Viral Video: ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ! ಪೊಲೀಸರು ಮೃತದೇಹ ಮೇಲೆತ್ತಲು ಕೈ ಹಿಡಿದಾಗ ಎದ್ದು ನಿಂತ ವ್ಯಕ್ತಿ!

Viral Video: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಕೇಳಿರಬಹುದು. ಅಂತೆಯೇ ಈ ಗಾದೆಯ ಸಲುವಾಗಿ ಒಂದು ಘಟನೆ ನಡೆದಿದೆ. ಹೌದು, ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲುತ್ತಿದೆಯೆಂದು ಸ್ಥಳೀಯರು ಪೊಲೀಸರನ್ನು ಕರೆಸಿದ್ದು, ಕೂಡಲೇ ನೀರಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸರು ಮೇಲಕ್ಕೆತ್ತುವ ಸಂದರ್ಭದಲ್ಲಿ ದಿಢೀರನೇ ಆ ವ್ಯಕ್ತಿ ಎಚ್ಚರಗೊಂಡಿದ್ದಾನೆ.

ರೇಣುಕಾಸ್ವಾಮಿಯನ್ನು ವಿಕೃತವಾಗಿ ಕೊಲೆ; ದೇಹದಲ್ಲಿ 15 ಕಡೆ ಭೀಕರ ಗಾಯ

ಈ ಅಚ್ಚರಿಯ ಪ್ರಕರಣ ತೆಲಂಗಾಣದ ಹನುಮಕೊಂಡ ಎಂಬಲ್ಲಿ ನಡೆದಿದ್ದು, ಕಲ್ಲಿನ ಕೆಲಸ ಮಾಡುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೆರೆಯ ನೀರಿನಲ್ಲಿಯೇ ಹಾಯಾಗಿ ಮಲಗಿರುತ್ತಾನೆ. ಸುಮಾರು ಹೊತ್ತಿನಿಂದ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಿರುವುದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಈ ವ್ಯಕ್ತಿ ಸತ್ತು ಬಿದ್ದಿದ್ದಾನೆ ಎಂದು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ದೇಹವಿರುವ ಸ್ಥಳಕ್ಕೆ ಬಂದಿದ್ದಾರೆ. ಕೆರೆಯಿಂದ ದೇಹವನ್ನು ಪೊಲೀಸರು ಮೇಲಕ್ಕೆತ್ತುವ ಸಂದರ್ಭದಲ್ಲಿ ಆ ವ್ಯಕ್ತಿ ಎದ್ದು ನಿಲ್ಲುತ್ತಾನೆ. ಆತ ಎಚ್ಚರಗೊಂಡದ್ದನ್ನು ಕಂಡು ಅಲ್ಲಿದ್ದ ಎಲ್ಲರೂ ಒಮ್ಮೆಗೆ ಶಾಕ್‌ ಆಗುತ್ತಾರೆ. ನಂತರ ಇದು ಕುಡಿದ ಮತ್ತಿನಲ್ಲಿ ನಡೆದ ಎಡವಟ್ಟು ಎಂದು ಪೊಲೀಸರಿಗೆ ತಿಳಿಯುತ್ತದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral video) ಆಗುತ್ತಿದೆ.

ಸದ್ಯ ಈ ಘಟನೆಯ ವಿಡಿಯೋವನ್ನು ಸುಧಾಕರ್‌ (sudhakarudummula) ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕುಡಿದ ಮತ್ತಿನಲ್ಲಿ ಈ ರೀತಿ ನೀರಿನಲ್ಲಿ ಮಲಗಿದ್ದು ಎಂದು ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಸದ್ಯ ಈ ಘಟನೆ ಕೊನೆಗೆ ಹಾಸ್ಯಮಯವಾಗಿ ಕೊನೆಗೊಂಡಿದೆ.

https://twitter.com/AAnamika_/status/1800391462871613731

Renuk Swamy murder Case: ದರ್ಶನ್ ನನ್ನು ಸಾಕ್ಷಿಯಾಗಿ ಮಾಡಿ, ಆರೋಪಿಯಾಗಿ ಬೇಡ – ರಾಜಕಾರಣಿಗಳು, ಹಿರಿಯ ನಟರಿಂದ ಪೋಲೀಸರಿಗೆ ಒತ್ತಡ !!

Leave A Reply

Your email address will not be published.