Property Rules: ತವರಿನ ಆಸ್ತಿ ಪಡೆಯಲು ಸರ್ಕಾರದಿಂದ ಮಹಿಳೆಯರಿಗೆ ಹೊಸ ರೂಲ್ಸ್!

Property Rules: ಇತ್ತೀಚಿಗೆ ಹೆಣ್ಣು ಮಕ್ಕಳಿಗೆ ಸಮಾನ ವೇತನ, ಸಮಾನ ಗೌರವ ನೀಡಲಾಗುತ್ತಿದೆ. ಅಷ್ಟು ಮಾತ್ರವಲ್ಲ ಪ್ರತಿಯೊಂದು ವಿಚಾರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಇದೀಗ ಆಸ್ತಿ ವಿಚಾರದಲ್ಲೂ ಕೂಡ ಹೆಣ್ಣಿಗೆ ಸಮಾನ ಹಕ್ಕನ್ನು ಕೋರ್ಟ್ ನೀಡಿದೆ. ಆದ್ರೆ ಕಾನೂನು ಹೀಗಿದ್ದರು ಕೂಡ ಕೆಲವೊಮ್ಮೆ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳುವಂತಿಲ್ಲ. ಹೌದು, ಇದಕ್ಕೆ ಕಾರಣವನ್ನು  ವಿವರಿಸಲಾಗಿದೆ.

Cooking Tips: ಹಾರ್ಟ್​ ಪ್ರಾಬ್ಲಂ ಬರದೇ ಇರಲು ಇಡ್ಲಿ ಹಿಟ್ಟಿಗೆ ಅಕ್ಕಿ ಬದಲು ಇದನ್ನು ಮಿಕ್ಸ್​ ಮಾಡಿ!

ಹಿಂದೂ ಅರ್ಹತಾ ಅಧಿನಿಯಮದ ಪ್ರಕಾರ ಕೆಲವೊಂದು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಆಸ್ತಿ ಕೇಳುವ ಹಕ್ಕು ಹೊಂದಿರಲಾರರು ಹಾಗಾದರೆ ಅದು ಯಾವ ಸಂದರ್ಭ( Property Rules) ಎಂದು ನೋಡೋಣ.

ಹಿಂದು ವಾರಸುದಾರರ ಕಾಯ್ದೆ ಅನ್ವಯ 2005ಕ್ಕೂ ಮೊದಲೇ ಆಸ್ತಿ ಹಂಚಿಕೆಯಾಗಿದ್ದು ಅದನ್ನು ಬೇರೆ ವ್ಯಕ್ತಿಗಳು ಅನುಭವಿಸುತ್ತಾ ಇದ್ದರೆ ಅಂತಹ ಭೂಮಿಯನ್ನು ವಾಪಾಸ್ ಕೇಳುವ ಯಾವುದೇ ಹಕ್ಕು ಇಲ್ಲ.

ಇನ್ನು ತಂದೆ ಬದುಕಿದ್ದ ಸಂದರ್ಭದಲ್ಲಿ ಅದು ಆತನ ಸ್ವಯಾರ್ಜಿತ ಆಸ್ತಿ (Property) ಆಗಿದ್ದರೆ ಆಗ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಆಸ್ತಿ ಪಾಲು ಕೇಳುವ ಅಧಿಕಾರ ಹೊಂದಿರಲಾರರು. ಯಾಕೆಂದರೆ

ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಆಸ್ತಿ ಪಾಲು ಮಾಡುವುದು ಬಿಡುವುದು, ತಂದೆಗೆ ಬಿಟ್ಟ ವಿಚಾರ ಅದರಲ್ಲಿ ಭಾಗ ಕೇಳುವ ಅಧಿಕಾರ ಮಕ್ಕಳಿಗೆ ಇರಲಾರದು.

Sprouted Ragi: ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಕೊನೆಯದಾಗಿ ಈ ಒಂದು ಪ್ರಯತ್ನ ಮಾಡಿ ನೋಡಿ!

ಒಂದು ವೇಳೆ ತಂದೆ ಮರಣ ಹೊಂದಿದ್ದು ತನ್ನ ಸ್ವಯಾರ್ಜಿತ ಆಸ್ತಿಗೆ ವಿಲ್ ಮಾಡಿಟ್ಟರೆ, ಯಾರಿಗಾದರೂ ಮಾರಿದ್ದರೆ, ದಾನವಾಗಿ ನೀಡಿದ್ದರೆ ಅಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಯಲು ಸಾಧ್ಯವಿಲ್ಲ. ಅಂದರೆ ತಂದೆಯ ಸ್ವಯಾರ್ಜಿತ ಆಸ್ತಿ ಯಾವುದೇ ವಿಧವಾಗಿ ವರ್ಗಾವಣೆ ಆಗಿದ್ದರೆ ಅದರಲ್ಲಿ ಪಾಲು ಕೇಳುವ ಹಕ್ಕು ಇಲ್ಲ.

ಇನ್ನು ಹೆಣ್ಣು ಮಕ್ಕಳು ಯಾವುದೇ ರೀತಿ ರಿಲೀಸ್ ಡೀಡ್ ( ಹಕ್ಕು ಬಿಡುಗಡೆ ಪತ್ರ) ಕ್ಕೆ ಸಹಿ ಮಾಡಿದ್ದರೆ ಅಂತಹ ಆಸ್ತಿಯನ್ನು ಕೇಳುವ ಅಧಿಕಾರ ಆಕೆಗೆ ಇರಲಾರದು. ಅಂದರೆ ಆಸ್ತಿ ಪಾಲು ಆಗುವ ಸಂದರ್ಭದಲ್ಲಿ ಆಸ್ತಿ ಬದಲಾಗಿ ಹಣ ಅಥವಾ ಬೆಲೆ ಬಾಳುವ ವಸ್ತು ಪಡೆಯುತ್ತೇವೆ ಎಂದು ಒಪ್ಪಿಗೆಯಿಂದಲೇ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿದ್ದರೆ ಬಳಿಕ ಆಸ್ತಿ ಪಾಲು ಕೇಳುವ ಅಧಿಕಾರ ಇರಲಾರದು.

ಇನ್ನು ಮಹಿಳೆಯು ಗಂಡನ ಆಸ್ತಿಯನ್ನು ಆತ ಬದುಕಿದ್ದಾಗ ಪಾಲು ಪಡೆಯುವ ಅಧಿಕಾರ ಹೊಂದಿರುವುದಿಲ್ಲ. ಒಂದು ವೇಳೆ ಗಂಡ ಮರಣ ಹೊಂದಿದ್ದಲ್ಲಿ  ಆತನ ಭಾಗವನ್ನು ಪತ್ನಿ ಹಾಗೂ ಮಕ್ಕಳಿಗೆ ಆಸ್ತಿ ಪಾಲು ಎಂದು ನೀಡುವ ಅವಕಾಶ ಇರುತ್ತದೆ.

 

Leave A Reply

Your email address will not be published.