Kichcha Sudeep: ಸ್ಯಾಂಡಲ್‌ವುಡ್‌ ಬಾದ್‌ಶಾ ಕಿಚ್ಚ ಸುದೀಪ್‌ ಒಟ್ಟು ಆಸ್ತಿ ಎಷ್ಟು? ಕುತೂಹಲಕಾರಿ ಸಂಗತಿ ಇಲ್ಲಿದೆ

Kichcha Sudeep : ಅಭಿನಯ ಚಕ್ರವರ್ತಿ ಎಂದು ಖ್ಯಾತಿ ಪಡೆದಿರುವ ಸುದೀಪ್ ಅವರು ‘ಸ್ಪರ್ಷ’ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಇಂದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಕನ್ನಡ ಜೊತೆಗೆ ಇತರ ಭಾಷೆಗಳಲ್ಲೂ ನಟಿಸಿ ಸುದೀಪ್ ಸೈ ಎನಿಸಿಕೊಂಡಿದ್ದಾರೆ. ಇನ್ನು ಶ್ರೀಮಂತ ನಟರಲ್ಲಿ ಒಬ್ಬರಾದ ಸುದೀಪ್ (Sudeep) ಐಷಾರಾಮಿ ಜೀವನವನ್ನೇ ನಡೆಸುತ್ತಿದ್ದು, ಸುದೀಪ್ ಅವರ ಒಟ್ಟು ಆಸ್ತಿ ಬಗ್ಗೆ ಹೇಳುವುದಾದರೆ ಶ್ರೀಮಂತ ಸಿನಿಮಾ ನಟರಲ್ಲಿ ಇವರು ಒಬ್ಬರಾಗಿದ್ದಾರೆ.

ಹೌದು, ಕಿಚ್ಚ ಸುದೀಪ್, ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್. ಅಭಿನಯ ಚಕ್ರವರ್ತಿ, ಬಾದ್‌ಶಾ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸುದೀಪ್‌ ಆಸ್ತಿ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಸುದೀಪ್ ಅವರ ಆಸ್ತಿ ಮೌಲ್ಯ ಅಂದಾಜು 125 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿರುವ ಸುದೀಪ್ ಅವರ ಒಡೆತನದ ಮನೆ 20 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇನ್ನು ಇವರ ಬಳಿ ಐಷಾರಾಮಿ ಕಾರುಗಳಿವೆ. ಟೊಯೊಟಾ ವೆಲ್ ಫೈರ್, ಲ್ಯಾಂಬೋರ್ಗಿನಿ, ಸ್ಲೀಕ್ ಹಮ್ಮರ್ 3, ಜೀಪ್ ಕಂಪಾಸ್ ಜೊತೆಗೆ ನಟ ಸಲ್ಮಾನ್ ಖಾನ್ ಉಡುಗೊರೆಯಾಗಿ ನೀಡಿದ ಬಿಎಂಡಬ್ಲ್ಯೂ ಕೂಡ ಇದೆ.

ಸಿನಿಮಾಗಳ ಜೊತೆಗೆ ಸುದೀಪ್ ಅವರಿಗೆ ಇತರ ಆದಾಯ ಮೂಲಗಳಿಂದಲೂ ಹಣ ಹರಿದು ಬರ್ತಿದೆಯಂತೆ. ಪ್ರತಿ ಸಿನಿಮಾಗೂ ಭಾರೀ ಸಂಭಾವನೆಯನ್ನೇ ಪಡೆಯುವ ನಟ ಸುದೀಪ್, ಬ್ರ್ಯಾಂಡ್ ಪ್ರಚಾರಕ್ಕಾಗಿ ಬಿಗ್ ಅಮೌಂಟ್ ಚಾರ್ಜ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಪ್ರತಿ ಬ್ರ್ಯಾಂಡ್ನ ಪ್ರಚಾರ ರಾಯಭಾರಿ ಆಗಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ವರದಿ ಆಗಿದೆ.

ಸದ್ಯ ಕರ್ನಾಟಕ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲೂ ಸುದೀಪ್ ಆಸ್ತಿ ಹೊಂದಿದ್ದಾರೆ ಎಂದು ವರದಿ ಆಗಿದೆ. ಮುಂಬೈನಲ್ಲಿ ನಟ ಸುದೀಪ್ ಅವರು ತಮ್ಮದೇ ಫಾರ್ಮ್ ಹೌಸ್ ಹೊಂದಿದ್ದಾರೆ ಎನ್ನಲಾಗ್ತಿದೆ. ಮುಂಬೈನಲ್ಲಿರು ಫಾರ್ಮ್ ಹೌಸ್ ಕೂಡ ಕೋಟಿ ಕೋಟಿ ಬೆಲೆ ಬಾಳುತ್ತದಂತೆ.

ಸುದೀಪ್ ಕೇವಲ ನಟ ಮಾತ್ರವಲ್ಲ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ. ಸುದೀಪ್ ಅವರು ‘ಕಿಚ್ಚ ಕ್ರಿಯೇಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿ ಹಣ ಸಂಪಾದನೆ ಮಾಡಿದ್ದಾರೆ. ಅಲ್ಲದೇ ಪ್ರಸ್ತುತ ಸಿನಿಮಾದಲ್ಲಿ ನಟಿಸುತ್ತಿರುವ ಇವರ ಆದಾಯ ಇನ್ನೂ ಹೆಚ್ಚಾಗಲಿದೆ.

U.P: ರೋಗಿಗಳ ನೋಡವುದನ್ನು ಬಿಟ್ಟು, ಮಂಗನ ಜೊತೆ ಆಟವಾಡುತ್ತಾ, ರೀಲ್ಸ್‌ ಮಾಡಿದ ಆರು ನರ್ಸ್‌ಗಳ ಅಮಾನತು

 

Leave A Reply

Your email address will not be published.