Kadaba: ಯುವಕನಿಂದ ಆತ್ಮಹತ್ಯೆಗೆ ಯತ್ನ; ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕ, ಸಹಾಯಕ್ಕೆ ಮೊರೆ

Share the Article

Kadaba: ಕಡಬದ ಪುಳಿಕುಕ್ಕು ಎಂಬಲ್ಲಿ ಯುವಕನೋರ್ವ ಕುಮಾರಧಾರ ನದಿಯ ನೆರೆಯ ನೀರಿನಲ್ಲಿ ಸಿಲುಕಿ, ಸಹಾಯಕ್ಕಾಗಿ ಯಾತನೆ ಪಡುತ್ತಿರುವ ದೃಶ್ಯವೊಂದು ಸೋಮವಾರ ಬೆಳಗ್ಗೆ ನಡೆದಿರುವ ಕುರಿತು ವರದಿಯಾಗಿದೆ.

ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಯತ್ನ ಮಾಡಿರುವ ಶಂಕೆ ಇದ್ದು, ನಂತರ ಪೊದೆಯಲ್ಲಿ ಸಿಲುಕಿದ್ದಾನೆ ಎಂದು ಅಂದಾಜಿಸಲಾಗಿದೆ. ಅದರ ಜೊತೆ ಪುಳಿಕುಕ್ಕು ಎಂಬಲ್ಲಿ ಬಸ್‌ಸ್ಟಾಂಡ್‌ನಲ್ಲಿ ಆತನದ್ದು ಎನ್ನಲಾದ ಬ್ಯಾಗ್‌ ಕೂಡಾ ದೊರಕಿದೆ. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಯುವಕನನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕಡಲ ಪೊಲೀಸರು ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ಮಾಡುತ್ತಿದ್ದಾರೆ.

Leave A Reply