Amith Shah: ಯತ್ನಾಳ್ ಬರೆದ ಪತ್ರಕ್ಕೆ ರಿಪ್ಲೇಕೊಟ್ಟ ಅಮಿತ್ ಶಾ – ರಾಜ್ಯದಲ್ಲಿ ಇವರೆಲ್ಲರಿಗೂ ಶುರುವಾಯ್ತು ನಡುಕ !!

Amith Shah: ಬಿಜೆಪಿ(BJP) ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basavangouda Patil Yatnal) ಅವರು ರಾಜ್ಯದ ಕೆಲವು ವಿದ್ಯಾಮಾನಗಳನ್ನು, ಭ್ರಷ್ಟಾಚಾರಗಳನ್ನು ಉಲ್ಲೇಖಿಸಿ, ಸೂಕ್ತ ಕ್ರಮಕ್ಕಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ(Amith Shah) ಅವರಿಗೆ ಪತ್ರ ಬರೆದಿದ್ದರು. ಇದೀಗ ಆ ಪತ್ರಕ್ಕೆ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, 2016ರಲ್ಲಿ ಮಡಿಕೇರಿಯಲ್ಲಿ ಡಿವೈಎಸ್​ಪಿ ಗಣಪತಿ(DYSP Ganapati) ಆತ್ಮಹತ್ಯೆ ಪ್ರಕರಣ, 2019ರಲ್ಲಿ ಡಾ.ಜಿ.ಪರಮೇಶ್ವರ್(Dr G Parameshwar) ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ, ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಯತ್ನಾಳ್ ಅಮಿತ್ ಶಾಗೆ ಪತ್ರ ಬರೆದಿದ್ದರು. ಇದೀಗ ಗೃಹ ಸಚಿವರ ಕಡೆಯಿಂದ ಈ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದರಿಂದ ಹಲವರಿಗೆ ನಡುಕ ಶುರುವಾಗಿದೆ.

ಯತ್ನಾಳ್ ಬರೆದಿದ್ದ ಪತ್ರದಲ್ಲೇನಿತ್ತು?
ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ನಡೆಸಲು ಸಹಕಾರ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದ ಅನೇಕ ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 2019ರಲ್ಲಿ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ಬೆಂಗಳೂರು ವಿವಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 2016ರಲ್ಲಿ ಕೆ.ಜೆ. ಜಾರ್ಜ್ ಹೆಸರು ಹೇಳಿ ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಮೇ ತಿಂಗಳಲ್ಲಿ ಕೆಆರ್​ಐಡಿಎಲ್ ಗುತ್ತಿಗೆದಾರ ಪಿ.ಎಸ್. ಗೌಡರ್ ಅಧಿಕಾರಿಗಳನ್ನು ದೂರಿ ದಾವಣಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಇದಲ್ಲದೆ ಕೆಲವು ಸಮಯದ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ನಿಗಮದ‌ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ 88.62 ಕೋಟಿ ನಗದು ವರ್ಗಾವಣೆ ವಹಿವಾಟನ್ನು ಅಕ್ರಮ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಬ್ಯಾಂಕ್ ಸಿಬಿಐಗೆ ದೂರು ನೀಡಿದೆ. ಜೊತೆಗೆ ಬ್ಯಾಂಕ್ ತನ್ನ ಮೂರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಪ್ರಕರಣದ ಗಭೀರತೆಯನ್ನು ಪರಿಗಣಿಸಿ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವ ಅಗತ್ಯ ಇದೆ. ಬ್ಯಾಂಕ್ ನೀಡಿದ ದೂರಿ‌ನ ಆಧಾರದ ಮೇಲೆ ಸಿಬಿಐ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಪತ್ರದ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದರು.

Water Bill Hike: ರಾಜ್ಯದ ಜನರ ಜೇಬಿಗೆ ಬೀಳಲಿದೆ ಮತ್ತೆ ಕತ್ತರಿ – ಸದ್ಯದಲ್ಲೇ ಇದರ ಬೆಲೆಯೂ ಏರಿಕೆ !!

Leave A Reply

Your email address will not be published.