White Hair Remedy: ಕೂದಲು ಬಿಳಿಯಾಗಿದೆ ಅನ್ನೋರಿಗೆ ಸಿಂಪಲ್ ಸೊಲ್ಯೂಷನ್ ಇಲ್ಲಿದೆ!

White Hair Remedy: ಕೂದಲು ಬಿಳಿ ಆಗಿದೆ ಅನ್ನುವುದು ಹಲವರ ಚಿಂತೆ ಆಗಿಬಿಟ್ಟಿದೆ. ಇನ್ಮೇಲೆ ಈ ಚಿಂತೆ ಬಿಟ್ಟುಬಿಡಿ. ಅದಕ್ಕಾಗಿ ಈ ಹೊಸ ಟಿಪ್ಸ್ ಅನ್ನು ಫಾಲೋ ಮಾಡಿ ನೋಡಿ. ಹೌದು, ತೆಂಗಿನ ಎಣ್ಣೆ ಮೂಲಕ ನೀವು ನಿಮ್ಮ ಬಿಳಿ ಕೂದಲ ಸಮಸ್ಯೆ ಪರಿಹಾರಿಸಿಕೊಳ್ಳಬಹುದು (White Hair Remedy) . ಹೇಗೆಂದು ನೋಡೋಣ ಬನ್ನಿ.

ಮುಖ್ಯವಾಗಿ ತೆಂಗಿನ ಎಣ್ಣೆ ಮತ್ತು ಗೋರಂಟಿ ಬಳಸಿ 10 ನಿಮಿಷದಲ್ಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 3 – 4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ, ನಂತರ ಎಣ್ಣೆಗೆ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯು ಕಂದು ಬಣ್ಣಕ್ಕೆ ಬರುವವರೆಗೆ ಕುದಿಸಿ.  ನಂತರ ಈ ಎಣ್ಣೆಯನ್ನು ತಣ್ಣಗಾಗಿಸಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ಎಣ್ಣೆಹಚ್ಚಿದ ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ. ಬಿಳಿ ಕೂದಲು ಬುಡಸಮೇತ ಕಪ್ಪಾಗಿರುತ್ತದೆ.

ಅಥವಾ ತೆಂಗಿನೆಣ್ಣೆ ಮತ್ತು ಆಮ್ಲಾ ಮಿಶ್ರಣ ಮಾಡಿ, ಅದಕ್ಕಾಗಿ 3 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ ಕುದಿಸಿ. 10-15 ನಿಮಿಷಗಳ ಬಳಿಕ ಗ್ಯಾಸ್‌ ಆಫ್‌ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ. ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಅದನ್ನು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತಲೆಸ್ನಾನ ಮಾಡಿ. ಬಿಳಿ ಕೂದಲು ಕಪ್ಪಾಗುವುದು.

 

Leave A Reply

Your email address will not be published.