Students HIV Case: 828 ವಿದ್ಯಾರ್ಥಿಗಳಲ್ಲಿ HIV ಪಾಸಿಟಿವ್‌; 47 ವಿದ್ಯಾರ್ಥಿಗಳಿಗೆ ಏಡ್ಸ್‌- ಆಘಾತಕಾರಿ ವಿಷಯ ಬಹಿರಂಗ

Share the Article

Students HIV Case: ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದ್ದು, ಕೆಲವೇ ಕೆಲವು ವಾರಗಳ ಅಂತರದಲ್ಲಿ ರಾಜ್ಯವೊಂದರ 828 ವಿದ್ಯಾರ್ಥಿಗಳಿಗೆ ಎಚ್‌ಐವಿ ಸೋಂಕು (HIV Positive) ತಗುಲಿದ್ದಲ್ಲದೇ, 47 ಮಂದಿ ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ಬಲಿಯಾಗಿರುವ (Death by Aids) ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಈ ಘಟನೆ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ನಡೆದಿದ್ದು, ಈ ರಾಜ್ಯದಲ್ಲಿ 828 ವಿದ್ಯಾರ್ಥಿಗಳು ಎಚ್ ಐವಿ ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆರೋಗ್ಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ತ್ರಿಪುರಾದಲ್ಲಿ ಎಚ್ ಐವಿ ಸೋಂಕಿಗೆ ಒಳಗಾಗಿರುವ 828 ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳು ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೋಂಕು ತಗುಲಿರುವ ವಿದ್ಯಾರ್ಥಿಗಳ ಪೋಷಕರು ಶ್ರೀಮಂತರಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದೂರದ ಊರು ಸೇರಿ, ಕೆಟ್ಟ ದಾರಿ ಹಿಡಿಯುತ್ತಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅದೂ ಒಂದೇ ರಾಜ್ಯದ ವಿದ್ಯಾರ್ಥಿಗಳಿಗೆ ಎಚ್‌ಐವಿ (Students HIV Case) ಪಾಸಿಟಿವ್ ಬರಲು ಕಾರಣ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ಎನ್ನಲಾಗಿದೆ. ಯಾರ ಗಮನಕ್ಕೆ ಬಾರದಂತೆ ವಿದ್ಯಾರ್ಥಿಗಳ ಗುಂಪು ರಹಸ್ಯವಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ನೇಹಿತರ ಜೊತೆ ಸಲುಗೆಯಿಂದ ಒಬ್ಬರ ಬಳಸಿದ ನೀಡಲ್, ಸಿರಿಂಜ್‌ಗಳನ್ನೇ ಇತರ ಸ್ನೇಹಿತರೂ ಬಳಸಿದ್ದಾರೆ. ಹೀಗಾಗಿ ಒಬ್ಬರ ಸಿರೆಂಜ್ ಮತ್ತೊಬ್ಬರು ಬಳಕೆ ಮಾಡುತ್ತಿರುವುದರಿಂದ ಎಚ್‌ಐವಿ ವೈರಾಣು ಅತಿ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತಿದೆ ಎಂದು ತಿಳಿದು ಬಂದಿದೆ.

VHP: ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಮುಸ್ಲಿಮರ ವ್ಯಾಪಾರ ನಿಷೇಧಿಸಿ- ವಿಎಚ್‌ಪಿ ಸರಕಾರಕ್ಕೆ ಮನವಿ

Leave A Reply

Your email address will not be published.