Venu Swamy: ಭವಿಷ್ಯದಲ್ಲಿ ಇನ್ನೆಂದೂ ಯಾರಿಗೂ ಭವಿಷ್ಯ ನುಡಿಯಲಾರೆ ಎಂದ ಜ್ಯೋತಿಷಿ ವೇಣು ಸ್ವಾಮಿ

Venu Swamy: ಜ್ಯೋತಿಷಿ ವೇಣುಸ್ವಾಮಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ. ಚಿತ್ರರಂಗದವರ ಬಗ್ಗೆ, ರಾಜಕಾರಣಿಗಳ ಬಗ್ಗೆ ಭವಿಷ್ಯ ನುಡಿದು ಭಾರೀ ಪ್ರಚಾರ ಹೊಂದಿದ್ದ ಜ್ಯೋತಿಷಿ, ಇದೀಗ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ಕುರಿತು ಭವಿಷ್ಯ ಹೇಳಿದ್ದು, ಇದರಲ್ಲಿ ಅವರು ನುಡಿದ ಭವಿಷ್ಯ ಸುಳ್ಳಾಗಿದೆ.
ಜಗನ್ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದರು. ಇದೀಗ ಇವರು ವಿಡಿಯೋ ಮೂಲಕ ಕ್ಷಮೆ ಕೇಳಿದ್ದು, ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಜಗನ್ ಅವರ ವೈಸಿಪಿ ಪಕ್ಷ ಹೀನಾಯ ಸೋಲನ್ನುಂಡು ಟಿಡಿಪಿ ಪಕ್ಷ ಭಾರೀ ವಿಜಯ ದಾಖಲಿಸಿದೆ.
ಜಗನ್ ಮತ್ತೊಮ್ಮೆ ಗೆಲ್ಲುತ್ತಾರೆ ಎಂದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಪ್ರಭಾವ ತಗ್ಗಲಿರುವುದು ಎಂದು ಹೇಳಿದ್ದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಂಡು ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ ಇಂದಿನಿಂದ ರಾಜಕೀಯ ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯ ನುಡಿಯುವುದಿಲ್ಲ ಎಂದು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: KSRTC: ಸರ್ಕಾರಿ ಬಸ್ ಚಾಲಕರಿಗೆ ಹೊಸ ನಿಯಮ ಜಾರಿ!