Parliament Speaker: ಬಿಜೆಪಿ ಪಾಲಿಗೇ ಉಳಿದ ಸ್ಪೀಕರ್ ಪಟ್ಟ – ಸಭಾಧ್ಯಕ್ಷರಾಗಿ ಮತ್ತೆ ಓಂ ಬಿರ್ಲಾ ಆಯ್ಕೆ ಫಿಕ್ಸ್ !!

Share the Article

Parliament Speaker: ಲೋಕಸಭೆ ಚುನಾವಣೆ(Parliament Election) ಮುಗಿದು NDA ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಿನ್ನೆಯಿಂದ (ಜೂನ್ 24) ಮೊದಲ ಲೋಕಸಭಾ ಅಧಿವೇಶನ ಕೂಡ ಶುರುವಾಗಿದೆ. ಈ ಬೆನ್ನಲ್ಲೇ ಭಾರೀ ಕುತೂಹಲ ಕೆರಳಿಸಿದ ಲೋಕಸಭಾ ಸ್ಪೀಕರ್(Parliament Speaker) ಆಯ್ಕೆಗೆ ತೆರೆ ಬೀಳುವ ಸಂಭವ ಹತ್ತಿರವಾಗಿದ್ದೆ. ಸ್ಪೀಕರ್ ಪಟ್ಟವನ್ನು ಬಿಜೆಪಿ(BJP) ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೌದು, NDA ಸರ್ಕಾರ ರಚನೆಯಾದ ಬಳಿಕ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಮಿತ್ರಪಕ್ಷಗಳು ಈ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ತಮಗೇ ಬೇಕೆಂದು ಡಿಮ್ಯಾಂಡ್ ಕೂಡ ಮಾಡಿದ್ದರು. ಆದರೀಗ ಅಚ್ಚರಿ ಎಂಬಂತೆ ಹಿಂದಿನ ಅವಧಿಯಲ್ಲಿ ಲೋಕಸಭೆಯ ಅಧ್ಯಕ್ಷರಾಗಿದ್ದ ಓಂ ಬಿರ್ಲಾ(Om Birla) ಅವರೇ ಮುಂದಿನ ಅವಧಿಗೂ ಸಭಾಧ್ಯಕ್ಷರಾಗಿ ಮುಂದುವರೆಯುವುದು ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ NDA ಸ್ಪೀಕರ್ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಅಂದಹಾಗೆ ಕಳೆದ ರಾತ್ರಿ ಬಿಜೆಪಿ ನಾಯಕ ರಾಜನಾಥ್ ಸಿಂಗ್(Rajanath Singh), ಎನ್‌ಡಿಎ ಮಿತ್ರ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿದ್ದರು. ತಡರಾತ್ರಿವರೆಗೆ ನಡೆಸಿದ್ದ ಸಭೆಯಲ್ಲಿ ಒಮ್ಮತದಿಂದ ಓಮ್ ಬಿರ್ಲಾ ಸ್ಪೀಕರ್ ಆಯ್ಕೆಗೆ ಮನವಿ ಮಾಡಿದ್ದರು. ರಾಜನಾಥ್ ಸಿಂಗ್ ಮನವೊಲಿಕೆ ಯಶಸ್ಸು ಕಂಡಿದೆ. ಮಿತ್ರಪಕ್ಷಗಳ ಜೊತೆ ತಡರಾತ್ರಿವರೆಗೆ ಚರ್ಚೆ ನಡೆಸಿದ್ದ ಬಿಜೆಪಿ ಇಂದು ತನ್ನ ಅಭ್ಯರ್ಥಿಯಾಗಿ ಓಂ ಬಿರ್ಲಾ ಕಣಕ್ಕಿಳಿಸಿದೆ.

Leave A Reply