Darshan: ಜೈಲಿಂದ ಬಿಡುಗಡೆ ಆದ ತಕ್ಷಣ ರೇಣುಕಾ ಸ್ವಾಮಿ ಕುಟುಂಬಕ್ಕೆ ಮಾಡೋದೇನಂದ್ರೆ.. !! ಧನ್ವೀರ್ ಬಳಿ ದರ್ಶನ್ ಹೇಳಿ ಕಳಿಸಿದ್ದೇನು?
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ. ಆದರೆ ಈ ನಡುವೆ ಕುಟುಂಬದವರು, ಆಪ್ತರು ಪ್ರಭಾವಿಗಳು ಬೇಲ್ ಗಾಗಿ ಓಡಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಇವರು ಜೈಲಿಗೆ ತೆರಳಿ ದರ್ಶನ್ ನನ್ನು ಭೇಟಿ ಮಾಡಿಕೊಂಡು ಬರುತ್ತಿದ್ದಾರೆ.
ದರ್ಶನ್ ಪರಮಾಪ್ತ, ದರ್ಶನ್ ನನ್ನು ಗುರುವೆಂದೇ ಸ್ವೀಕರಿಸಿರುವ ಕನ್ನಡದ ಯುವ ನಟ ಧನ್ವೀರ್(Dhanweer) ಅವರು ಕೂಡ ಇದೀಗ ಜೈಲಿಗೆ ತೆರಳಿ ದರ್ಶನ್ ನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಅಂತೆಯೇ ಇದೆಲ್ಲ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧನ್ವೀರ್ ಅವರು ತನ್ನೊಂದಿಗೆ ದರ್ಶನ್ ಹೇಳಿದ ಆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಹೌದು, ದರ್ಶನ್ ಜೊತೆ ಮಾತಕತೆ ನಡೆಸಿ ಬಂದ ಧನ್ವೀರ್ ಬಳಿ ಮಾಧ್ಯಮದವರು ಹಲವು ವಿಚಾರಗಳ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಎಲ್ಲದಕ್ಕೂ ಧನ್ವೀರ್ ಅವರು ಸಮಾಧಾನದಿಂದ ಉತ್ತರಿಸಿದ್ದಾರೆ. ಅಲ್ಲದೆ ಜೈಲಿನಿಂದ ಹೊರ ಬಂದ ತಕ್ಷಣ ದರ್ಶನ್ ಅವರು ರೇಣುಕಾ ಸ್ವಾಮಿ ಕುಟುಂಬಕ್ಕೆ(Renukaswamy Family) ಎಲ್ಲಾ ರೀತಿಯಿಂದಲೂ ಸಹಾಯ, ಸಹಕಾರ ನೀಡಬೇಕಂಬ ಚಿಂತನೆಯಲ್ಲಿದ್ದಾರಂತೆ. ಈ ಬಗ್ಗೆ ಧನ್ವೀರ್ ಜೊತೆ ಚರ್ಚಿಸಿದ್ದಾರಂತೆ !!
ಅಲ್ಲದೆ ಏನೇನಾಯ್ತು ನೋಡಿ ಅಂತ ಘಟನೆ ಬಗ್ಗೆ ದರ್ಶನ್ ಸಂಕಟದಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ನೋವಿನಲ್ಲಿಯೂ ಸಹ ಅಭಿಮಾನಿಗಳಿಗೆ ಕಿವಿಮಾತು ಹೇಳಿ ಮನವಿ ಮಾಡಿದ್ದು, ಎಲ್ಲರಿಗೂ ಸೈಲೆಂಟ್ ಆಗಿರುವಂತೆ ಕೆಂಚ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
Mysore : ಮೈಸೂರು ಮಹಾರಾಜ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಅರೆಸ್ಟ್ !!