Mangaluru: ವಿಮಾನ ಪ್ರಯಾಣಿಕನ ಅನುಚಿತ ವರ್ತನೆ; ಸಮುದ್ರಕ್ಕೆ ಹಾರುವುದಾಗಿ ಬೆದರಿಕೆ

Mangaluru: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿ ಜೊತೆ ಅನುಚಿತ ವರ್ತನೆ ಮಾಡಿ, ವಿಮಾನದಿಂದ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದ್ದು, ಈ ಕುರಿತು ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಹಮ್ಮದ್‌ ಬಿ.ಸಿ (24) ಎಂಬುವವರೇ ಈ ರೀತಿಯ ಕೃತ್ಯ ಎಸಗಿದವರು. ಇವರ ವಿರುದ್ಧ ಇದೀಗ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸೆಕ್ಯೂರಿಟಿ ಕೋ ಆಡಿನೇಟರ್‌ ಆಗಿರುವ ಸಿದ್ಧಾರ್ಥದಾಸ್‌ ಬಜಪೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: SSLC ಯ ನಂತರ ಯಾವ ಕೊರ್ಸ್ ಮಾಡಬೇಕು?ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ !

ಮೇ.8 ರಂದು ದುಬೈಯಿಂದ ಬರುತ್ತಿದ್ದ ಮುಹಮ್ಮದ್‌ ಅವರು ವಿನಾಕಾರಣ ತೊಂದರೆಯನ್ನು ತನ್ನ ಸಹ ಪ್ರಯಾಣಿಕರಿಗೆ ನೀಡಿದ್ದು, ಜೊತೆಗೆ ವಿಮಾನ ಸಿಬ್ಬಂದಿಯವರ ಜೊತೆ ಕೂಡಾ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ವಿಮಾನದಿಂದ ಸಮುದ್ರಕ್ಕೆ ಹಾರುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Actress Jyoti Rai: ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಟಿ ಜ್ಯೋತಿ ರೈ ಆರ್ಥಿಕ ಸಹಾಯ

Leave A Reply

Your email address will not be published.