್ಟು ಮಾತ್ರವಲ್ಲದೇ ಪವಿತ್ರಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಎರಡು ದಿನಗಳ ಹಿಂದೆ ಆಸ್ಪತ್ರೆ ವಾರ್ಡ್‌ ನಲ್ಲಿ ಜನರಲ್‌ ಚೆಕಪ್‌ ಮಾಡಿಸಿಕೊಂಡಿದ್ದಾರೆ. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಂಡಿದೆ. ಉಪಾಹಾರದ ಬದಲಿಗೆ ಹೆಚ್ಚಾಗಿ ಹಣ್ಣು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ.

ಐಷರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ, ಇದೀಗ ಕಳ್ಳತನ, ಕೊಲೆ ಕೇಸ್‌, ಗಾಂಜಾ ಪ್ರಕರಣಗಳಲ್ಲಿ ಬಂಧನವಾಗಿರೋ ಮಹಿಳೆಯರ ಜೊತೆ ಒಂದೇ ಬ್ಯಾರಕ್‌ನಲ್ಲಿ ಇದ್ದಾರೆ. ಈ ಕಾರಣದಿಂದ ಅವರು ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ.

Leave A Reply