Bharat Rice: APL-BPL ಪಡಿತರ ಚೀಟಿ ಹೊಂದಿರುವವರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌

Bharat Rice: ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಭಾರತ್‌ ಅಕ್ಕಿ ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

 

Dakshina Kannada: ನಿರಂತರ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ

ಈ ಯೋಜನೆಯಡಿ ಕೆಜಿಗೆ 29 ರೂಪಾಯಿಗೆ ಅಕ್ಕಿ, 27.50 ರೂ ಗೆ ಗೋಧಿ ಹಿಟ್ಟು, 60 ರೂಪಾಯಿಗೆ ಕಡ್ಲೆಬೇಳೆ ವಿತರಣೆ ಮಾಡಲಾಗುತ್ತಿತ್ತು. ಹಾಗೆನೇ ಗ್ರಾಹಕರಿಂದಲೂ ಕೂಡಾ ಭಾರತ್‌ ಅಕ್ಕಿಗೆ ಉತ್ತಮ ಬೇಡಿಕೆ ಇತ್ತು. ಆದರೆ ಇದೀಗ ಈ ಯೋಜನೆಯನ್ನು ದಿಢೀರ್‌ ನಿಲ್ಲಿಸಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಇರುವವರಿಗೆ ಉಚಿತವಾಗಿ ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿ, ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಕೆಜಿಗೆ ರೂ.15 ನಂತೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಇವೆರಡೂ ಪಡಿತರ ಚೀಟಿ ಇಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿದ್ದು, ಅಂತವರು ರೂ.29 ಕ್ಕೆ ಗುಣಮಟ್ಟದ ಅಕ್ಕಿ ಸಿಗುತ್ತದೆ ಎನ್ನುವ ಖುಷಿಯಲ್ಲಿದ್ದು, ಆದರೆ ಇದೀಗ ಇದು ಸ್ಥಗಿತಗೊಂಡಿರುವುದು ಕೇಳಿ ಶಾಕ್‌ ಆಗಿದ್ದಾರೆ.

ಅಕ್ಕಿ ದಾಸ್ತಾನು ಭಾರತದಲ್ಲಿ ಸದ್ಯಕ್ಕಿಲ್ಲ. ಜೂನ್‌ ತಿಂಗಳ ಮಧ್ಯದವರೆಗೆ ಭಾರತ್‌ ಅಕ್ಕಿ ಸರಬರಾಜಾಗಿತ್ತು. ಜುಲೈ 1 ರಿಂದ ವಿತರಣೆಗೆ ದಿನಸಿ ಇಲ್ಲ. ಹಾಗಾಗಿ ಕೇಂದ್ರ ಸರಕಾರ ಭಾರತ್‌ ಅಕ್ಕಿ ವಿತರಣೆಗೆ ಸಂಬಂಧಪಟ್ಟಂತೆ ಹೊಸ ನೀತಿ ಜಾರಿಗೆ ತರಲು ಚಿಂತನೆ ಮಾಡಿದ್ದು, ಹೊಸ ನೀತಿಯಲ್ಲಿ ಕೇಂದ್ರ ಸರಕಾರ ಯಾವೆಲ್ಲ ಅಂಶವನ್ನು ಅಳವಡಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಕಳೆದ ವರ್ಷ ಮಳೆ ಇಲ್ಲದ ಕಾರಣ ಭತ್ತದ ಉತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡಿದ್ದು, ಹೀಗಾಗಿ ರೂ.29 ಕ್ಕೆ ಭಾರತ್‌ ಅಕ್ಕಿ ವಿತರಣೆ ಮಾಡುವುದು ಸರಕಾರಕ್ಕೆ ಭಾರಿ ಹೊಡೆತ ಬಿದ್ದಹಾಗೆ ಆಗುತ್ತದೆ. ಅಷ್ಟೇ ಇಲ್ಲದೆ ಈ ಯೋಜನೆ ದೇಶದಾದ್ಯಂತ ಜಾರಿಯಲ್ಲಿದೆ. ಹಾಗಾಗಿ ಎಲ್ಲಾ ಕಡೆ ಪೂರೈಕೆ ಕಷ್ಟ ಸಾಧ್ಯ. ಹೀಗಾಗಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

Andhra Pradesh: ತಾವೇ ಮುಂದೆ ನಿಂತು ಗಂಡನಿಗೆ 3ನೇ ಮದುವೆ ಮಾಡಿದ ಇಬ್ಬರು ಹೆಂಡತಿಯರು !!

Leave A Reply

Your email address will not be published.