English Speaking: Still ಮತ್ತು Till ಪದಗಳ ವ್ಯತ್ಯಾಸ ಏನು, ಅವನ್ನು ಬಳಸುವುದು ಹೇಗೆ ? ಸುಲಭವಾಗಿ ಇಂಗ್ಲಿಷ್ ಕಲಿಯಿರಿ !

“Still” ಮತ್ತು “Till” ಪದಗಳನ್ನು ಬಳಸುವಾಗ ನಮ್ಮಲ್ಲಿ ಹೆಚ್ಚಿನವರು ಗೊಂದಲಕ್ಕೊಳಗಾಗುತ್ತೇವೆ. ಈ ಎರಡೂ ಪದಗಳು ಕೇಳಲು ಒಂದೇ ರೀತಿಯಾಗಿ ಇದ್ದರೂ, ಅವು ವಿಭಿನ್ನ ಅರ್ಥಗಳನ್ನು ಹೊಂದಿದ್ದು ಅವುಗಳನ್ನು ವಿಭಿನ್ನ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ” Still ಅಂದರೆ ಇನ್ನೂ” ಎಂಬುದು ಹಿಂದೆ ಪ್ರಾರಂಭವಾದ ಮತ್ತು ಪ್ರಸ್ತುತದಲ್ಲಿಯೂ ಮುಂದುವರಿಯುತ್ತಿರುವ ಕ್ರಿಯೆ ಅಥವಾ ಘಟನೆಯನ್ನು ಸೂಚಿಸುತ್ತದೆ.
ಆದರೆ till ಅಂದರೆ”ಇಲ್ಲಿಯವರೆಗೆ” ಎಂಬುದು ಸಮಯದವರೆಗೆ ಅಥವಾ ಹೆಚ್ಚಾಗಿ ಒಂದು ಕ್ರಿಯೆ ಅಥವಾ ಘಟನೆ ಮುಗಿದ ಸಮಯವನ್ನು ಸೂಚಿಸುತ್ತದೆ. ಇವತ್ತು ನಾವು “ಇನ್ನೂ” ಮತ್ತು “ವರೆಗೆ” ನಡುವಿನ ವ್ಯತ್ಯಾಸದ ಬಗ್ಗೆ ತಿಳಿಯಲಿದ್ದೇವೆ.
Still ಅಂದರೆ “ಇನ್ನೂ”
Still ಅನ್ನುವ ಪದಕ್ಕೆ ಕನ್ನಡದಲ್ಲಿ “ಇನ್ನೂ” ಅನ್ನುವುದು ಸಮನಾರ್ಥಕ ಪದ.”ಇನ್ನೂ” ಎಂಬ ಪದವನ್ನು ನಾಮಪದ, ಕ್ರಿಯಾವಿಶೇಷಣ, ವಿಶೇಷಣ ಅಥವಾ ಕ್ರಿಯಾಪದದಂತಹ ವಿವಿಧ ರೀತಿಯಲ್ಲಿ ಬಳಸಬಹುದು. ಇದನ್ನು ನಾಮಪದವಾಗಿ ಬಳಸಿದಾಗ, ಅದು ಶಾಂತ ಅಥವಾ ಮೌನ ಎಂದರ್ಥ. ಇದನ್ನು ವಿಶೇಷಣವಾಗಿ ಬಳಸಿದಾಗ, ಅದು ಚಲಿಸುವುದಿಲ್ಲ ಅಥವಾ ಯಾವುದೇ ಶಬ್ದವನ್ನು ಮಾಡದಿರುವುದು ಎಂದರ್ಥ ಕೊಡುತ್ತದೆ (Stand Still). ಇದನ್ನು ಕ್ರಿಯಾವಿಶೇಷಣವಾಗಿ ಬಳಸಿದಾಗ, ಅದು ಮುಂದುವರಿಯುವ ವಿಷಯ ಎಂದರ್ಥ (Still he is working). ಇದನ್ನು ಕ್ರಿಯಾಪದವಾಗಿ ಕೂಡಾ ಬಳಸಬಹುದು ಅನ್ನೋದು ವಿಶೇಷ.
