Home Entertainment Pooja Hegde: ಮದುವೆ ಆಗದೆ ತಾಯಿಯಾಗಲಿದ್ದಾರಾ ಪೂಜಾ ಹೆಗ್ಡೆ ? : ಪೂಜಾ ಹೆಗ್ಡೆ ಈ...

Pooja Hegde: ಮದುವೆ ಆಗದೆ ತಾಯಿಯಾಗಲಿದ್ದಾರಾ ಪೂಜಾ ಹೆಗ್ಡೆ ? : ಪೂಜಾ ಹೆಗ್ಡೆ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತಾ? : ಇಲ್ಲಿ ನೋಡಿ

Pooja Hegde

Hindu neighbor gifts plot of land

Hindu neighbour gifts land to Muslim journalist

Pooja Hegde: ಒಂದಷ್ಟು ವರ್ಷಗಳ ಮುಂಚೆ ಟಾಲಿವುಡ್ ನ(Tollywood) ಮೋಸ್ಟ್ ವಾಂಟೆಡ್ ಹೀರೋಯಿನ್ ಯಾರು ಎಂದರೆ ಎಲ್ಲರು ಪೂಜಾ ಹೆಗ್ಡೆ(Pooja Hegde) ಹೆಸರು ಹೇಳುತ್ತಿದ್ದರು. ಟಾಲಿವುಡ್ ನ(Tollywood) ಬಹುತೇಕ ಎಲ್ಲಾ ಟಾಪ್ ಹೀರೋಗಳ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಮಹೇಶ್ ಬಾಬು ಜೊತೆ ಮಹರ್ಷಿ, ಪ್ರಭಾಸ್ ಜೊತೆ ರಾಧೆ ಶ್ಯಾಮ್, ಎನ್‌ಟಿಆ‌ರ್ ಎದುರು ಅರವಿಂದ ಸಮೇತ ಮತ್ತು ಅಲ್ಲು ಅರ್ಜುನ್ ಜೊತೆ ಅಲ ವೈಕುಂಠಪುರಂ ಸಿನಿಮಾಗಳು ಪೂಜಾ ಹೆಗ್ಡೆ ಗೆ ದೊಡ್ಡ ಹೆಸರು ತಂದುಕೊಟ್ಟಿದ್ದವು. ಖುಷಿ ಕೊಟ್ಟಿತು. ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ(Tollywood) ಟಾಪ್ ಹೀರೋಯಿನ್ ಆಗಿದ್ದ ಪೂಜಾ ಹೆಗ್ಡೆ(Pooja Hegde) ಇದ್ದಕ್ಕಿದ್ದಂತೆ ಇದೀಗ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: Narendra Modi: ಕೋಟ್ಯಂತರ ಮೌಲ್ಯದ ಆಸ್ತಿ ಘೋಷಣೆ ಮಾಡಿದ ಪ್ರಧಾನಿ – ಕಳೆದ ಸಲಕ್ಕಿಂತ ಮೋದಿ ಆಸ್ತಿ ಹೆಚ್ಚಾದದೆಷ್ಟು ?!

ಅವರ ಚಿತ್ರಗಳಾದ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್, ಸರ್ಕಸ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಅದೇ ಸಮಯದಲ್ಲಿ, ತೆಲುಗಿನಲ್ಲಿ(Tollywood) ಶ್ರೀಲೀಲ ಗೆ ಬೇಡಿಕೆ ಹೆಚ್ಚಾದ ಕಾರಣ ಪೂಜಾ ಹೆಗ್ಡೆಯನ್ನು(Pooja Hegde) ಟಾಲಿವುಡ್(Tollywood) ಸಂಪೂರ್ಣವಾಗಿ ಬದಿಗೆ ಸರಿಸಿದೆ. ಮೇಲಾಗಿ ಗುಂಟೂರು ಕರಂ ಸಿನಿಮಾದಿಂದ ಕೂಡ ಪೂಜಾ ಹೊರಗುಳಿದಿದ್ದರು. ಸದ್ಯ ತೆಲುಗಿನಲ್ಲಿ(Tollywood) ಒಂದೇ ಒಂದು ಸಿನಿಮಾ ಇಲ್ಲದೆ ಪೂಜಾ ಹೆಗಡೆ(Pooja Hegde) ಕಂಗಾಲಾಗಿದ್ದಾರೆ. ಈ ನಡುವೆ ಪೂಜಾ ಹೆಗಡೆ ಇತ್ತೀಚೆಗಷ್ಟೇ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಮದುವೆಯಾಗದೆ ತಾಯಿಯಾಗಬೇಕೆಂದು ಬಯಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: HSRP ಅಳವಡಿಕೆ ಕುರಿತು ಇಲ್ಲಿದೆ ಹಲವು ಮಹತ್ವದ ಮಾಹಿತಿ !!

ಆದರೆ ನಿಜ ಜೀವನದಲ್ಲಿ ಅಲ್ಲಾ, ಬದಲಿಗೆ ಸಿನಿಮಾ ಜೀವನದಲ್ಲಿ. ಬಾಲಿವುಡ್ ಚಿತ್ರವೊಂದರಲ್ಲಿ ಗರ್ಭಿಣಿಯಾಗಿ ನಟಿಸಲು” ಪೂಜಾ ಹೆಗ್ಡೆ(Pooja Hegde) ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ವರದಿಗಳಿವೆ. ಬಾಲಿವುಡ್‌ ಸ್ಟಾರ್ ಡೈರೆಕ್ಟರ್ ಪೂಜಾ ಹೆಗ್ಡೆಗೆ(Pooja Hegde)ಈ ಬಂಪರ್ ಆಫ‌ರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ನಾಯಕಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ದೊಡ್ಡ ಮೊತ್ತದ ಸಂಭಾವನೆ ನೀಡಲು ಮುಂದಾಗಿದ್ದು, ಅವಕಾಶಗಳ ಕೊರತೆಯಿಂದ ನಿಜಕ್ಕೂ ಚಿಂತಾಕ್ರಾಂತರಾಗಿದ್ದ ಪೂಜಾ(Pooja Hegde)ಈ ಚಿತ್ರಕ್ಕೆ ಯೆಸ್ ಅಂದಿದ್ದಾರಂತೆ. ಆದರೆ, ಚಿತ್ರದಲ್ಲಿ ಅವರು ಚಿಕ್ಕ ವಯಸ್ಸಿನ ಪಾತ್ರದಲ್ಲಿ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಪೂಜಾ ಹೆಗ್ಡೆ(Pooja Hegde)ಅವರ ತಾಯಿ ಪಾತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.