Daiva Miracle: ಕರಾವಳಿಯಲ್ಲಿ ದೈವ ಪವಾಡ; 24 ಗಂಟೆಯಲ್ಲಿ ಕಳ್ಳನನ್ನು ಹಿಡಿದು ಕೊಟ್ಟ ದೈವ

Share the Article

Daiva Miracle: ಕರಾವಳಿ ಜನರ ನಂಬುಗೆಯ ದೈವದಿಂದ ಮತ್ತೊಂದು ಪವಾಡಸದೃಶ ಘಟನೆ ನಡೆದಿದೆ. ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳವು ಮಾಡಿದ ಘಟನೆಯೊಂದು ನಡೆದಿದ್ದು, ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ. ಬಂಧಿಸಲು ಸೂಚನೆ ನೀಡಿದ್ದೇ ದೈವ..! ಬನ್ನಿ ಏನಿದು ಚಮತ್ಕಾರ? ತಿಳಿಯೋಣ.

ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಜು.5 (ಮರುದಿನ) ರಂದು ಕಳ್ಳತನ ಸುದ್ದಿ ಬೆಳಕಿಗೆ ಬಂದಿತ್ತು. ನಂತರ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆದಿದ್ದು, ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಇದೊಂದು ಅಪಚಾರವಲ್ಲವೇ ಎಂದು ದೈವಕ್ಕೆ ಪ್ರಶ್ನೆಯನ್ನು ಹಾಕಲಾಗಿತ್ತು.

ಆದರೆ ದೈವ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ಅಭಯ ನೀಡಿತ್ತು. ಜು.6 ರಂದು ಬೆಳಗ್ಗೆ ಕಳ್ಳ ಪತ್ತೆಯಾಗಿದ್ದಾನೆ.

ನಗರದಿಂದ ಪರಾರಿಯಾಗಲು ಕಳ್ಳ ಪ್ರಯತ್ನ ಪಡುತ್ತಿರುವಾಗ ಬಸ್‌ ನಿಲ್ದಾಣದಲ್ಲಿ ಈತ ಸಿಕ್ಕಿ ಬಿದ್ದಿದ್ದಾನೆ. ಬಸ್‌ ನಿಲ್ದಾಣ ಪರಿಸರದಲ್ಲಿ ಇದ್ದ ಆಟೋ ಚಾಲಕರೊಬ್ಬರಿಂದ ಈತನ ಪತ್ತೆಯಾಗಿದೆ.

ಈ ಕಳ್ಳ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಲಗಿದ್ದು, ಸಿಸಿಟಿವಿಯಲ್ಲಿ ಕಳ್ಳನ ವೀಡಿಯೋ ನೋಡಿದ್ದ ಆಟೋ ಚಾಲಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರ ಸೆರೆಯಾದ ಕಳ್ಳನಾಗಿದ್ದಾನೆ.

ಈತ ಬಾಗಲಕೋಟೆಗೆ ಹೋಗಬೇಕಾದ ಬಸ್ಸಿಗೆ ಕಾಯುತ್ತಾ ನಿದ್ದೆಗೆ ಜಾರಿದ್ದ. ಬೆಳಗ್ಗೆ ಎಂಟು ಗಂಟೆಯವರೆಗೂ ಗಾಢ ನಿದ್ದೆಯಲ್ಲಿ ಮಲಗಿದ್ದ ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

Chanakya Niti Tips: ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ!

Leave A Reply

Your email address will not be published.