ಕೆಲ ಉದಾಹರಣೆಗಳು ಇಲ್ಲಿವೆ:
Are you still living in Bangalore? ಅಂದರೆ ನೀವು ಇನ್ನೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ ?
Arush is still stuck at Airport (ಆರುಶ್ ಇನ್ನೂ ಏರ್ಪೋರ್ಟಿನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ)
I still didn’t finish the office work (ನಾನಿನ್ನೂ ಆಫೀಸ್ ಕೆಲಸ ಮುಗಿಸಿಲ್ಲ)
Neha is still angry with her colleagues (ನೇಹಾ ತನ್ನ ಸಹೋದ್ಯೋಗಿಗಳ ಮೇಲೆ ಇನ್ನೂ ಕೋಪಗೊಂಡೇ ಇದ್ದಾಳೆ)
I arrived an hour ago and am still waiting for my train
I know you are hurt by his words, but still, can’t you forgive him this time?
Manish stood still after hearing the horrific story (ಆ ಭಯಾನಕ ಕಥೆ ಕೇಳಿ ಮನೀಶ್ ನಿಂತಲ್ಲೇ ನಿಂತುಬಿಟ್ಟ)
Till ಅಂದ್ರೆ”ವರೆಗೆ”
Till ಅಂದ್ರೆ”ವರೆಗೆ” ಎಂಬ ಪದವು ನಿರ್ದಿಷ್ಟ ಸಮಯದವರೆಗೆ ನಡೆದ ಘಟನೆಯನ್ನು ಸೂಚಿಸಲು ಬಳಸಲಾಗುತ್ತದೆ. ಇದು ಹೆಚ್ಚಾಗಿ ಒಂದು ಕ್ರಿಯೆ ಅಥವಾ ಘಟನೆಯನ್ನು ಸೂಚಿಸುತ್ತದೆ.
ಉದಾಹರಣೆಗಳು:
I was with her till noon
We stayed with her till everyone left – ಗಮನಿಸಿ ಸಮಯ ಸೂಚಕ
Can you stay with me till tomorrow?
He waited for her till she achieved her dreams.
Priya worked hard day and night till she succeeded
Add honey and mix again till they get combined properly
ಇದೇ ಪದಗಳಿಗೆ ಕನ್ನಡದಲ್ಲಿ ಅರ್ಥ ನೋಡಿ:
• ನಾನು ಮಧ್ಯಾಹ್ನದವರೆಗೂ ಅವಳೊಂದಿಗೆ ಇದ್ದೆ.
• ಎಲ್ಲರೂ ಹೊರಡುವವರೆಗೂ ನಾವು ಅವಳೊಂದಿಗೆ ಇದ್ದೆವು.
• ನಾಳೆಯವರೆಗೂ ನೀವು ನನ್ನೊಂದಿಗೆ ಇರಬಹುದೇ?
• ಅವಳು ತನ್ನ ಕನಸುಗಳನ್ನು ಸಾಧಿಸುವವರೆಗೂ ಅವನು ಅವಳಿಗಾಗಿ ಕಾಯುತ್ತಿದ್ದನು.
• ಪ್ರಿಯಾ ಅವರು ಯಶಸ್ವಿಯಾಗುವವರೆಗೂ ಹಗಲಿರುಳು ಶ್ರಮಿಸಿದರು.
• ಜೇನುತುಪ್ಪವನ್ನು ಸೇರಿಸಿ ಮತ್ತು ಅವು ಸರಿಯಾಗಿ ಮಿಶ್ರಣವಾಗುವವರೆಗೆ ಮತ್ತೆ ಮಿಶ್ರಣ ಮಾಡಿ.
Leave A Reply

Your email address will not be published.