1000rps Note: 1000ರೂ ನೋಟು ಮತ್ತೆ ಚಲಾವಣೆ ?! RBI ಬಿಗ್ ಅಪ್ಡೇಟ್!!

1000rps Note: 2,000 ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡ ಕಾರಣ ಮತ್ತೆ 1,000 ರೂ(1000rps Note) ನೋಟು ಚಲಾವಣೆಗೆ ಬರುತ್ತೆ ಎಂಬ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಸದ್ಯ ಈ ಬಗ್ಗೆ ಸ್ವತಃ ಆರ್‌ಬಿಐ ಬಿಗ್ ಅಪ್ಡೇಟ್ ನೀಡಿದೆ.

ಇದನ್ನೂ ಓದಿ: Spiritual: ತೆಂಗಿನಕಾಯಿಯನ್ನು ಮಾಟ ಮಂತ್ರದಲ್ಲಿ ಬಳಸುತ್ತಾರೆ ಯಾಕೆ ಗೊತ್ತಾ!

ಹೌದು, ಭಾರತೀಯ ರಿಸರ್ವ್‌ ಬ್ಯಾಂಕ್(RBI) 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಈ ಬೆನ್ನಲ್ಲೇ ಏಳು ವರ್ಷಗಳ ಹಿಂದೆ ರದ್ದಾದ 1,000 ರೂಪಾಯಿ ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌(Shakthi Kanth Das) 1,000 ರೂ. ನೋಟು ಪರಿಚಯಿಸುವ ಯಾವುದೇ ಉದ್ದೇಶ ಇಲ್ಲ. ಈ ಬಗ್ಗೆಗಿನ ವರದಿಗಳು ಊಹಾತ್ಮಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mandya: ಓವರ್‌ಟೇಕ್‌ ಗಲಾಟೆ; ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂ ಯುವಕನಿಗೆ ತೀವ್ರ ಹಲ್ಲೆ

ಏನಿದು ವದಂತಿ?

2016ರಲ್ಲಿ ನವೆಂಬರ್ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಎಂದು ಘೋಷಿಸಿತ್ತು. ಆರ್ಬಿಐ 500 ರೂ.ಗಳ ಹೊಸ ನೋಟುಗಳು ಹಾಗೂ 2000 ರೂ. ಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಇದೇ ಮೇ ತಿಂಗಳಲ್ಲಿ 2,000 ನೋಟುಗಳ ಚಲಾವಣೆಯನ್ನು ಹಿಂಪಡೆದಿದೆ. ಇದರ ನಡುವೆ 1,000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ವದಂತಿ ಆಗಾಗ್ಗೆ ಹಬ್ಬುತ್ತಲಿದೆ.

Leave A Reply

Your email address will not be published.