Puttur: ಓಲೆಮುಂಡೋವು : ಕಾಡಾನೆ ಇರುವಿಕೆ ಪತ್ತೆ ,ಅರಣ್ಯ ಇಲಾಖೆ ಪರಿಶೀಲನೆ
Puttur: ತಾಲೂಕಿನ ಬೊಲಿಕಳ,ಪುಣ್ಚಪ್ಪಾಡಿ ಗ್ರಾಮದ ನೂಜಾಜೆ,ಅಂಜಯ ,ಪಾಲ್ತಾಡಿ ಗ್ರಾಮದ ಅಸಂತಡ್ಕ ,ಖಂಡಿಗೆ ಎಂಬಲ್ಲಿನ ಸುತ್ತಲಿನ ಪ್ರದೇಶದಲ್ಲಿ ಸಂಚರಿಸಿದ ಆನೆ ಇದೀಗ ಓಲೆಮುಂಡೋವು ಪ್ರದೇಶದಲ್ಲಿ ಸಂಚರಿಸಿದೆ.
ಸಮೀಪದ ಕೃಷಿಕರ ಅಡಿಕೆ ತೋಟಗಳಿಗೆ ಆನೆ ದಾಳಿ ಮಾಡಿದ್ದು,ತೆಂಗು,ಬಾಳೆ ಗಿಡಗಳು ನೆಲಸಮವಾಗಿರುವುದು ಕಂಡುಬಂದಿದೆ.
ಆನೆ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದ್ದು ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಓಲೆಮುಂಡೋವು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸೇರಿದ್ದಾರೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