Bala Jeevan Bhima scheme: ನಿಮಗೆ ಇಬ್ಬರು ಮಕ್ಕಳಿದ್ದಾರೆಯೇ? ಹಾಗಿದ್ರೆ ಪೋಸ್ಟ್ ಆಫೀಸ್ ಕಡೆಯಿಂದ ನಿಮಗಿದೆ ಗುಡ್ ನ್ಯೂಸ್ !!

Bala Jeevan Bhima scheme: ಎಲ್ಲಾ ಹೆತ್ತವರು ಕೂಡ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿರುತ್ತಾರೆ. ಸರ್ಕಾರದ ಯಾವುದಾದರೂ ಒಂದು ಸಂಸ್ಥೆಯಲ್ಲಿ ಹೂಡಿಕೆ ಮಾಡಿ, ಹಣ ಕೂಡಿಟ್ಟು ಮಕ್ಕಳ ಮುಂದಿನ ದಿನಗಳು ಸುಂದರವಾಗಿರಲೆಂದು ಆಶಿಸುತ್ತಾರೆ. ಅಂತೆಯೇ ಇದೀಗ ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಅಂಚೆ ಇಲಾಖೆಯು ಸಖತ್ ಗುಡ್ ನ್ಯೂಸ್ ಕೊಟ್ಟಿದೆ. ಅಂಚೆ ಇಲಾಖೆಯ ಈ ಯೋಜನೆ (Post Office Scheme) ಯಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಮಗೆ ಅನೇಕ ಪ್ರಯೋಜನಗಳು ದೊರೆಯಲಿದೆ.

ಇದನ್ನೂ ಓದಿ: Foods are Banned in India: ಈ 10 ಆಹಾರಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ

ಹೌದು, ಇಂದಿನ ಆಧುನಿಕ ಯುಗದಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿತಾಯ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಹೀಗಾಗಿ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ನೀವು ಮಾಡುವ ಹೂಡಿಕೆ ಭವಿಷ್ಯದ ಭದ್ರತೆ ಕಾಯಲಿದೆ. ಮಕ್ಕಳಿಗೆ ಶಿಕ್ಷಣ, ಮದುವೆ ಹಾಗೂ ಇನ್ನಿತರ ಕೆಲಸ ಕಾರ್ಯ ನಡೆಸಯಲು ಈ ಉಳಿತಾಯ ಯೋಜನೆ ಹೇಳಿಮಾಡಿಸಿದ್ದಾಗಿದೆ. ಅದುವೇ ಬಾಲ ಜೀವನ್ ಬಿಮಾ ಯೋಜನೆ(Bala Jeevan Bhima scheme) !!

ಇದನ್ನೂ ಓದಿ: Snake Bite: ಮನುಷ್ಯನ ರಕ್ತಕ್ಕೆ ಎರಡು ಹನಿ ಹಾವಿನ ವಿಷ ಹಾಕಿದರೆ ಏನಾಗುತ್ತದೆ ಗೊತ್ತಾ? : ಹಾವು ಕಡಿತಕ್ಕೆ ನೀಡುವ ಆ್ಯಂಟಿ ವೆನಮ್ ಹೇಗೆ ತಯಾರಾಗುತ್ತೆ ಗೊತ್ತಾ?

ಏನಿದು ಯೋಜನೆ?

* ಮಕ್ಕಳ ಭವಿಷ್ಯದ ಅಗತ್ಯೆಗಳಿಗಾಗಿ ಭಾರತೀಯ ಅಂಚೆ ಇಲಾಖೆ ತಂದಿರುವ ಯೋಜನೆಯ ಹೆಸರು ಬಾಲ ಜೀವನ್ ಬಿಮಾ ಯೋಜನೆ.

* ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು.. ಅವರ ಆರ್ಥಿಕ ಸಾಮರ್ಥ್ಯದ ಪ್ರಕಾರ, ದಿನಕ್ಕೆ ಕನಿಷ್ಠ ರೂ. 6, ಗರಿಷ್ಠ ರೂ. 18ರ ವರೆಗೆ ಹೂಡಿಕೆ ಮಾಡಬಹುದು.

* ಈ ಯೋಜನೆಯಲ್ಲಿ ದಿನಕ್ಕೆ ಕೇವಲ 6 ರೂಪಾಯಿ ಕಟ್ಟಿದ್ರೆ ಸಾಕು.. ಮೆಚ್ಯೂರಿಟಿ ಸಮಯದಲ್ಲಿ, ಅವರು ಕನಿಷ್ಠ ಒಂದು ಲಕ್ಷ ರೂಪಾಯಿಗಳ ಗ್ಯಾರಂಟಿ ರಿಟರ್ನ್ ಪಡೆಯುತ್ತಾರೆ. ಅದೇ.. 18 ರೂಪಾಯಿ ಕಟ್ಟಿದ್ರೆ 3 ಲಕ್ಷ ರೂಪಾಯಿ ಪಡೆಯಬಹುದು.

