NIA: ಎನ್ ಐಎ ಬಂಧನದಲ್ಲಿರುವ ಮಾಜಿ ಶಾಸಕ ದಿ.ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮಿನು
NIA: ಮಂಗಳೂರಿನ(Manglore) ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನಾದ ಅಮರ್ ಅಬ್ದುಲ್ ರೆಹಮಾನ್(Amer Abdul Rahman)ಗೆ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಯಾಗಿದ್ದು, ‘ಐಸಿನ್ ಬಾವುಟ(ISIS), ಕರಪತ್ರ ಮೊಬೈಲ್ ನಲ್ಲಿದ್ದ ಮಾತ್ರಕ್ಕೆ ವ್ಯಕ್ತಿಯನ್ನು ಉಗ್ರ ಎನ್ನಲು ಅದು ಪೂರಕ ಸಾಕ್ಷ್ಯವಾಗುವುದಿಲ್ಲ’ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೂರು ವರ್ಷಗಳ ಹಿಂದೆ ಅಬ್ದುಲ್ ರೆಹಮಾನ್(Abdul Rahman) ಐಸಿಸ್ ನಂಟಿನ ಆರೋಪದಡಿ ಯುಎಪಿಎ(UAOA act) ಕಾಯ್ದೆಯಡಿ 2021 ಆಗಸ್ಟ್ ನಲ್ಲಿ ಉಳ್ಳಾಲದ ಮನೆಯಿಂದ ಆತನನನ್ನು ಬಂಧಿಸಲಾಗಿತ್ತು. ಆದರೆ ರೆಹಮಾನ್ ತನ್ನ ಬಂಧನವನ್ನು ಪ್ರಶ್ನಿಸಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರೆ ಜಾಮೀನು ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ನದ್ಯ ಸುಧೀರ್ಘ ವಿಚಾರಣೆ ಬಳಿಕ ದೆಹಲಿ ನ್ಯಾಯಾಲಯವು ಜಾಮೀನು ನೀಡಿದೆ.
ರೆಹಮಾನ್ ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, ‘ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನ ಉಗ್ರ ನಂಟು ಎನ್ನಲು ಆಗಲ್ಲ ಎಂದು ಹೇಳಿದೆ.
ವ್ಯಕ್ತಿಯು ಐಸಿಸ್ ಪರ ವಿಡಿಯೋ ಡೌನ್ಲೋಡ್ ಮಾಡುವುದು, ಯುಎ ಭಾಷಣ ಆಲಿಸುವುದನ್ನು ಯುಎಪಿಎ ಕಾಯ್ದೆಯಡಿ ತರಲು ಆಗುವುದಿಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ತರಲು ಬರುವುದಿಲ್ಲ, ಆರೋಪಿ ಮೊಬೈಲ್ ನಲ್ಲಿ ಐಸಿಸ್ ಬಾವುಟಗಳು, ಐಸಿಸ್(ISIS) ವರ ಭಾಷಣಗಳ ತುಣುಕು ಸಿಕ್ಕಿದೆ ಎಂದ ಮಾತ್ರಕ್ಕೆ ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎಂದು ಹೇಳಲು ಬರುವುದಿಲ್ಲ.
ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಎಲ್ಲೆಡೆ ಸಿಗುತ್ತದೆ. ಇವನ್ನು ಯಾರು ಬೇಕಾದರೂ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟಿನ ಕುರಿತು ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಈಗಾಗಲೇ ಈ ಪ್ರಕರಣ ಸಂಬಂಧ ಹಲವು ಜನರ ವಿರುದ್ಧ ಎನ್ಐಏ ಬಾರ್ಜ್ ಶೀಟ್ ಸಲ್ಲಿಸಿದ್ದು, ರಹಮಾನ್ ಜೊತೆಗೆ ದಿ.ಇದಿನಬ್ಬ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಕೂಡ ಬಂಧಿಸಿತ್ತು. ದೀಪ್ತಿ ಮಾರ್ಲ, ಮಾಜಿ ಶಾಸಕ ಇದಿನಬ್ಬ ಮಗ ಬಿ.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಪತ್ನಿ. ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ದೀಪ್ತಿ ಮಾರ್ಲ, ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ರಾಷ್ಟ್ರೀಯ ತನಿಕಾ ದಳ ಆರೋಪಿಸಿತ್ತು.
ರೆಹಮಾನ್ ವಿರುದ್ಧ ಪೂರಕ ಸಾಕ್ಷ್ಯಗಳು ಸಿಗದ ಹಿನ್ನೆಲೆ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಈ ಪ್ರಕರಣದಲ್ಲಿ ಬಂದಿತಳಾಗಿರುವ ದೀಪ್ತಿ ಮಾರ್ಲ ಎನ್ ಐಎ ವಶದಲ್ಲಿದ್ದಾಳೆ.