Darshan-Sudeep Friendship: ‘ಸರ್ ದರ್ಶನ್ ನಿಮ್ಮ ಕ್ಲೋಸ್ ಫ್ರೆಂಡ್ ಅಲ್ವಾ? ಅಂದಿದಕ್ಕೆ ಸುದೀಪ್ ಹೇಳಿದ್ದೇನು ?!

Share the Article

Darshan-Sudeep Friendship: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renukaswamy Murder Case) ಮುಗಿಯದ ಅಧ್ಯಾಯವಾಗಿದೆ. ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಪ್ರತೀ ದಿನವೂ ಒಂದೊಂದು ಸ್ಪೋಟಕ ಸತ್ಯ ಹೊರಬೀಳುತ್ತಿವೆ. ಇದರ ನಡುವೆ ಈ ಕೇಸಿಗೆ ಸಂಬಂಧಿಸಿದಂತೆ ನಟ ಸುದೀಪ್(Kiccha Sudeep) ಅವರು ಫಸ್ಟ್ ರಿಯಾಕ್ಷನ್ ನೀಡಿದ್ದು, ಮಾಧ್ಯಮಗಳ ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಹೌದು, ದರ್ಶನ್ ಅವರು ಮಾಡಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಅವರನ್ನು ಮೀಡಿಯಾದವರು ಕೆಲವು ಪ್ರಶ್ನೆ ಕೇಳಿದ್ದು, ಎಲ್ಲದಕ್ಕೂ ಸುದೀಪ್ ಬಹಳ ಸೌಜನ್ಯದಿಂದ, ತಾಳ್ಮೆಯಿಂದ ಉತ್ತರಿಸಿದ್ದಾರೆ. ಅಂತೆಯೇ ‘ಸರ್, ನೀವೂ ಮತ್ತು ದರ್ಶನ್ ಆತ್ಮೀಯ ಗೆರೆಯಲ್ಲವಾ?(Darshan-Sudeep Friendship) ಎಂದಿದಕ್ಕೆ ಸುದೀಪ್ ಏನು ಹೇಳಿದ್ರು ಗೊತ್ತಾ?

ದರ್ಶನ್ ನಿಮ್ಮ ಆಪ್ತ ಸ್ನೇಹಿತರಾಗಿದ್ದವರು, ಜೊತೆಯಲ್ಲೇ ಕ್ರಿಕೆಟ್ ಆಡಿದ್ದವರು. ಎಂದಿಗೂ ದರ್ಶನ್ ವಿರುದ್ಧ ಮಾತನಾಡಿಲ್ಲ, ಈಗ ಏನು ಹೇಳುತ್ತೀರಾ ಎನ್ನುವ ಬಗ್ಗೆ ಉತ್ತರ ಕೊಟ್ಟ ಅವರು, ಸ್ನೇಹ ಬೇರೆ, ನ್ಯಾಯ ಬೇರೆ. ಹೀಗಾಗಿ ಈಗ ಆಗಿರುವ ಪ್ರಕರಣ ಬೇರೆ. ಮೊದಲು ರೇಣುಕಾ ಸ್ವಾಮಿ ಹತ್ಯೆಗೆ, ಅವರ ಕುಟುಂಬದವರಿಗೆ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

ದರ್ಶನ್ ಬ್ಯಾನ್ ವಿಚಾರ- ಸುದೀಪ್ ಹೇಳಿದ್ದೇನು?
ಬ್ಯಾನ್‌ ಮಾಡಲು ನಾವ್ಯಾರು ಕಾನೂನು ಅಲ್ಲ. ಕೇಸ್‌ನಿಂದ ಹೊರಗೆ ಬಂದ್ರೆ ಬ್ಯಾನ್‌ ಅನ್ನೋದು ಬರೋದೆ ಇಲ್ಲ. ಇಲ್ಲಿ ಬ್ಯಾನ್‌ ಅನ್ನೋದಕ್ಕಿಂತ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಮುಖ್ಯ. ಮಾಧ್ಯಮಗಳು, ಪೋಲೀಸರು ಈ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಅದು ಆಗುತ್ತದೆ. ನ್ಯಾಯ ಮುಖ್ಯವೇ ಹೊರತು ಬ್ಯಾನ್ ಅಲ್ಲ ಎಂದಿದ್ದಾರೆ.

Leave A Reply

Your email address will not be published.