Uppinangady: 1 ಕೋಟಿ ಲಾಟರಿ ಒಲಿದ ವದಂತಿ; ಟೈಲರ್‌ ಏನಂದ್ರು ನೋಡಿ

Uppinangady: ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂಪಾಯಿ ಬಹುಮಾನ ಇಲ್ಲಿನ ಟೈಲರ್‌ ಒಬ್ಬರಿಗೆ ದೊರಕಿದೆ ಎಂಬ ಸುದ್ದಿ ಹರಡಿದ್ದು, ಟೈಲರ್‌ಗೆ ಬೆಳಗ್ಗಿನಿಂದ ಅಭಿನಂದನೆಯ ಕರೆ, ಸಹಾಯ ಮಾಡಿ ನಮಗೆ ಎನ್ನುವ ಮಾತಿಗೆ ಉತ್ತರ ಕೊಟ್ಟು ಕೊಟ್ಟು ಟೈಲರ್‌ ರನ್ನು ಹೈರಾಣಾಗುವಂತೆ ಮಾಡಿದೆ.

ಕೆಲವು ದಿನದಿಂದ ರಥಬೀದಿಯಲ್ಲಿ ಗಣಪತಿ ಮಠದ ಬಳಿ ಟೈಲರ್‌ ವೃತ್ತಿ ಮಾಡಿಕೊಂಡಿರುವ ಕೂಸಪ್ಪ ಎಂಬುವವರಿಗೆ ಒಂದು ಕೋಟಿ ಹಣ ಒಲಿದಿದೆ ಎಂಬ ಸುದ್ದಿ ಹರಡಿತ್ತು. 30 ಲಕ್ಷ ರೂಪಾಯಿ ತೆರಿಗೆ ಕಟ್‌ ಆಗಿ 70 ಲಕ್ಷ ರೂಪಾಯಿ ಅವರ ಖಾತೆಗೆ ಜಮೆಯಾಗಿದೆ ಎಂಬ ಮಾತುಗಳು ಕೇಳಿ ಬರತೊಡಗಿದವು.

ನಂತರ ಮಾಧ್ಯಮದವರು ಭೇಟಿ ನೀಡಿದಾಗ ಲಾಟರಿ ನನಗೆ ಬಂದೇ ಇಲ್ಲ, ಈ ಸುಳ್ಸುದ್ದಿ ಹೇಗೆ ಹರಡಿತು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನನಗಂತೂ ಬಂದ ಕರೆಗಳಿಗೆ ಉತ್ತರಿಸಿ ಉತ್ತರಿಸಿ ಸಾಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Samantha Ruth Prabhu: ಸಿನಿ ರಂಗಕ್ಕೆ ಗುಡ್‌ಬೈ ಹೇಳಲಿದ್ದಾರಾ ಸ್ಯಾಮ್‌? ಒಪ್ಪಿಕೊಂಡ ಸಿನಿಮಾದಿಂದ ಸಮಂತಾ ಹೊರಕ್ಕೆ

Leave A Reply

Your email address will not be published.