* ಇಬ್ಬರು ಮಕ್ಕಳಿಗೆ ದಿನಕ್ಕೆ ರೂ. 36 (ಪ್ರತಿ ರೂ. 18) ಕಟ್ಟಿದ್ರೆ ಮುಕ್ತಾಯದ ಸಮಯದಲ್ಲಿ ಎರಡರ ಒಟ್ಟು ಮೊತ್ತ ರೂ. 6 ಲಕ್ಷದವರೆಗೂ ಸಿಗುವ ಸಾಧ್ಯತೆ ಇದೆ.

ಅರ್ಹತೆ ಏನು?

* ಪಾಲಿಸಿ ಮಾಡಿಸುವವರಿಗೆ 45 ವಯಸ್ಸು ದಾಟಿರಬಾರದು.

ಕುಟುಂಬದಲ್ಲಿ ಇಬ್ಬರು ಮಕ್ಕಳಿಗೆ ಮಾತ್ರವೇ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

* 5-20 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ತೆರೆಯಬಹುದು.

* ಇದರಲ್ಲಿ ಇರುವ ಒಂದು ಅನುಕೂಲತೆ ಏನೆಂದರೆ ಪಾಲಿಸಿ ಮುಗಿಯುವ ಮುನ್ನ ಪಾಲಿಸಿ ಮಾಡುತ್ತಿರುವವರು ಮರಣ ಹೊಂದಿದ್ದರೆ ಆ ಮೊತ್ತ ಅನಂತರ ಕಟ್ಟಬೇಕಿಲ್ಲ ಬಳಿಕ ಮಕ್ಕಳಿಗೆ ಮೆಚ್ಯುರಿಟಿ ಅವಧಿಯಲ್ಲಿ ಈ ಹಣ ಕೂಡ ಸಿಗಲಿದೆ ಎಂದು ಹೇಳಬಹುದು.

ಹೇಗೆ ಹೂಡಿಕೆ ಮಾಡುವುದು?

ನಿಮ್ಮ ಮಗುವಿನ ಹೆಸರಿನಲ್ಲಿ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಬಯಸಿದರೆ, ಮೊದಲು ಹತ್ತಿರದ ಅಂಚೆ ಕಚೇರಿಗೆ ಹೋಗಿ. ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ. ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ಮಗುವಿನ ಬಗ್ಗೆ ಸಂಪೂರ್ಣ ವಿವರಗಳನ್ನು ನಮೂದಿಸಿ. ಜೊತೆಗೆ.. ಪಾಲಿಸಿದಾರರ(ಗಳ) ವಿವರಗಳನ್ನು ಸಹ ಒದಗಿಸಬೇಕು. ಅರ್ಜಿದಾರರ ಗುರುತು, ವಿಳಾಸ ಪುರಾವೆ ಸಲ್ಲಿಸಿ.. ನಂತರ ನಿಮ್ಮ ಮಗುವಿನ ಹೆಸರಿನ ಮೇಲೆ ಖಾತೆ ರೆಡಿಯಾಗುತ್ತದೆ.

ಯೋಜನೆ ಕುರಿತು ಇನ್ನೂ ಹೆಚ್ಚಿನ ವಿವರ:

* ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಪಾಲಿಸಿದಾರರ ವಯಸ್ಸು (ತಾಯಿ ಅಥವಾ ತಂದೆ) 45 ವರ್ಷಗಳನ್ನು ಮೀರಬಾರದು.

* ಪಾಲಿಸಿದಾರನು ಪಾಲಿಸಿಯ ಮುಕ್ತಾಯದ ಮೊದಲು ಮರಣ ಹೊಂದಿದರೆ, ನಂತರ ಪಾಲಿಸಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. 

* ಪಾಲಿಸಿಯ ಅವಧಿಯ ಕೊನೆಯಲ್ಲಿ ಮಕ್ಕಳಿಗೆ ಪೂರ್ಣ ಮೆಚ್ಯೂರಿಟಿ ಮೊತ್ತವನ್ನು ಪಾವತಿಸಲಾಗುತ್ತದೆ.

* ಪೋಷಕರು ಪಾಲಿಸಿ ಪ್ರೀಮಿಯಂ ಪಾವತಿಸಬೇಕು. ಈ ಪಾಲಿಸಿಯಲ್ಲಿ ಯಾವುದೇ ಸಾಲದ ಪ್ರಯೋಜನವಿಲ್ಲ ಎಂದು ಗಮನಿಸಬೇಕು.

* ನೀವು ಮಧ್ಯದಲ್ಲಿ ಪಾಲಿಸಿಯಿಂದ ಹಿಂದೆ ಸರಿಯಲು ಬಯಸಿದರೆ.. 5 ವರ್ಷಗಳ ನಂತರ ಸರೆಂಡರ್ ಆಗುವ ಅವಕಾಶವಿದೆ.

* ರೂ. 1000 ಖಾತರಿ ಮೊತ್ತದ ಮೇಲೆ ಪ್ರತಿ ವರ್ಷ ರೂ. 48 ಬೋನಸ್ ನೀಡುತ್ತಾರೆ.

Leave A Reply

Your email address will not be published.