Anusuya Bharadhwaj: 500ರೂ. ಗೋಸ್ಕರ ಕಾಲೇಜ್ ಡೇಸ್‌ನಲ್ಲೇ ಆ.. ಕೆಲಸ ಮಾಡಿದ್ರಂತೆ ನಟಿ ಅನುಸೂಯ !!

Share the Article

Anusuya Bharadhwaj: ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಹಾಗೂ ಟಿವಿ ಜಗತ್ತಿನ ಜನಪ್ರಿಯ ನಿರೂಪಕಿ ಅನಸೂಯಾ ಭಾರಧ್ವಜ್( Anusuya Bharadhwaj) ಕೆಲ ಸಮಯದ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿ ಸುದ್ದಿಯಾಗಿದ್ರು. ನಟಿ ಬಿಕ್ಕಿ ಬಿಕ್ಕಿ ಅತ್ತರೂ ಕೂಡ ನೆಟ್ಟಿಗರು ಅವರನ್ನು ಬಿಡದೆ ಕಾಲೆಳೆದಿದ್ದರು. ಸದ್ಯ ಇದೀಗ ನಟಿ ತಾನ್ನ ಕಾಲೇಜು ದಿನಗಳನ್ನು ನೆನೆದಿದ್ದಾರೆ.

ತೆಲುಗಿನ ಜನಪ್ರಿಯ ಟಿವಿ ನಿರೂಪಕಿ ಹಾಗೂ ನಟಿ ಅನುಸೂಯ ಬಿಡುವಾದಾಗಲೆಲ್ಲ ಪತಿಯೊಟ್ಟಿಗೆ ವಿದೇಶಕ್ಕೆ ತೆರಳಿ ಸಖತ್ ಎಂಜಾಯ್ ಮಾಡುತ್ತಾರೆ. ಅಲ್ಲಿನ ಫೋಟೋಗಳನ್ನೆಲ್ಲಾ ಪೋಸ್ಟ್ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನಸೂಯಾ ಟಾಲಿವುಡ್‌ನ ಫೇಮಸ್‌ ನಟಿ. ಅಂತೆಯೇ ಇದೀಗ ತನ್ನ ಕಾಲೇಜು ದಿನಗಳನ್ನ ನೆನೆದ ಅನುಸೂಯ ತಾನು 500 ರೂಪಾಯಿಗೆ ಅದೊಂದು ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಲಿಮ್ ಆಗಿ ಕಾಣಬೇಕೇ?ಜಸ್ಟ್ ಅಡುಗೆ ಮನೆಯಲ್ಲಿರುವ ಈ ಸೂಪರ್ ಫುಡ್ ತಿಂದ್ರೆ ಸಾಕು! 

ಹೌದು, ನಟಿ ಅನುಸೂಯಾಗೆ ಕಾಲೇಜು ದಿನಗಳಲ್ಲೇ ಸಿನಿಮಾ ಒಂದಕ್ಕೆ ನಟಿಸುವ ಅವಕಾಶ ಸಿಕ್ಕಿತ್ತಂತೆ. 2003ರಲ್ಲಿ ಎನ್‌ಟಿಆರ್(NTR) ಅಭಿನಯದ ತೆಲುಗಿನ ನಾಗ ಸಿನಿಮಾದಲ್ಲಿ ಅನಸೂಯಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಈ ಇಡೀ ಸಿನಿಮಾದಲ್ಲಿ ಅವರಿಗೆ ಒಂದೇ ಒಂದು ಡೈಲಾಗ್ ಇರಲಿಲ್ಲ. ಒಂದು ದೃಶ್ಯದಲ್ಲಿ ಸುನಿಲ್ ಮಾತನಾಡುವಾಗ ಹಿಂದೆ ಅನಸೂಯಾ ಕಾಣಿಸುತ್ತಾರೆ. ಈ ಪಾತ್ರ ಮಾಡುವಾಗ ಅನಸೂಯಾ ಅವರಿಗೆ ಕೇವಲ 19 ವರ್ಷ. ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅನಸೂಯಾಗೆ ಸಂಭಾವನೆ ರೂಪದಲ್ಲಿ 500 ರೂಪಾಯಿ ಕೊಟ್ಟಿದ್ದರಂತೆ.

ಒಟ್ಟಿನಲ್ಲಿ ಎರಡು ದಶಕದ ಹಿಂದೆ ಜೂನಿಯರ್ ಆರ್ಟಿಸ್ಟ್ ಆಗಿ 500ರೂ ಸಂಭಾವನೆ ಪಡೆದಿದ್ದ ಅನುಸೂಯ ಇಂದು ಲಕ್ಷ ಲಕ್ಷ ಸಂಬಳ ಪಡೆಯುವ ನಟಿಯಾಗಿ, ನಿರೂಪಕಿಯಾಗಿ ಬೆಳೆದುನಿಂತಿದ್ದಾರೆ.

ಇದನ್ನೂ ಓದಿ: IT act section: ಇನ್ಮುಂದೆ ಹೆಚ್ಚಿನ ಮೊತ್ತದ ಸಾಲವನ್ನು ಕ್ಯಾಷ್ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ! ಸೆಕ್ಷನ್ 269ಎಸ್​ಎಸ್ ನಿಯಮ ಜಾರಿ!

Leave A Reply