Kiccha Sudeep: ‘ನಾನು ಇದುವರೆಗೂ ಬಾಸ್ ಎಂದು ಕರೆದದ್ದು ಅವರೊಬ್ಬರನ್ನು ಮಾತ್ರ’ ಎಂದ ಸುದೀಪ್- ಕಿಚ್ಚನ ಆ ಬಾಸ್ ಯಾರು ?

Kiccha Sudeep: ಅಭಿನಯ ಚಕ್ರವರ್ತಿ, ಬಾದ್‌ ಶಾ ನಟ ಕಿಚ್ಚ ಸುದೀಪ್‌ ಅಪಾರ ಅಭಿಮಾನಿಗಳ ಆರಾಧ್ಯ ದೈವ. ಅಭಿಮಾನಿಗಳು ಪ್ರೀತಿಯಿಂದ ಸುದೀಪ್‌ ಅವರನ್ನು ಬಾಸ್‌(Boss) ಎಂದು ಕರೆಯುತ್ತಾರೆ. ಆದರೆ ಸುದೀಪ್‌(Kiccha Sudeep) ತಮ್ಮ ಜೀವನದಲ್ಲಿ ಬಾಸ್ ಎಂದು ಕರೆದಿದ್ದು ಇಬ್ಬರಿಗೆ ಮಾತ್ರವಂತೆ. ಸದಾ ತನ್ನದೇ ಆದ ವಿಶಿಷ್ಟ ಗತ್ತಿನ ಮೂಲಕ ಜನರ ಮನ ಗೆದ್ದ ಸುದೀಪ್ ಗೆ ಬಾಸ್ ಆದ ಆ ವ್ಯಕ್ತಿ ಯಾರು ಎಂಬುದು ಅಭಿಮಾನಿಗಳ ಕುತೂಹಲ. ಹಾಗಿದ್ರೆ ಯಾರದು ಕಿಚ್ಚನ ಬಾಸ್ ?

ಇಂದ್ರಜಿತ್ ಮಗ ಸಮರ್ಜಿತ್ ಲಂಕೇಶ್(Samarjith Lankesh) ಅವರ ಗೌರಿ ಸಿನಿಮಾ(Gouri Movie) ತೆರೆಗೆ ಬರಲು ಸಿದ್ದವಾಗಿದ್ದು ಈ ಮೊದಲು ಸಮರ್ಜಿತ್ ಕಿಚ್ಚ ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳು ಎದುರಾಗಿದ್ದು, ಸುದೀಪ್ ಅವರ ಬಾಸ್ ಯಾರು ಎಂಬ ಪ್ರಶ್ನೆ ಕೂಡ ಕೇಳಲಾಗಿದೆ. ಇದಕ್ಕೆ ಸುದೀಪ್ ಅಚ್ಚರಿ ಉತ್ತರವನ್ನು ನೀಡಿದ್ದಾರೆ.

ಸಮರ್ಜಿತ್ ಅವರು ನಿಮ್ಮ ಬಾಸ್ ಯಾರು ಎಂದು ಕಿಚ್ಚನಿಗೆ ಕೇಳಿದಾಗ ‘ನಾನು ಲೈಪ್‌ ಅಲ್ಲಿ ಇಬ್ಬರಿಗೆ ಬಾಸ್‌ ಅಂತಾ ಕರೆದಿರುವುದು. ಒಂದು ನಮ್ಮ ತಂದೆಗೆ. ಅವರನ್ನು ಇವತ್ತಿಗೂ ಬಾಸ್‌ ಅಂತಾ ಕರೆಯುತ್ತೇನೆ. ಇನ್ನೊಂದು ವಿಷ್ಣು ಸರ್‌. ಅವರು ಒಬ್ಬ ನಟನಾಗಿ ಮಾತ್ರವಲ್ಲದೇ, ನಟನೆಗಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ. ಈ ಗತ್ತು ಅದೆನೆಲ್ಲಾ ಮೊದಲು ನೋಡಿದ್ದು ಅವರಲ್ಲೆ ನಾನು. ಆ ವ್ಯಕ್ತಿ ಅವರಿದ್ದ ರೀತಿ, ಆ ಗತ್ತು, ಅವರೇ ನನಗೆ ಎಲ್ಲಾ ಸಮಯದಲ್ಲೂ ಫೇವರೇಟ್‌ ಎಂದು ಹೇಳಿದ್ದಾರೆ

ಈ ವೇಳೆ ಸಮರ್ಜಿತ್ ನನ್ನ ಮೆಚ್ಚಿನ ಹೀರೋ ನೀವು ನಿಮ್ಮ ಮೆಚ್ಚಿನ ಹೀರೋ ಯಾರು ಎನ್ನುವ ಸಮರ್ಜಿತ್ ಲಂಕೇಶ್ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ವಿಷ್ಣು ಸರ್‌ ಎಂದು ಉತ್ತರಿಸಿದ್ದಾರೆ. ಕನ್ನಡದಲ್ಲಿ ನನ್ನ ಆಲ್‌ ಟೈಮ್‌ ಫೇವರೇಟ್‌ ಅಂದ್ರೆ ವಿಷ್ಣು ಸರ್‌. ನಾನು ಯಾವಾಗಲೂ ಎಲ್ಲಾ ಕಡೆಯಲ್ಲೂ ಅದನ್ನು ಹೇಳಿದ್ದೇನೆ ಎಂದಿದ್ದಾರೆ.

Silk Saree Cleaning: ರೇಷ್ಮೆ ಸೀರೆಯನ್ನು ಮನೆಯಲ್ಲೇ ಈ ರೀತಿ ವಾಶ್ ಮಾಡಿದ್ರೆ ಸಾಕು ಹೊಸದರಂತೆ ಕಾಣುತ್ತೆ!

Leave A Reply

Your email address will not be published.