NEET UG 2024 ಮರುಪರೀಕ್ಷೆ ಫಲಿತಾಂಶ ಇಂದು, ರಿಸಲ್ಟ್ ನೋಡಲು ಇಲ್ಲಿದೆ ಲಿಂಕ್ – 24 ಲಕ್ಷ ವಿದ್ಯಾರ್ಥಿಗಳ ರಾಂಕಿಂಗ್ ನಲ್ಲಿ ಬದಲಾವಣೆ ಖಚಿತ !

NEET UG ಮರುಪರೀಕ್ಷೆ ಫಲಿತಾಂಶ 2024: ಇಂದು ದೇಶದ 24 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಕೋಟ್ಯಂತರ ಪೋಷಕರಿಗೆ ಮಹತ್ವದ ದಿನ. ಹಲವು ಆಪಾದನೆ ಮೋಸ ವಂಚನೆಯ ಜತೆಜತೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2024 ಮರು ಪರೀಕ್ಷೆಯ ಫಲಿತಾಂಶಗಳನ್ನು ಇಂದು ಜೂನ್ 30, 2024 ರಂದು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿಂದೆ ಮರು ಪರೀಕ್ಷೆ ಬರೆಯಲು ಅನುಮತಿ ಸಿಕ್ಕ 1,563 ಅಭ್ಯರ್ಥಿಗಳಿಗೆ ಈ ಮರು ಪರೀಕ್ಷೆಯನ್ನು ನಡೆಸಲಾಗಿದ್ದು ಅವರ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಫಲಿತಾಂಶ ಪ್ರಕಟದ ಜೊತೆಗೆ ಎಲ್ಲಾ 24 ಲಕ್ಷ ವಿದ್ಯಾರ್ಥಿಗಳ ರಾಂಕಿಂಗ್ ಕೂಡ ಬದಲಾಗಲಿದ್ದು, ತಮ್ಮ ತಮ್ಮ ರ್ಯಾಂಕಿಂಗ್ ಯಾವ ಹಂತದಲ್ಲಿ ಏರಿಳಿತ ಕಾಡಬಹುದು ಎಂದು ವಿದ್ಯಾರ್ಥಿಗಳು ಕಾತುರದಲ್ಲಿದ್ದಾರೆ.

 

NEET UG 2024 ಮರು ಪರೀಕ್ಷೆ ರಿಸಲ್ಟ್ ನಂತರ ಒಟ್ಟಾರೆ ರ್ಯಾಂಕಿಂಗ್ ಏನಾಗುತ್ತೆ ? ರಾಂಕ್ ಎಷ್ಟು ಉತ್ತಮ ಆಗುತ್ತೆ ಅನ್ನೋ ಸ್ಪಷ್ಟ ಮಾಹಿತಿ !

ಮೇ 5 ರಂದು ನಡೆದ ಮೂಲ NEET ಯುಜಿ ಪರೀಕ್ಷೆಯ ಸಮಯದಲ್ಲಿ ಉಂಟಾದ “ಸಮಯದ ನಷ್ಟ” ದಿಂದಾಗಿ ಹೆಚ್ಚುವರಿ ಅಂಕಗಳನ್ನು ಈ 1563 ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈ ಅಭ್ಯರ್ಥಿಗಳು ಪರೀಕ್ಷೆಯನ್ನು ಮರುಪಡೆಯಲು ಅಥವಾ ಗ್ರೇಸ್ ಅಂಕಗಳಿಲ್ಲದೆ ತಮ್ಮ ಮೂಲ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗಿತ್ತು. ಜೂನ್ 23 ರಂದು ನಡೆದ ಮರು ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪೈಕಿ 813 ಮಂದಿ ಮಾತ್ರ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದರು.
ಜೂನ್ 4 ರಂದು ಘೋಷಿಸಲಾದ ಮೂಲ NEET UG 2024 ಪರೀಕ್ಷೆಯ ಫಲಿತಾಂಶಗಳು, ಪೇಪರ್ ಸೋರಿಕೆ ಮತ್ತು ಅಕ್ರಮಗಳ ಆರೋಪಗಳಿಂದ ವಿವಾದವನ್ನು ಎದುರಿಸಿದ್ದು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಅಂದರೆ 67 ವಿದ್ಯಾರ್ಥಿಗಳು ಈ ಸಲ 720 ರಲ್ಲಿ 720 ಪರಿಪೂರ್ಣ ಅಂಕಗಳನ್ನು ಪಡೆದು ಒಟ್ಟಾರೆ ನೀಟ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜನರು ಮತ್ತು ಶಿಕ್ಷಣ ತಜ್ಞರಲ್ಲಿ ಅನುಮಾನ ಮೂಡಿಸಿತ್ತು. ಶಿಕ್ಷಣ ಸಚಿವಾಲಯವು ಈ ವಿಷಯವನ್ನು ನಂತರ ಸಿಬಿಐ ತನಿಖೆಗೆ ಒಪ್ಪಿಸಿದ್ದು, ಈಗ ಸಿಬಿಐ ತನಿಖೆ ನಡೆಯುತ್ತಿದೆ.

ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್‌ಗೆ ನೇರ ಲಿಂಕ್ ಇಲ್ಲಿದೆ:
ಮರು ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ NTA ವೆಬ್‌ಸೈಟ್ https://neet.nta.nic.in/ ನಲ್ಲಿ ಬಿಡುಗಡೆ ಆದ ನಂತರ ರಿಸ್ಲಲ್ಟ್ ನೋಡಬಹುದು. ವೆಬ್‌ಸೈಟ್‌ನಲ್ಲಿ ಒದಗಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಅವರು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು.
NEET UG 2024 ಪರೀಕ್ಷೆಯ ನಡೆಯುತ್ತಿರುವ ಪರಿಶೀಲನೆಯ ನಡುವೆ ಮರು-ಪರೀಕ್ಷೆಯ ಫಲಿತಾಂಶಗಳ ಈ ಪ್ರಕಟಣೆ ಬಂದಿದೆ. ಸಿಬಿಐ ತನಿಖೆಯ ಅಂತಿಮ ಫಲಿತಾಂಶ ಮತ್ತು ಇಡೀ ಪರೀಕ್ಷೆಯ ಪ್ರಕ್ರಿಯೆಯ ಮೇಲೆ ಅದರ ಪ್ರಭಾವವನ್ನು ನೋಡಬೇಕಾಗಿದೆ. ನೀಟ್ ಮರು ಪರೀಕ್ಷೆಯ ಫಲಿತಾಂಶದ ನಂತರ ವಿದ್ಯಾರ್ಥಿಗಳ ಸ್ಕೋರ್ ಕಾರ್ಡ್ ಹೇಗಿರುತ್ತೆ? ರಾಂಕಿಂಗ್ ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎನ್ನುವ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Liquor Price: ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಸರಕಾರ

Leave A Reply

Your email address will not be published.