Udupi: ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ

Share the Article

Udupi: ಹದಿನೈದು ವರ್ಷಗಳ ಹಿಂದೆ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್‌ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅತುಲ್‌ ರಾವ್‌ ಅವರನ್ನು ಜಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ತೀರ್ಪು ನೀಡಿದೆ.

ಕುವೈತ್‌ನ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಅವಘಡ; 50 ಜನ ಸಾವು ; ಭಯಾನಕ ವೀಡಿಯೊ ವೈರಲ್‌

ಅತುಲ್‌ ರಾವ್‌ ಅವರ ವಿರುದ್ಧ ಮೊಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪ ಮಾಡಲಾಗಿತ್ತು.

ಪದ್ಮಪ್ರಿಯ ಕರಂಬಳ್ಳಿಯ ಮನೆಯಿಂದ 2008, ಜೂ.10 ರಂದು ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಬಾಲ್ಯ ಸ್ನೇಹಿತ ಅತುಲ್‌ ರಾವ್‌ ನಕಲಿ ದಾಖಲೆ ಸೃಷ್ಟಿ ಮಾಡಿ ಮೋಸ ಮಾಡಿರುವ ಕುರಿತು 2008, ಜೂ.19 ರಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಓಡಿ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಿದ್ದು, ಆರೋಪಿ ವಿರುದ್ಧ ದೋಷಾರೋಪ ಸಲ್ಲಿಕೆ ಮಾಡಿದ್ದರು. ನಂತರ ಉಡುಪಿಯ ಸಿಜೆಂ ನ್ಯಾಯಾಲಯವರು 2023, ನ.10 ರಂದು ಅತುಲ್‌ಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಈ ಕುರಿತು ಅತುಲ್‌ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿ ಅತುಲ್‌ ಅವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು.

Pavitra Gowda: ಪವಿತ್ರ ಗೌಡ ಯಾರು ? ಈ ಮಾಯಾಂಗನೆಗೆ ದರ್ಶನ್ ಫಿದಾ ಆಗಿದ್ದು ಹೇಗೆ..?

Leave A Reply

Your email address will not be published.