Air India: ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ನಲ್ಲಿ ಬೆಂಕಿ, ತುರ್ತು ಭೂ ಸ್ಪರ್ಶ
Air India: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು 179 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಜೊತೆಗೆ ಆರು ಮಂದಿ ಕ್ರೂ ಮೆಂಬರ್ ವಿಮಾನದಲ್ಲಿದ್ದರು. ಇಂತಹ ಘಟನೆಗಳು ಏರಿಯಾ ವಿಮಾನಯಾನದಿಂದ ಇತ್ತೀಚಿಗೆ ಹಲವು ಬಾರಿ ನಡೆದಿದೆ. ಕಳೆದ ವರ್ಷ ಮೇ 18 ರಂದು, ತಿರುವನಂತಪುರಂನಿಂದ ಬೆಂಗಳೂರಿಗೆ 137 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶನಿವಾರ ತಿರುಚಿನಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ “ತಾಂತ್ರಿಕ ದೋಷ” ದಿಂದ ತುರ್ತು ಭೂಸ್ಪರ್ಶ ಮಾಡಿತ್ತು.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಇಂಜಿನ್ ಒಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಇದನ್ನೂ ಓದಿ: ಮೋದಿ ಪ್ರಧಾನಿ ಆದ್ರೆ 6 ತಿಂಗಳಲ್ಲಿ POK ಭಾರತದ ಭಾಗವಾಗುತ್ತೆ; ಹೊಸ ಘೋಷಣೆ
ಏರ್ ಇಂಡಿಯಾ ವಿಮಾನ AI 1132 ನಿನ್ನೆ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ತೆರಳಲು ಟೇಕ್ ಆಫ್ ಆಗಿತ್ತು. ಆದರೆ ವಿಮಾನದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡು ತದನಂತರ ಬೆಂಕಿ ಕಾಣಿಸಿಕೊಂಡಿದೆ. ಆ ಕೂಡಲೆ ಪೈಲಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
ವಿಮಾನವು ತುರ್ತು ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿ ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಮಾಹಿತಿಗಳು ತಿಳಿಸಿವೆ.
ಇದನ್ನೂ ಓದಿ: POK: ಮೋದಿ ಮತ್ತೆ ಪ್ರಧಾನಿ ಆದ್ರೆ 6 ತಿಂಗಳಲ್ಲಿ POK ಭಾರತದ ಭಾಗವಾಗುತ್ತೆ – ಸಿಎಂ ಯೋಗಿ ಹೇಳಿಕೆ !!
[…] ಇದನ್ನೂ ಓದಿ: Air India: ಹಾರಾಡುತ್ತಿದ್ದ ಏರ್ ಇಂಡ… […]