Ghost Marriage: ದಕ್ಷಿಣ ಕನ್ನಡದಲ್ಲಿ ಪ್ರೇತ ಮದುವೆಗೆ ಕೊನೆಗೂ ಸಿಕ್ಕ ವರ, ಆ ಅದೃಷ್ಟವಂತ ಯಾರು ಗೊತ್ತ ? ಆಟಿಯಲ್ಲೇ ಮದುವೆ !!!
Ghost Marriage: ತುಳುನಾಡಿನಲ್ಲಿ “ಪ್ರೇತ ಮದುವೆ” ಮನೆಮಾತು. ಇತ್ತೀಚೆಗೆ ಪೇಪರೊಂದರಲ್ಲಿ ಪ್ರೇತಮದುವೆ ಜಾಹೀರಾತು ನೀಡಲಾಗಿತ್ತು. ಪುತ್ತೂರಿನ ವಧುವಿಗೆ ವರಬೇಕಾಗಿದೆ ಎಂದು ಜಾಹೀರಾತಿಗೆ ಇದೀಗ ತಾರ್ಕಿಕ ಅಂತ್ಯ ದೊರಕಿದೆ. ಕೊನೆಗೂ ಮದುವೆ ಗಂಡು ಸಿಕ್ಕಿದ್ದಾನೆ. ಯಾರು ಗೊತ್ತೇ ಆ ಅನುರೂಪ ಅದೃಷ್ಟವಂತ ವರ ?
ಹೌದು, ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ” ಈಗ ನಿಗದಿ ಮಾಡಲಾಗಿದೆ. ಮುಂದಿನ “ಆಟಿ” ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿರುವುದರ ಕುರಿತು ವರದಿಯಾಗಿದೆ. ಒಂದು ವಾರದ ಮಗು ಮೂವತ್ತು ವರ್ಷದ ಹಿಂದೆ ತೀರಿ ಹೋಗಿದ್ದು, ನಾಮಕರಣ ಕೂಡಾ ಆಗಿರಲಿಲ್ಲ. ಈಗ “ಪ್ರೇತ ಮದುವೆ” ಮಾಡಲು ನಿರ್ಧಾರ ಮಾಡಲಾಗಿದೆ.
ನಾಚಿಕೊಂಡು ವಧು, ಖುಷಿಯಿಂದ ವರ, ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ !
ಇದನ್ನೂ ಓದಿ: Health Tips: ಈ ಸಮಯದಲ್ಲಿ ತೂಕ ನೋಡಬಾರದು ಯಾಕೆ ಗೊತ್ತಾ?
ಪ್ರೇತಮದುವೆ ಜಾಹೀರಾತಿಗೆ ಮೊದಲು ಬಾಯಾರು ಸಮೀಪದ ನಿವಾಸಿಯೊಬ್ಬರು ಕರೆ ಮಾಡಿದ್ದರು. ಅನಂತರ 30 ಕ್ಕೂ ಅಧಿಕ ಸಂಬಂಧದವರು ಹುಡುಗ ವಿಚಾರಿಸಿ ಕರೆ ಮಾಡಿ ಸಂಪರ್ಕ ಮಾಡಿದ್ದರು. ನಂತರ ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಮೊದಲು ಕರೆ ಮಾಡಿದ ಬಾಯಾರಿನ ವರನೇ ಅಂತಿಮ ಎಂಬ ಸಲಹೆ ಬಂತು.
ಮುಂದಿನ ರವಿವಾರ “ಪ್ರೇತವರ” ನ ಕಡೆಯವರು ʼವಧು” ವಿನ ಮನೆಗೆ ಬರಲಿದ್ದು, ನಂತರ ನಾವು ಅವರ ಮನೆಗೆ ಹೋಗುವುದು, ಬಳಿಕ ನಿಶ್ಚಿತಾರ್ಥ. ಕೊನೆಗೂ ಪ್ರೇತಕ್ಕೆ ಮದುವೆ ನಿಕ್ಕಿ ಆಗಿದೆ. ವರನ ಮತ್ತು ವಧುವಿನ ಮನೆಯಲ್ಲಿ ಇನ್ನಿಲ್ಲದ ಸಡಗರ !! ಆಟಿಯಲ್ಲಿ ಮದುವೆ ಎಂದು ಪುತ್ತೂರು ನಿವಾಸಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Preta Maduve: ‘ಪ್ರೇತ ಮದುವೆ’ಗೆ ವರ ಬೇಕೆಂದು ಜಾಹಿರಾತು ಪ್ರಕಟ – ಬಂತು 50ಕ್ಕೂ ಹೆಚ್ಚು ಪ್ರತಿಕ್ರಿಯೆ!!
[…] […]