Govt Employee: ಇನ್ಮೇಲೆ ಸರ್ಕಾರಿ ನೌಕರರಿರುವ ಮನೆಗಳಿಗೆ ಈ ಸೌಲಭ್ಯಗಳಿಲ್ಲ! ಕರ್ನಾಟಕ ಸರ್ಕಾರದಿಂದ ಹೊಸ ನಿಯಮ ಜಾರಿ!
Govt Employee: ಕರ್ನಾಟಕದಲ್ಲಿ ಇನ್ಮೇಲೆ ಸರ್ಕಾರಿ ನೌಕರಿ ಇರುವವರಿಗೆ (Govt Employee) ಕೆಲವೊಂದು ಸೌಲಭ್ಯ ಇರುವುದಿಲ್ಲ. ಹೌದು, ಯಾಕೆಂದರೆ ಈಗಾಗಲೇ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಮಾತ್ರ ಸರ್ಕಾರದ ಯೋಜನೆಗಳು ನೇರವಾಗಿ ತಲುಪಬೇಕು ಎನ್ನುವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಅವರ ಆರ್ಥಿಕ ಪರಿಸ್ಥಿತಿಯನ್ನು ನಿರ್ಧರಿಸಿ ಅವರಿಗೆ ನೀಡಲಾಗಿರುತ್ತದೆ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗಗಳಿಗೆ ಸರಿಯಾಗಿ ಎಲ್ಲ ಯೋಜನೆಗಳು ತಲುಪುವ ರೀತಿಯಲ್ಲಿ ಸರ್ಕಾರ ಹೊಸ ನಿಯಮಗಳನ್ನು ಸಿದ್ಧಪಡಿಸಿದೆ.
ಮುಖ್ಯವಾಗಿ ಸರ್ಕಾರ ತನ್ನ ಯೋಜನೆಗಳನ್ನು ಹಾಗೂ ಉಚಿತ ಪಡಿತರವನ್ನು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮೂಲಕ ಬಡತನದ ರೇಖೆಗಿಂತ ಸಾಕಷ್ಟು ಕೆಳಗಿರುವಂತಹ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ನೀಡೋದಕ್ಕೆ ನಿಯಮಗಳನ್ನು ಸಿದ್ಧಪಡಿಸಿದ್ದು. ಆದರೆ ಸರ್ಕಾರಿ ಉದ್ಯೋಗಕ್ಕೆ (Govt Employees) ಹೋಗುತ್ತಿರುವ ಕುಟುಂಬಗಳು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಇದೇ ಕಾರಣಕ್ಕಾಗಿ ಸರ್ಕಾರಿ ಉದ್ಯೋಗವನ್ನು ಹೊಂದಿರುವವರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರಬಾರದು ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದೆ.
ಸರ್ಕಾರದ ನಿಯಮ ಪ್ರಕಾರ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಹಾಗೂ ನಿರ್ದಿಷ್ಟ ಕಾನೂನು ನಿಯಮಗಳ ಅಡಿಯಲ್ಲಿ ಒಳಗೊಂಡ ಕುಟುಂಬಕ್ಕೆ ಮಾತ್ರ ಪಡೆದುಕೊಳ್ಳುವುದಕ್ಕೆ ಅವಕಾಶ ಇದೆ. ಒಂದುವೇಳೆ ಸರ್ಕಾರಿ ಕೆಲಸದಲ್ಲಿದ್ದು (Govt Job) ಉತ್ತಮವಾದ ಆದಾಯ ಇದ್ದಮೇಲು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಅದು ಕಾನೂನು ಪಾಲನೆಗೆ ವಿರುದ್ಧವಾಗಿದೆ. ಮತ್ತು ಅಂತಹ ಸರ್ಕಾರಿ ನೌಕರ ಮುಂದೊಂದು ದಿನ ಸರ್ಕಾರಕ್ಕೆ ದಂಡ ಕಟ್ಟಬೇಕಾದ ಪರಿಸ್ಥಿತಿ ಬರಬಹುದು.